ದಾವಣಗೆರೆ: ಅಮೆರಿಕದಲ್ಲಿ (America) ದಾವಣಗೆರೆ (Davanagere) ಮೂಲದ ದಂಪತಿ ನಿಗೂಢ ಸಾವಿನ ವಿಚಾರ ಇದೀಗ ಬಹಿರಂಗಗೊಂಡಿದ್ದು, ಪುತ್ರ ಹಾಗೂ ಪತ್ನಿಯನ್ನು ಗುಂಡಿಕ್ಕಿ (Shot) ಕೊಂದು ಬಳಿಕ ಪತಿಯೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಹೊರ ಬಿದ್ದಿದೆ.
ಮೃತ ಯೋಗೇಶ್ ಹೊನ್ನಾಳ ದಾವಣಗೆರೆ ಜಿಲ್ಲೆಯ ಜಗಳೂರು (Jagaluru) ತಾಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದು, ಎಂಜಿನಿಯರ್ (Engineer) ಪದವಿ ಪಡೆದಿದ್ದರು. ಪತ್ನಿ ಪ್ರತಿಭಾ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 9 ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಗೆ ಯಶ್ ಎಂಬ 6 ವರ್ಷದ ಮಗ ಕೂಡಾ ಇದ್ದ. ಇಬ್ಬರ ಬದುಕು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ದಂಪತಿ ಯಾರೂ ಮನೆಯಿಂದ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆ ಬಳಿ ಬಂದು ಗಮನಿಸಿದಾಗ ಪೊಲೀಸರಿಗೆ ಮೂವರು ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಬೆಂಗಳೂರಿನಲ್ಲಿ (Bengaluru) ಇದ್ದ ಯೋಗೇಶ್ ಸಹೋದರನಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸಹೋದರ ದಾವಣಗೆರೆಯ ವಿದ್ಯಾನಗರದಲ್ಲಿ ವಾಸವಾಗಿರುವ ಯೋಗೇಶ್ ತಾಯಿ ಶೋಭಾ ಮತ್ತು ಪ್ರತಿಭಾಳ ತಂದೆ ಅಮರ್‌ನಾಥ್‌ಗೆ ವಿಷಯ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಪುಟ್ಟ ಬಾಲಕನನ್ನು ನೆಲಕ್ಕೆ ಬಡಿದು ಕೊಂದ ಖಾವಿಧಾರಿ
Advertisement
Advertisement
ಆದರೆ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರಾಥಮಿಕ ಹೇಳಿಕೆ ಬಿಡುಗಡೆ ಮಾಡಿದ್ದು, ಪತಿ ಮತ್ತು ಪತ್ನಿಯ ನಡುವಿನ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ. ಪುತ್ರ ಯಶ್ ಹಾಗೂ ಪತ್ನಿ ಪ್ರತಿಭಾಳ ಹತ್ಯೆ ನಡೆಸಿ ನಂತರ ಪತಿ ಯೋಗೇಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ. ಆಗಸ್ಟ್ 15ರಂದು ರಾತ್ರಿ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದ್ದು, ಆಗಸ್ಟ್ 18ರಂದು ಬಾಲ್ಟಿಮೋರ್ ಪೊಲೀಸರಿಂದ ಘಟನೆ ಕುರಿತು ಮಾಹಿತಿ ಹೊರಬಿದ್ದಿತ್ತು. ಇದನ್ನೂ ಓದಿ: ಶಾಲೆಯಿಂದಲೇ ಬಾಲಕಿಯ ಅಪಹರಣಕ್ಕೆ ಯತ್ನ – ಪ್ರಕರಣ ದಾಖಲು
Advertisement
ಮೂರು ಜನರ ಮೃತದೇಹವನ್ನು ದಾವಣಗೆರೆಗೆ ತರಿಸಬೇಕು ಎಂದು ಯೋಗೇಶ್ ತಾಯಿ ಶೋಭಾ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಇವರ ಮನವಿಯನ್ನು ವಿದೇಶಾಂಗ ಸಚಿವಾಲಯಕ್ಕೆ ರವಾನೆ ಮಾಡಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಕುಟುಂಬದ ಕೋರಿಕೆ ಮೇರೆಗೆ ಅಮೆರಿಕದಲ್ಲಿರುವ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಜನರಲ್ ವರುಣ್ ಅವರನ್ನು ಆನ್‌ಲೈನ್ ಮುಖಾಂತರ ಸಂಪರ್ಕ ಮಾಡಿದ್ದೇವೆ. ಅಲ್ಲದೇ ಕೌನ್ಸಿಲ್ ಮಾಹಿತಿ ರವಾನೆ ಮಾಡಲಾಗಿದೆ. ಮೃತದೇಹವನ್ನು ದಾವಣಗೆರೆಗೆ ತರುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಕುಡಿಯಲು ಶಿಕ್ಷಕ ಹಣ ಕೇಳ್ತಾನೆ.. ವಾಚ್‍ಮ್ಯಾನ್‍ನಿಂದ ಕಿರುಕುಳ – ಪೊಲೀಸ್ ಕಮಿಷನರ್‌ಗೆ ವಿದ್ಯಾರ್ಥಿನಿಯರ ಪತ್ರ
Advertisement
ಸ್ಥಳೀಯ ಪೊಲೀಸರು ಅಸ್ವಾಭಾವಿಕ ಸಾವು ಎಂದು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಮಯಾವಕಾಶ ಬೇಕಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ತರಬೇಕಾ ಅಥವಾ ಅಲ್ಲಿಯೇ ಅಂತ್ಯಕ್ರಿಯೆ ಮಾಡಬೇಕೇ ಎಂಬ ಕುರಿತು ಕುಟುಂಬಸ್ಥರ ಜೊತೆ ಚರ್ಚೆ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಎಂದ ಬಳಿಕ ಎಲ್ಲಾ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿ ಎರಡು ಗಂಟೆಗೊಮ್ಮೆ ಅಮೆರಿಕ ಕೌನ್ಸಿಲ್ ಸಂಪರ್ಕದ್ದಲ್ಲಿದ್ದು, ಲೋಕಲ್ ರೂಲ್ಸ್ ಫಾಲೋ ಮಾಡಲಾಗುತ್ತಿದೆ. ಜಿಲ್ಲಾಡಳಿತ ಸಂಪೂರ್ಣ ಸ್ಪಂದನೆ ಮಾಡುತ್ತಿದೆ ಎಂದು ತಿಳಿಸಿದ್ದು, ಯೋಗೇಶ್ ಅವರ ನಿವಾಸಕ್ಕೆ ಹೋಗಿ ಅವರ ಕುಟುಂಬಸ್ಥರನ್ನು ಭೇಟಿ ನೀಡಿ ಧೈರ್ಯ ಹೇಳಿದ್ದಾರೆ. ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಯುವತಿ ಸಾವು – ತಂದೆಯಿಂದಲೇ ಮರ್ಯಾದಾ ಹತ್ಯೆಯ ಆರೋಪ
Web Stories