ಕೆಲವರು ಭಿನ್ನವಾಗಿ ಫೋಟೋ ಕ್ಲಿಕ್ಕಿಸಿಕೊಳ್ಳಬೇಕೆಂಬ ಆಸೆ ಹೊಂದಿರುತ್ತಾರೆ. ಅಂತೆಯೇ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ. ಇನ್ನು ಪ್ರೇಮಿಗಳು ಸಹ ಜೊತೆಯಾಗಿ ನಿಂತು ಹೊಸ ರೀತಿಯಲ್ಲಿ ವಿಭಿನ್ನ ಭಂಗಿಗಳಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಈಗ ಅಂತದ್ದೇ ಹಾಟ್ ಆ್ಯಂಡ್ ಸೆಕ್ಸಿ ಕಪಲ್ ಈಜುಕೊಳದಲ್ಲಿ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗಿದೆ.
ಅಮೆರಿಕ ಮೂಲಕ ಕೆಲ್ಲಿ ಮತ್ತು ಕೋಡಿ ಎಂಬ ಜೋಡಿಯ ಡೇಂಜರಸ್ ಫೋಟೋ ವೈರಲ್ ಅಗುತ್ತಿದೆ. ಇಂಡೋನೇಷ್ಯಾದ ಬಾಲಿ ನಗರದ ಉಬುದ್ ಎಂಬಲ್ಲಿ ಜೋಡಿ ಫೋಟೋ ಕ್ಕಿಕ್ಕಿಸಿಕೊಂಡಿದೆ. ಉಬುದ್ ನಲ್ಲಿರುವ ಕಯೋನ್ ಜಂಗಲ್ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದ ಕೆಲ್ಲಿ ಮತ್ತು ಕೋಡಿ ನಿಸರ್ಗದ ನಡುವೆ ನಿರ್ಮಿಸಿರುವ ಈಜುಕೊಳದಲ್ಲಿ ಎಂಜಾಯ್ ಮಾಡಿದ್ದಾರೆ.
Advertisement
Advertisement
ಎತ್ತರ ಪ್ರದೇಶದಲ್ಲಿರುವ ಈಜುಕೊಳದ ತುದಿಯಲ್ಲಿ ಕೋಡಿ ನಿಂತಿದ್ದು, ಕೊಳದ ಹೊರಗಡೆ ಕೆಲ್ಲಿ ನಿಂತಿರೋದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಕೇವಲ ಗೆಳೆಯನ ಆಶ್ರಯದಲ್ಲಿ ನಿಂತ ಕೆಲ್ಲಿ ಅಲ್ಲೇ ಆತನ ತುಟಿಗೆ ತುಟಿ ಸೇರಿಸಿದ್ದಾಳೆ. ಸ್ವಲ್ಪ ಆಯತಪ್ಪಿದರೂ ಕೆಲ್ಲಿ ಕೆಳಗೆ ಬೀಳುವ ಸಾಧ್ಯತೆಗಳೇ ಹೆಚ್ಚಿತ್ತು.
Advertisement
ತಮ್ಮ ಇನ್ ಸ್ಟಾಗ್ರಾಂನಲ್ಲಿ ಜೋಡಿ ತಮ್ಮ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದು, ನಮ್ಮ ಪ್ರೀತಿ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ. ನಾವಿಬ್ಬರು ಒಬ್ಬರನ್ನೊಬ್ಬರು ಅರಿತುಕೊಂಡಿದ್ದರಿಂದಲೇ ಇಂತಹ ಸುಂದರ ಫೋಟೋ ಸೆರೆಯಾಗಿದೆ ಎಂಬರ್ಥದಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
Advertisement
https://www.instagram.com/p/BvwamQAF0Lm/
https://www.instagram.com/p/BrxrUOJlSV0/