ಶಿವಮೊಗ್ಗ ಡೈರಿಯಿಂದ ಇಂದು ಸಂಜೆ, ನಾಳೆ ರೈತರಿಂದ ಹಾಲು ಖರೀದಿ ಇಲ್ಲ

1 Min Read

ಶಿವಮೊಗ್ಗ: ಭಾರತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ಸಂಜೆ ಮತ್ತು ನಾಳೆ ರೈತರಿಂದ ಹಾಲು ಖರೀದಿಸದಿರಲು ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಹಾಲು ಒಕ್ಕೂಟದಿಂದ ನಿರ್ಧರಿಸಿದೆ.

ಡೈರಿಯಲ್ಲಿಯೆ ಹೆಚ್ಚಿನ ಪ್ರಮಾಣದ ಹಾಲು ಶೇಖರಣೆ ಆಗಿರುವ ಕಾರಣ ಶಿವಮೊಗ್ಗ ಹಾಲು ಒಕ್ಕೂಟದ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೂರು ಜಿಲ್ಲೆಯಲ್ಲಿಯೂ ಹಾಲು ಖರೀದಿ ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪ್ರತಿನಿತ್ಯ ಮೂರು ಜಿಲ್ಲೆಗಳಿಂದ ಶಿಮುಲ್ ಒಕ್ಕೂಟ 5.20 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿದೆ. ಇದರಲ್ಲಿ 2.50 ಲಕ್ಷ ಲೀಟರ್ ಹಾಲು ದಿನನಿತ್ಯ ಮಾರಾಟ ಮಾಡಲಾಗುತ್ತದೆ. ಉಳಿದ ಹಾಲನ್ನು ಪೌಡರ್ ಮತ್ತಿತರ ಉತ್ಪನಗಳ ತಯಾರಿಕೆಗೆ ಶಿಮುಲ್ ಪೂರೈಕೆ ಮಾಡುತ್ತಿತ್ತು. ಅಂತರಾಜ್ಯ ಗಡಿ ಬಂದ್ ಹಿನ್ನೆಲೆಯಲ್ಲಿ ಹಾಲು ಉಳಿದುಕೊಳ್ಳುತ್ತಿದೆ. ಲಾಕ್ ಡೌನ್ ಬಳಿಕ 1.90 ಲಕ್ಷ ಲೀಟರ್ ಗೆ ಹಾಲಿನ ಮಾರಾಟ ಕುಸಿದಿದೆ. ಶಿಮುಲ್ ಉಳಿದ ಹಾಲನ್ನು ಬೇರೆ ಒಕ್ಕೂಟಗಳಿಗೆ ಮಾರಾಟ ಮಾಡಿದ್ರೂ, ದಿನನಿತ್ಯ 60 ಸಾವಿರ ಲೀಟರ್ ಶಿಮುಲ್ ನಲ್ಲೇ ಉಳಿಯುತ್ತಿರುವ ಹಿನ್ನೆಲೆಯಲ್ಲಿ ರೈತರಿಂದ ಹಾಲ ಖರೀದಿಸದೇ ಇರಲು ಶಿಮುಲ್ ನಿರ್ಧರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *