Bengaluru CityKarnatakaLatestMain Post

ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ – ಬಿಜೆಪಿಗೆ ಕಾಂಗ್ರೆಸ್‌ ಸವಾಲು

-‌ ಎಸ್.ಟಿ ಸೋಮಶೇಖರ್ ಅಕ್ರಮದ ವಿರುದ್ಧ ಪ್ರಧಾನಿಗೆ ಪತ್ರ

– ಸಿಎಂ ಮೇಲೆಯೇ ಸರ್ಜಿಕಲ್ ಸ್ಟ್ರೈಕ್
– ಬಿಜೆಪಿಯ ಭ್ರಷ್ಟೋತ್ಸವ ಮಾತ್ರ ಅಡೆತಡೆಯಿಲ್ಲದೆ ಸಾಗುತ್ತಿದೆ

ಬೆಂಗಳೂರು: ಬಿಜೆಪಿಯ ಜನೋತ್ಸವ ಮುಂದೂಡಿಕೆಯ ಮೇಲೆ ಮುಂದೂಡಿಕೆಯಾಗುತ್ತಿದೆ, ಆದರೆ ಬಿಜೆಪಿ ಭ್ರಷ್ಟೋತ್ಸವ ಮಾತ್ರ ಅಡೆತಡೆಯಿಲ್ಲದೆ ಸಾಗುತ್ತಿದೆ. ಮಾಧುಸ್ವಾಮಿಯವರ ರಾಜೀನಾಮೆ ಕೇಳಿದ ಎಸ್.ಟಿ ಸೋಮಶೇಖರ್ ಅವರ ಅಕ್ರಮದ ವಿರುದ್ಧ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಇಂತಹ ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಬಿಜೆಪಿಗೆ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸವಾಲು ಹಾಕಿದೆ.

ಟ್ವೀಟ್‍ನಲ್ಲಿ ಏನಿದೆ?
ಬಿಜೆಪಿಯ ಜನೋತ್ಸವ ಮುಂದೂಡಿಕೆಯ ಮೇಲೆ ಮುಂದೂಡಿಕೆಯಾಗುತ್ತಿದೆ, ಆದರೆ ಬಿಜೆಪಿ ಭ್ರಷ್ಟೋತ್ಸವ ಮಾತ್ರ ಅಡೆತಡೆಯಿಲ್ಲದೆ ಸಾಗುತ್ತಿದೆ. ಮಾಧುಸ್ವಾಮಿಯವರ ರಾಜೀನಾಮೆ ಕೇಳಿದ ಎಸ್.ಟಿ ಸೋಮಶೇಖರ್ ಅವರ ಅಕ್ರಮದ ವಿರುದ್ಧ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಈಗ ಯಾರ ರಾಜೀನಾಮೆ ಪಡೆಯುವಿರಿ ಬೊಮ್ಮಾಯಿ ಅವರೇ? ಮಾಧುಸ್ವಾಮಿಯವರದ್ದೋ, ಸೋಮಶೇಖರ್‍ರದ್ದೋ? ಬಿಜೆಪಿಯ ಮ್ಯಾನೇಜ್‌ಮೆಂಟ್ ಸರ್ಕಾರದಲ್ಲಿ ಸಿಎಂ ಒಂದೇ ವರ್ಷದ ಅವಧಿಯಲ್ಲಿ 12 ಭಾರಿ ದೆಹಲಿಗೆ ಹೋದರೂ ಸಂಪುಟ ವಿಸ್ತರಣೆ ಮಾಡಲಾಗಲಿಲ್ಲ. ಸಿಎಂ ಸಂಪುಟ ಸರ್ಜರಿಗೆ ಕಸರತ್ತು ನಡೆಸುತ್ತಿದ್ದರೆ, ಸ್ಥಾನ ವಂಚಿತರು ಸಿಎಂ ಮೇಲೆಯೇ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದಾರೆಯೇ? ಇದನ್ನೂ ಓದಿ: ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈ ಈಗ ಟಾಪ್‌ 5 ನಾಯಕ

