– ಕುಟುಂಬವೇ ಅಳಿದುಹೋಯ್ತು
– ಕೊನೆಗೂ ತಿಳಿಯಲಿಲ್ಲ ಕುಟುಂಬದವರ ಸಾವಿನ ಸುದ್ದಿ
ನವದೆಹಲಿ: ಮಾಳವೀಯ ನಗರದ ಹೋಟೆಲ್‌ವೊಂದರಲ್ಲಿ ಕಳೆದ ವಾರ ಸಂಭವಿಸಿದ್ದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದರು. ಇದೀಗ ಆ ಕುಟುಂಬದ ಏಕೈಕ ಸದಸ್ಯ 80 ವರ್ಷದ ರಾಧೇ ಶ್ಯಾಮ್ ಅಗರ್ವಾಲ್ ಕೂಡ ಮೃತಪಟ್ಟಿದ್ದಾರೆ.
ರಾಧೇ ಶ್ಯಾಮ್ ಅಗರ್ವಾಲ್ ಅವರು ಸಾಕೇತ್ ಪ್ರದೇಶದಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಅವರು ಐಸಿಯುನಲ್ಲಿ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಕುಟುಂಬದ ಸದಸ್ಯರು ಆಸ್ಪತ್ರೆಯ ಸಮೀಪದಲ್ಲೇ ಇರುವ ಫ್ಲೋರಿಶ್ ಇನ್ ಹೋಟೆಲ್‌ನಲ್ಲಿ ತಂಗಿದ್ದರು.
ಆದರೆ, ಕಳೆದ ವಾರ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ರಾಧೇ ಶ್ಯಾಮ್ ಅವರ ಪುತ್ರ ವಿವೇಕ್ ಅಗರ್ವಾಲ್, ಪತ್ನಿ ಪ್ರೇಮ್ ಲತಾ ಅಗರ್ವಾಲ್, ಸೊಸೆ ತರ್ಜನಿ ಅಗರ್ವಾಲ್, ಮೊಮ್ಮಕ್ಕಳಾದ ಜಿವಿಷಾ ಮತ್ತು ವರ್ಯಾ ಸೇರಿದಂತೆ ಒಟ್ಟು ೮ ಮಂದಿ ಸಾವನ್ನಪ್ಪಿದ್ದರು.ಇದನ್ನೂ ಓದಿ: ನಕಲಿ ಸಹಿ ಹಗರಣ; ದೀದಿ ಮನೆ ಮೇಲೆ ಸಿಐಡಿ ದಾಳಿ
ಕುಟುಂಬದ ಸದಸ್ಯರು ಮೃತಪಟ್ಟಿರುವ ವಿಚಾರವನ್ನು ಆಸ್ಪತ್ರೆಯಲ್ಲಿದ್ದ ರಾಧೇ ಶ್ಯಾಮ್ ಅವರಿಗೆ ತಿಳಿಸಿರಲಿಲ್ಲ. ಮನೆಯವರು ಯಾಕೆ ಭೇಟಿಗೆ ಬರುತ್ತಿಲ್ಲ ಎಂದು ಅವರು ಪದೇ ಪದೇ ಕೇಳುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತ ಜಿವಿಷಾ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ತನ್ನ ತಾತನನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದಳು. ಆದರೆ ತಾತನನ್ನು ಕೊನೆಯ ಬಾರಿ ನೋಡುವ ಆಸೆ ದುರಂತದಲ್ಲಿ ಅಂತ್ಯ ಕಂಡಿತು.
ಇದೀಗ ರಾಧೇ ಶ್ಯಾಮ್ ಅವರೂ ಸಾವನ್ನಪ್ಪಿದ್ದು, ಗುರುಗ್ರಾಮದ ಸೆಕ್ಟರ್ 49ರಲ್ಲಿರುವ ಕುಟುಂಬದ ಮನೆ ಸಂಪೂರ್ಣ ಖಾಲಿಯಾಗಿದೆ. ಒಂದೇ ವಾರದಲ್ಲಿ ಅಗರ್ವಾಲ್ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡ ಈ ಘಟನೆ ಕುಟುಂಬದ ಸಂಬAಧಿಕರು ಮತ್ತು ಆಪ್ತರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.ಇದನ್ನೂ ಓದಿ: ಕನ್ನಡದಲ್ಲಿ ಮಾತಾಡಿದ್ರೆ ಬೇರೆ ರೀತಿ ವರ್ತನೆ ಮಾಡ್ತಾರೆ – ಕೊಟ್ಟಿಯೂರು ಸಿಬ್ಬಂದಿ ದುರ್ವರ್ತನೆ ಬಿಚ್ಚಿಟ್ಟ ಯುವಕ
