ಯಾವುದೇ ಫಿಲ್ಟರ್ ಇಲ್ಲದೇ ಪ್ರಶ್ನೆಗಳಿಗೆ ಉತ್ತರಿಸುವ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ದಿನವೂ ಸುದ್ದಿಯಾಗುತ್ತಿದೆ. ಈಗಾಗಲೇ ಹಲವು ಕಂತುಗಳ ಚಿತ್ರೀಕರಣ ಕೂಡ ನಡೆದಿದ್ದು, ಅವುಗಳ ಪ್ರೋಮೋವನ್ನು ಪ್ರಚಾರಕ್ಕಾಗಿ ಪ್ರಸಾರ ಮಾಡಲಾಗುತ್ತಿದೆ. ಅಚ್ಚರಿಯ ಸಂಗತಿ ಅಂದರೆ, ಒಂದು ಕಂತಿನಲ್ಲಿ ರಣಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಎಪಿಸೋಡ್ ನ ಪ್ರೋಮೋ ಸಖತ್ ವೈರಲ್ ಆಗಿದೆ.
Advertisement
ಆಲಿಯಾ ಭಟ್ ಅವರನ್ನು ಕರಣ್ ಜೋಹರ್ ಮದುವೆ ಬಗ್ಗೆ ಕೇಳುತ್ತಾರೆ. ಮದುವೆಯ ಮೊದಲನೇ ದಿನ ಹೇಗಿತ್ತು? ಎಂದು ಪ್ರಶ್ನೆ ಮಾಡುತ್ತಾರೆ. ಮೊದಲ ರಾತ್ರಿಯ ಬಗ್ಗೆಯೂ ಅವರು ಪ್ರಸ್ತಾಪಿಸುತ್ತಾರೆ. ಈ ಕುರಿತು ಬೋಲ್ಡ್ ಆಗಿಯೇ ಮಾತನಾಡಿರುವ ಆಲಿಯಾ ಭಟ್ ‘ಮದುವೆಯ ದಿನ ತುಂಬಾ ಸುಸ್ತಾಗಿರುತ್ತೇವೆ. ಅವತ್ತು ಫಸ್ಟ್ ನೈಟ್ ಕಷ್ಟ’ ಎಂದು ಹೇಳಿಕೊಳ್ಳುತ್ತಾರೆ. ಈ ಅಚ್ಚರಿಯ ಉತ್ತರವನ್ನು ಕೇಳಿದ ಕರಣ್, ಇದೇ ಪ್ರಶ್ನೆಯನ್ನು ರಣವೀರ್ ಸಿಂಗ್‍ಗೂ ಕೇಳುತ್ತಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
Advertisement
Advertisement
ರಣವೀರ್ ಸಿಂಗ್ ಕೂಡ ಮೊದಲ ರಾತ್ರಿಯ ಬಗ್ಗೆ ಅಷ್ಟೇ ಬೋಲ್ಡ್ ಆಗಿ ಮಾತನಾಡಿದ್ದು, ನಾನು ಫಸ್ಟ್ ನೈಟ್ ಗಾಗಿ ಕಾಯುತ್ತಿದ್ದೆ. ತುಂಬಾ ಸ್ಟ್ರಾಂಗ್ ಆಗಿದ್ದೆ. ನನಗೇನೂ ಹಾಗೆ ಅನಿಸಿಲ್ಲ. ಮದುವೆ ದಿನದ ರಾತ್ರಿಗೆ ಮತ್ತಷ್ಟು ಉತ್ಸುಕತೆಯಿಂದ ಕಾಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ರಣವೀರ್ ಮಾತು ಸಖತ್ ವೈರಲ್ ಕೂಡ ಆಗಿದೆ. ಆಲಿಯಾ ಮತ್ತು ರಣವೀರ್ ಮಾತುಗಳನ್ನು ಟ್ರೋಲ್ ಮಾಡಲಾಗುತ್ತಿದೆ.