ನವದೆಹಲಿ: ರೀಲ್ಸ್ ಮಾಡಲು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು 15 ವರ್ಷದ ಅಪ್ರಾಪ್ತ ಬಾಲಕನೋರ್ವ ಮಹಿಳೆಯ ಕತ್ತು ಸೀಳಿ ಮೊಬೈಲ್ ಫೋನ್ ಕದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
Advertisement
ಜೂನ್ 1 ರಂದು ಈ ಘಟನೆ ನಡೆದಿದ್ದು, ಸಾಕೇತ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆ ಮೇಲೆ ಹಿಂದಿನಿಂದ ದಾಳಿ ನಡೆಸಿದ ಬಾಲಕ ಆಕೆಯ ಫೋನ್ ಕದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ದಾರಿಹೋಕರು ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್
Advertisement
Advertisement
ಇದೀಗ ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸುಮಾರು 100 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶೂ ಮೇಲಿದ್ದ ಲೋಗೋ ಗಮನಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ಬಾಲಕ ತನ್ನ ಫೋನ್ ಕಳೆದುಹೋಗಿತ್ತು. ಹಾಗಾಗಿ ರೀಲ್ಸ್ ಮಾಡಲು ಹೊಸ ಫೋನ್ ಅಗತ್ಯವಿತ್ತು ಎಂದು ಸತ್ಯ ಬಹಿರಂಗಪಡಿಸಿದ್ದಾನೆ. ಇದನ್ನೂ ಓದಿ: ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ – ಬಿಜೆಪಿಗೆ ಕಾಂಗ್ರೆಸ್ ಸವಾಲು