Bengaluru CityCinemaKarnatakaLatestMain PostSandalwood

ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

ಬಿಗ್ ಬಾಸ್ (Bigg Boss House) ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಪ್ರೇಮ ಕಥೆಗಳು ಶುರುವಾಗುತ್ತೆ. ಓಟಿಟಿಯಲ್ಲಿ ಶುರುವಾಗಿದ್ದ ಸಾನ್ಯ ಅಯ್ಯರ್ ಮತ್ತು ರೂಪೇಶ್ ಫ್ರೆಂಡ್ ಶಿಪ್ ಕಾವ್ಯಶ್ರೀ ಎಂಟ್ರಿಯಿಂದ ಕೊಂಚ ಬದಲಾಗಿದೆ. ಈ ಬೆನ್ನಲ್ಲೇ ಹೊಸ ಲವ್ ಸ್ಟೋರಿಯೊಂದು ಸದ್ದು ಮಾಡುತ್ತಿದೆ. ಐಶ್ವರ್ಯ ಪಿಸ್ಸೆಗೆ(Aishwarya Pissay) ಪ್ರೀತ್ಸೆ ಅಂತಾ ನವಾಜ್ (Nawaz) ಎಲ್ಲರ ಎದುರೇ ಪ್ರಪೋಸ್ ಮಾಡಿದ್ದಾರೆ.

ಎಲ್ಲರಿಗೂ ಹೊಡೆಯುತ್ತೀನಿ ಎಂದು ರಾಂಗ್ ಆಗಿ ಮಾತನಾಡುತ್ತಿದ್ದ ನವಾಜ್(Nawaz) ಬಾಯಲ್ಲಿ ಕ್ಯೂಟ್ ಪ್ರಪೋಸಲ್ ಕೇಳಿ ಮನೆಮಂದಿ ಅಚ್ಚರಿ ಪಟ್ಟಿದ್ದಾರೆ. ದೊಡ್ಮನೆಗೆ ಬಂದ ಸಮಯದಲ್ಲಿ ನವಾಜ್ ಅವರು ಐಶ್ವರ್ಯಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ನನಗೆ ಹಾಲಿವುಡ್ ಹೀರೋಯಿನ್‌ಗಳು ಎಂದರೆ ಇಷ್ಟ. ಐಶ್ವರ್ಯಾ ಅವರು ನೋಡೋಕೆ ಹಾಲಿವುಡ್ ಹೀರೋಯಿನ್ ತರಹವೇ ಇದ್ದಾರೆ. ಅವರನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದರು ನವಾಜ್. ಇದೀಗ ಸೈಕ್‌ ನವಾಜ್ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಪೋಸ್ ಮಾಡಿದ್ದಾರೆ. ಇದನ್ನೂ ಓದಿ:ಯಶ್‌ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ ಕೋಡಿ ಬಿತ್ತು – ಗ್ರಾಮಸ್ಥರಿಗೆ ಸಂತಸ

ನೋಡಿ ಐಶ್ವರ್ಯಾ ಪಿಸ್ಸೆ ಅವರೇ, ನಿಮ್ಮನ್ನು ನೋಡಿದಾಗಲೇ ಫಿದಾ ಆದೆ. ನಿಮ್ಮ ರೀತಿ ಇಂಗ್ಲಿಷ್‌ ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು, ಆದರೆ ಮನಸ್ಸು ದೊಡ್ಡದು. ಚಿಕ್ಕದಾಗಿ ಸೇರಿಕೊಂಡು, ದೊಡ್ಡದಾಗಿ ಪ್ರೀತಿ ಮಾಡೋಣ. ದೊಡ್ಡದಾಗಿ ಪ್ರೀತಿ ಮಾಡಿ, ಚಿಕ್ಕದಾಗಿ ಖುಷಿಪಡೋಣ. ಚಿಕ್ಕ ಖುಷಿಯಲ್ಲಿ ಮಕ್ಕಳಿಗೆ ಜನ್ಮ ಕೊಡೋಣ. ಆ ಚಿಕ್ಕ ಮಕ್ಕಳನ್ನು ದೊಡ್ಡವರಾಗಿ ಬೆಳೆಸೋಣ. ದೊಡ್ಡವರಾಗಿ ಸಾಯುವಾಗ ಚಿಕ್ಕದಾಗಿ ನಗೋಣ. ನಮ್ಮ ಮಕ್ಕಳು ದೊಡ್ಡದಾಗಿ ಸಮಾಧಿ ಕಟ್ಟಿಸುತ್ತಾರೆ, ಅವರ ಮನದಲ್ಲಿ ಚಿಕ್ಕ ಜಾಗದಲ್ಲಿರೋಣ ಎಂದು ಮುದ್ದಾಗಿ ಪ್ರಿತ್ಸೆ ಅಂತಾ ನವಾಜ್ (Nawaz) ಪ್ರಪೋಸ್ ಮಾಡಿದ್ದಾರೆ.

ಇದಕ್ಕೆ ಪ್ರತಿಯುತ್ತರವಾಗಿ ಐಶ್ವರ್ಯ ಕೂಡ ನಿನಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ ಎಂದು ಹೇಳಿದ್ದಾರೆ. ಯಾಕೆ ನೀವು ಸಿಗಲ್ವಾ ಎಂದು ಮತ್ತೆ ನವಾಜ್ ಐಶ್ವರ್ಯಗೆ ಕಿಚ್ಚಾಯಿಸಿದ್ದಾರೆ. ಒಂದ್ ಕಡೆ ರೂಪೇಶ್ ಕಾವ್ಯಶ್ರೀ, ಅಮೂಲ್ಯ ಮತ್ತು ರಾಕೇಶ್ ವಿಚಾರವೇ ಸಖತ್ ಸದ್ದು ಮಾಡುತ್ತಿರಬೇಕಾದರೆ, ಇದೀಗ ಐಶ್ವರ್ಯ ನವಾಜ್ ಜೋಡಿಯ ಪ್ರಪೋಸ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ

Live Tv

Leave a Reply

Your email address will not be published. Required fields are marked *

Back to top button