– ಇಬ್ಬರ ಸ್ಥಿತಿ ಗಂಭೀರ
ಕೋಲಾರ: ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್ ವೇಯಲ್ಲಿ (Bengaluru-Chennai Expressway) ಡಿವೈಡರ್‌ಗೆ ಡಿಕ್ಕಿಯಾಗಿ ಕಾರು (Car) ಪಲ್ಟಿಯಾದ ಘಟನೆ ಕೋಲಾರ (Kolar) ಜಿಲ್ಲೆ ಬಂಗಾರಪೇಟೆ ತಾಲೂಕು ಮರಗಲ್ ಸಮೀಪ ನಡೆದಿದೆ.
ಪಲ್ಟಿಯಾದ ಹಿನ್ನೆಲೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಮೃತರು ಪುಣೆ ಮೂಲದ ಪ್ರಯಾಣಿಕರು ಎಂದು ತಿಳಿದು ಬಂದಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಸಾಯಬೇಕು ಅನ್ಸಿದ್ರೆ ಹೋಗಿ ಸಾಯಿರಿ, ಬಸ್ ಮಾತ್ರ ನಿಲ್ಸಲ್ಲ – ಬೆಂಕಿ ಹೊತ್ತಿಕೊಂಡರೂ ಚಾಲಕ ಉಡಾಫೆ
ಗಾಯಾಳುಗಳನ್ನು ಬಂಗಾರಪೇಟೆ ಹಾಗೂ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಭೇಟಿ

