ನವದೆಹಲಿ: ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ (Vijender Gupta) ಅವರಿಗೆ (ಸೆ.8) ಬಾಂಬ್ ಬೆದರಿಕೆ (Bomb Threat) ಇಮೇಲ್ ಬಂದಿದೆ.
ಇಂದು ಬೆಳಿಗ್ಗೆ 8:39ರ ಸುಮಾರಿಗೆ ಸ್ಪೀಕರ್ ಅವರ ಅಧಿಕೃತ ಇಮೇಲ್‌ಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಅದರಲ್ಲಿ ವಿಧಾನಸಭೆಯಲ್ಲಿ ಬಾಂಬ್ ಇರಿಸಿ, ಸ್ಫೋಟಿಸಲಾಗುವುದು ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹದೇವಪ್ಪಣ್ಣ ನನಗೆ ತಂದೆ ಸಮಾನ, ಅವರೇ ಆ ಮನೆಯಲ್ಲಿರಲಿ: ಬೈರತಿ ಸುರೇಶ್
ಕೂಡಲೇ ದೆಹಲಿ ಪೊಲೀಸರಿಗೆ (Delhi Police) ಮಾಹಿತಿ ನೀಡಲಾಗಿದ್ದು, ಕೂಡಲೇ ವಿಧಾನಸಭೆಯ ಆವರಣಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ತ್ರೀವ ಪರಿಶೀಲನೆ ಬಳಿಕ ಸ್ಥಳದಲ್ಲಿ ಯಾವುದೇ ಅನುಮಾನಾಸ್ವಪದ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಖಲಿಸ್ತಾನಿ ಸಂಘಟನೆಯು ಈ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದೆ ಎಂದು ಶಂಕಿಸಲಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಭಾರತದಲ್ಲೇ ನಿರ್ಮಿತ ಬುಲೆಟ್ ರೈಲಿನ ಬಾಡಿ ಫ್ರೇಮ್ ಸಿದ್ಧ – ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ದೆಹಲಿ ವಿಧಾನಸಭೆ ಸ್ಪೀಕರ್ ಅವರಿಗೆ ಬಾಂಬ್ ಬೆದರಿಕೆ ಮೇಲ್ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಇದೇ ಮಾರ್ಚ್ ತಿಂಗಳಲ್ಲಿಯೂ ಅವರಿಗೆ ಬಾಂಬ್ ಬೆದರಿಕೆ ಬಂದಿತ್ತು. ಅಲ್ಲದೇ ಬಜೆಟ್ ಅಧಿವೇಶನದ ಸಮಯದಲ್ಲಿಯೂ ಸೆಕ್ರೆಟರಿಯೇಟ್ ಮತ್ತು ಸ್ಪೀಕರ್ ಕಚೇರಿಗೆ ಸುಮಾರು ಏಳರಿಂದ ಎಂಟು ಬಾರಿ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಈಗಾಗಲೇ ಹಲವು ಬಾರಿ ಬಾಂಬ್ ಬೆದರಿಕೆ ಮೇಲ್ ಬಂದಿರುವುದರಿಂದ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಝೆಡ್ ವರ್ಗದ ಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು – ಪ್ರಿಯಕರನಿಂದ ಕೊಲೆ ಶಂಕೆ
