ಲಕ್ನೋ: 5 ವರ್ಷದ ಬಾಲಕನನ್ನು ಖಾವಿಧಾರಿಯೊಬ್ಬ ನೆಲಕ್ಕೆ ಬಡಿದು ಕೊಂದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿ ಪದೇ ಪದೇ ಮಗುವನ್ನು ನೆಲಕ್ಕೆ ಬಡಿಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಹತ್ಯೆಗೈದ ಆರೋಪಿಯನ್ನು ಓಂಪ್ರಕಾಶ್ (52) ಎಂದು ಗುರುತಿಸಲಾಗಿದೆ. ಆರೋಪಿ ಸಪ್ತಕೋಸಿ ಯಾತ್ರೆಗೆ ತೆರಳುತ್ತಿದ್ದ. ಈ ವೇಳೆ ಮಾರ್ಗದಲ್ಲಿ ಎದುರಾದ ಬಾಲಕನನ್ನು ಹತ್ಯೆ ಮಾಡಿದ್ದಾನೆ. ಹತ್ಯೆಯ ಹಿಂದಿನ ಕಾರಣ ತಿಳಿದುಬಂದಿಲ್ಲ. ಹತ್ಯೆಗೀಡಾದ ಬಾಲಕನ ತಂದೆ ಅಂಗಡಿಯೊಂದನ್ನು ನಡೆಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡಿ. ದೇವರಾಜ ಅರಸು ನೆಚ್ಚಿನ ಬೆಂಝ್ ಕಾರಿನಲ್ಲಿ ಸಿಎಂ ಸಿಟಿ ರೌಂಡ್ಸ್
Advertisement
Advertisement
ಘಟನೆಯ ಬಳಿಕ ಸ್ಥಳೀಯರು ಆಕ್ರೋಶಗೊಂಡು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಘಟನೆಯ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಸಿಸಿ ಕ್ಯಾಮೆರಾಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಂಡೇ ಸ್ಪೆಷಲ್ – ಕಾಫಿನಾಡಲ್ಲಿ 340 Kg ಅಂಬೂರು ಮೀನು, ಖರೀದಿಗೆ ಮುಗಿಬಿದ್ದ ಮತ್ಸ್ಯಪ್ರಿಯರು
Web Stories