ಬೆಂಗಳೂರು: ಎಸ್‌ಎಸ್‌ಎಲ್‌ಸಿ ಶುಲ್ಕ (SSLC Fees) ಪರಿಷ್ಕರಣೆಯ ಬೆನ್ನಲ್ಲೇ, ರಾಜ್ಯ ಸರ್ಕಾರವು ಪದವಿ ಪೂರ್ವ (PUC)ವಿದ್ಯಾರ್ಥಿಗಳಿಗೂ ಶುಲ್ಕ ಹೆಚ್ಚಳದ ಶಾಕ್ ನೀಡಿದೆ.
ಪರೀಕ್ಷಾ ಶುಲ್ಕ(Exam Fees) ಸೇರಿದಂತೆ ಒಟ್ಟು 26 ಬಗೆಯ ವಿವಿಧ ಸೇವೆಗಳ ದರವನ್ನು ಶೇ. 50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಪರಿಷ್ಕೃತ ದರಗಳು 2026-27ನೇ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗಲಿವೆ.

ಕಳೆದ 8 ವರ್ಷಗಳಿಂದ ಯಾವುದೇ ಶುಲ್ಕ ಏರಿಕೆ ಮಾಡಿರದ ಕಾರಣ ಪ್ರಸ್ತುತ ದರ ಪರಿಷ್ಕರಣೆ ಅನಿವಾರ್ಯ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಆರ್ಥಿಕ ಇಲಾಖೆ ಪತ್ರವೇ ಸರ್ಕಾರದ ದಿವಾಳಿತನದ ಕನ್ನಡಿ – ಜನರ ಕಣ್ಣಿಗೆ ಮಣ್ಣೆರಚುವುದನ್ನ ಸಿಎಂ ನಿಲ್ಲಿಸಲಿ; ಬಿವೈವಿ

ಶೈಕ್ಷಣಿಕ ವೆಚ್ಚಗಳು, ಮುದ್ರಣ ಮತ್ತು ಪರೀಕ್ಷಾ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಆದಾಗ್ಯೂ, ಏಕಾಏಕಿ ಶೇ. 50ರಷ್ಟು ಶುಲ್ಕ ಹೆಚ್ಚಳ ಮಾಡಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಆರ್ಥಿಕ ಹೊರೆ ಹೆಚ್ಚಿಸಲಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.