ಇಷ್ಟು ಬೇಗ ನೆರೆ ಸಂತ್ರಸ್ತರನ್ನು ಮರೆಯಿತೇ ಸರ್ಕಾರ? ಸುರೇಶ್ ಗೌಡರ ಸಿಎಂ ಬದಲಾವಣೆ ಹೇಳಿಕೆ ಬೆನ್ನಲ್ಲೇ ‘3ನೇ ಸಿಎಂ’ ಕುರ್ಚಿಗೆ ಜಗದೀಶ್ ಶೆಟ್ಟರ್ ಸೇರಿ ಹಲವರು ಟವೆಲ್ ಹಾಕುತ್ತಿದ್ದಾರೆ. ಆದರೆ ಮುರುಗೇಶ್ ನಿರಾಣಿಯವರು ಸಿಎಂ ಕುರ್ಚಿಗೆ ಟವೆಲ್ ಬದಲಿಗೆ ಪೋಸ್ಟರನ್ನೇ ಅಂಟಿಸಿದ್ದಾರೆ! ಮ್ಯಾನೇಜ್‍ಮೆಂಟ್ ಸರ್ಕಾರದ ಹೊಸ ಮ್ಯಾನೇಜರ್ ಹುದ್ದೆಗೆ 2,500 ಕೋಟಿಯ ಚೌಕಾಸಿ ನಡೆಯುತ್ತಿದೆಯೇ? 40% ಸರ್ಕಾರದಲ್ಲಿ ವೈಫಲ್ಯಗಳ ಮೂಟೆ ಹೊತ್ತಿರುವ ಸಚಿವರುಗಳು ಪರಸ್ಪರ ರಾಜೀನಾಮೆ ಕೇಳುತ್ತಿದ್ದಾರೆ. ಎಸ್.ಟಿ ಸೋಮಶೇಖರ್ ಅವರೇ, ಮೊದಲು ರಾಜೀನಾಮೆ ಕೊಡಬೇಕಾದವರು ನೀವೇ ಅಲ್ಲವೇ? ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸುಲಿಗೆ ತಡೆಯುವ ಕನಿಷ್ಠ ಕಾಳಜಿ ಇಲ್ಲದಿರುವುದೇಕೆ? ಮಾಹಿತಿ ಸಿಕ್ಕ ನಂತರವೂ ಸುಮ್ಮನಿದ್ದಿದೇಕೆ? ಅದರಲ್ಲೂ 40% ಕಮಿಷನ್ ಇತ್ತೇ? ಇದನ್ನೂ ಓದಿ: ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ: ಮಾಧುಸ್ವಾಮಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಸೊಗಡು ಶಿವಣ್ಣ Vs ಜಿ.ಎಸ್ ಬಸವರಾಜ್, ರೇಣುಕಾಚಾರ್ಯ Vs ಕೆ.ಸುಧಾಕರ್, ಸೋಮಶೇಖರ್ Vs ಮಾಧುಸ್ವಾಮಿ, ಮುನಿರತ್ನ Vs ಮಾಧುಸ್ವಾಮಿ, ಅಶೋಕ್ Vs ಅಶ್ವಥ್‌ನಾರಾಯಣ, ಭಗವಂತ್ ಖೂಬಾ Vs ಶರಣು ಸಲಗರ, ಕಾರ್ಯಕರ್ತರು Vs ಬಿಜೆಪಿ, ಆರಗ ಜ್ಞಾನೇಂದ್ರ Vs ಯತ್ನಾಳ್, BSY vs ಸಂತೋಷ್ ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?! ಸಿಎಂ ಬದಲಾಗುತ್ತಾರೆ ಎನ್ನುತ್ತಾರೆ ಸುರೇಶ್ ಗೌಡ. ಸ್ಟ್ರಾಂಗ್ ಗೃಹಸಚಿವರು ಬೇಕು ಎನ್ನುತ್ತಾರೆ ಯತ್ನಾಳ್. ಮಾಧುಸ್ವಾಮಿ ರಾಜೀನಾಮೆ ಕೊಡಬೇಕು ಎನ್ನುತ್ತಾರೆ ಮುನಿರತ್ನ. ಸಿಎಂ ಹೇಳಿದ್ರೆ ಕೊಡ್ತೀನಿ ಅಂತಾರೆ ಮಾಧುಸ್ವಾಮಿ. ಇಂತಹ ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

Live Tv

Leave a Reply

Your email address will not be published.

Back to top button