ದೆಹಲಿಯ ವಿಗ್ಯಾನ್ ಭವನದಲ್ಲಿ ಇಂದು ನಡೆಯುತ್ತಿರುವ 68ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ನ ಖ್ಯಾತ ನಟಿ ಆಶಾ ಪರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ (Dada Saheb Phalke) ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಂದ ಆಶಾ ಪ್ರಶಸ್ತಿ ಸ್ವೀಕರಿಸಿ ಸಂಭ್ರಮವನ್ನು ಹಂಚಿಕೊಂಡರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement
ಭಾರತೀಯ ಸಿನಿಮಾ ರಂಗದ ಹೆಸರಾಂತ ನಟಿ, ಒಂದು ಕಾಲದಲ್ಲಿ ಬಾಲಿವುಡ್ ಕ್ವೀನ್ ಎಂದೇ ಖ್ಯಾತರಾಗಿದ್ದ ಆಶಾ ಪರೇಖ್ (Asha Parekh) ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಈ ಅತ್ಯುನ್ನತ ಗೌರವವನ್ನು ‘ದಾದಾ ಸಾಹೇಬ್ ಫಾಲ್ಕೆ’ ಹೆಸರಿನಲ್ಲಿ ಕೊಡಲಾಗಿದೆ. ಕಳೆದ ಬಾರಿ ಈ ಗೌರವವು ರಜನಿಕಾಂತ್ ಅವರಿಗೆ ಸಂದಿತ್ತು. ಈ ಬಾರಿ ಆಶಾ ಅವರಿಗೆ ದೊರೆತಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿಕೆಯನ್ನು ಎಎನ್ಐ ಸಂಸ್ಥೆಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ:ಐಶ್ವರ್ಯ ಪಿಸ್ಸೆಗೆ ಐ ಲವ್ ಯೂ ಎಂದ ಸೈಕ್ ನವಾಜ್
Advertisement
Advertisement
1952ರಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಆಶಾ ಪರೇಖ್, ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ದಿಲ್ ದೇಕೆ ದೇಖೋ ಇವರು ನಾಯಕಿಯಾಗಿ ನಟಿಸಿದ್ದ ಮೊದಲ ಸಿನಿಮಾ. ಆಂದೋಲನ್ ಸಿನಿಮಾದಲ್ಲಿ ಕೊನೆಯ ಬಾರಿಗೆ ನಟಿಸಿ, ಅಲ್ಲಿಂದ ಸಿನಿಮಾ ರಂಗದಿಂದಲೇ ದೂರವಾದವರು. 79ರ ವಯಸ್ಸಿನ ಈ ನಟಿ ಇವತ್ತಿಗೂ ಸಿನಿಮಾ ರಂಗದ ಬಗ್ಗೆ ಅಷ್ಟೇ ಪ್ರೀತಿ, ಒಲವು ಇಟ್ಟುಕೊಂಡಿದ್ದಾರೆ.
Advertisement
ಭಾರತದ ಅತ್ಯುನ್ನತ ಸಿನಿಮಾ ಪ್ರಶಸ್ತಿಯಾಗಿರುವ ಈ ಗೌರವವು ಕನ್ನಡದ ಡಾ.ರಾಜ್ ಕುಮಾರ್ (Raj Kumar) ಅವರಿಗೂ ದೊರೆತಿದೆ. ಅಲ್ಲದೇ, ವಿನೋದ್ ಖನ್ನಾ, ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ದಿಗ್ಗಜರು ಈ ಗೌರವವಕ್ಕೆ ಪಾತ್ರರಾಗಿದ್ದಾರೆ.