ಬೆಂಗಳೂರು: ಸಾಲು ಸಾಲು ಹಬ್ಬಗಳು ಬರುತ್ತಿರುವ ಹೊತ್ತಿನಲ್ಲೇ ಸಾರ್ವಜನಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಅಡುಗೆ ಎಣ್ಣೆ (Cooking Oil) ಮೇಲಿನ ಆಮದು ಸುಂಕ ಕಡಿತಗೊಳಿಸಿ ಕೇಂದ್ರ ಸರ್ಕಾರ (Central Govt) ಆದೇಶ ಹೊರಡಿಸಿದೆ.
ಹಬ್ಬದ ಸೀಸನ್ (Festival Season) ಹೊತ್ತಲ್ಲೇ ಕೇಂದ್ರ ಸರ್ಕಾರ, ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಸೇರಿದಂತೆ ಪ್ರಮುಖ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ಅಡುಗೆ ಎಣ್ಣೆಗಳ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಚೆನ್ನೈ – ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಡಿವೈಡರ್ಗೆ ಡಿಕ್ಕಿಯಾಗಿ ಕಾರು ಪಲ್ಟಿ; ಮೂವರು ದುರ್ಮರಣ
ಕಳೆದ ಒಂದು ವರ್ಷದಲ್ಲಿ ಕೆಲ ಅಡುಗೆ ಎಣ್ಣೆಯ ಶೆ.20ರಷ್ಟು ಏರಿಕೆಯಾಗಿದೆ. ಸದ್ಯ ಆಮದು ಸುಂಕ ಕಡಿತಗೊಳಿಸಿರುವುದರಿಂದ ಹಬ್ಬದ ಸೀಸನ್ನಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ.
ಯಾವುದೆಲ್ಲ ಕಡಿತ:
ಪಾಮ್ ಎಣ್ಣೆ ಮತ್ತು ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.5ಕ್ಕೆ ಇಳಿಸಲಾಗಿದೆ. ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೂನ್ಯಕ್ಕೆ ಇಳಿಸಲಾಗಿದೆ.
ಭಾರತಕ್ಕೆ ಬೇಕಾಗುವ ಒಟ್ಟು ಅಡುಗೆ ಎಣ್ಣೆಯಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗ ಆಮದು ಮೂಲಕವೇ ಬರುತ್ತದೆ. ಮಲೇಷ್ಯಾ, ಇಂಡೋನೇಷಿಯಾ, ಅರ್ಜೆಂಟೀನಾ, ರಷ್ಯಾ ಮತ್ತು ಉಕ್ರೇನ್ ದೇಶಗಳಿಂದ ಪಾಮ್ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಸುಂಕ ಕಡಿತದಿಂದ ಸೂರ್ಯಕಾಂತಿ ಎಣ್ಣೆಗೆ ಹೆಚ್ಚಿನ ಲಾಭವಾಗಲಿದೆ. ಇದು ಎಣ್ಣೆ ತಯಾರಕರಿಗೆ ಹೆಚ್ಚು ಆಕರ್ಷಕವಾಗಲಿದೆ. ಜೊತೆಗೆ ಸೋಯಾ ಎಣ್ಣೆ ಹಾಗೂ ಪಾಮ್ ಎಣ್ಣೆಯ ಬದಲು ಜನರು ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚು ಬಳಸುವಂತೆ ಮಾಡಬಹುದಾಗಿದೆ.ಇದನ್ನೂ ಓದಿ: ಮತ್ತೊಂದು ಶುಲ್ಕ ಏರಿಕೆ ಶಾಕ್ – ಪಿಯುಸಿ ಪರೀಕ್ಷಾ ಶುಲ್ಕ ಶೇ.50ರಷ್ಟು ಹೆಚ್ಚಳ | ಯಾವುದು ಎಷ್ಟು ಏರಿಕೆ?

