ಕಲಬುರಗಿ: ಮೀಟೂ ಆರೋಪ ಮಾಡಿದ್ದ ಎಲ್ಎಲ್ಬಿ ವಿದ್ಯಾರ್ಥಿನಿಯ ಅನುಮಾನಸ್ಪದ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಮೂಡಿವೆ.
ಅಂಡಮಾನ್ ಮೂಲದ ಪುಷ್ಪಾ, ಪದವಿ ಮುಗಿಸಿ ಬೆಂಗಳೂರಿನ ಜಯಂತ. ಎಂ. ಪಟ್ಟಣಶೆಟ್ಟಿ ಅಸೋಸಿಯೆಟ್ಸ್ ಬಳಿ ಇಂಟರ್ನ್ ಶಿಪ್ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ವಕೀಲ ಚಂದ್ರನಾಯ್ಕ್ ಮತ್ತು ಚೇತನ್ ದೇಸಾಯಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 20 ರಂದು ಪ್ರಕರಣ ದಾಖಲಾಗಿತ್ತು.
Advertisement
ಪ್ರಕರಣದ ಬಳಿಕ ಕೇಸ್ ಪಡೆಯುವಂತೆ ಪುಷ್ಪಾಗೇ ಅನೇಕ ಜನ ಬೆದರಿಕೆ ಹಾಕಿದ್ದು, ಅದರ ಆಡಿಯೋ ಮತ್ತು ಆಕೆ ತನಗಿರುವ ಜೀವಬೆದರಿಕೆ ಕುರಿತು ತಂದೆ ಹಾಗೂ ಸ್ನೇಹಿತ ಕೀರ್ತಿಗೆ ಮಾಡಿರುವ ವಾಟ್ಸಪ್ ನ ಸಂದೇಶದ ಎಕ್ಸ್ ಕ್ಲೂಸಿವ್ ಡೀಟೈಲ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಮೂಲಕ ಪುಷ್ಪಾಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬುದಾಗಿ ಹಲವು ಅನುಮಾನಗಳು ಮೂಡುತ್ತಿವೆ.
Advertisement
Advertisement
ವಾಟ್ಸಪ್ ನ ಸಂದೇಶದಲ್ಲಿ ಏನಿದೆ?
ಪುಷ್ಪಾ: ಎಲ್ಲರ ಮುಂದೆಯೇ ನಾಯಕ ನನಗೇ ಹೇಳ್ತಾರೆ. ಪ್ರೈವೇಟ್ ಆಗಿ ನಮ್ಮ ಜೊತೆ ಕುಳಿತುಕೊಳ್ಳಲು ಹೇಳ್ತಾರೆ. 2ನೇದಾಗಿ ವಿನಯ, ಕೃಷ್ಣಾ ಇವರ ಎದುರಲ್ಲಿ ಹೇಳ್ತಾರೆ. ನನ್ನ ಜೊತೆ ಇವರ ಸಂಬಂಧವಿದೆ ಅಂತಾನೆ.
ಕೀರ್ತಿ: ಆಯ್ತು, ನಾನು ಒಂದು ಮನವಿ ಮಾಡ್ತಿನಿ. ನೀನು ಇವತ್ತು ಸಾಯಂಕಾಲ 4 ಗಂಟೆಗೆ ಬೆಂಗಳೂರಿಗೆ ತಲುಪಿದ್ರೆ. ನನಗೆ ಕರೆ ಮಾಡು.
ಪುಷ್ಪಾ: ಯಾಕೆ ನಿನ್ನ ಭೇಟಿಯಾಗಬೇಕು, ಈಗಾಗಲೇ ಪೊಲೀಸರಿಂದ ನಾಯ್ಕ್ ನನ್ನ ಕಾಲ್ ಟ್ರ್ಯಾಕ್ ಮಾಡುತ್ತಿದ್ದಾರೆ. ಯಾಕೆ ನಾನ್ ಸೆನ್ಸ್ ರೀತಿ ನನ್ನ ಕಾಲ್ ಟ್ರ್ಯಾಕ್ ಮಾಡಬೇಕು.
ಕೀರ್ತಿ: ಪುಷ್ಪ ನೋಡು, ನಾನು ಈ ವಿಷಯ ಸಂಬಂಧಿಸಿದಂತೆ ಗೌಡ ಜೊತೆ ಮಾತನಾಡಿದ್ದು, ಗೌಡ ಕೂಡ ನನಗೆ ಕರೆ ಮಾಡಿದ್ದು ನನಗೆ ಗೊತ್ತು. ಅಲ್ಲಿ ಗೌಡ ಸಹ ಬರುತ್ತಾನೆ. ಇಬ್ಬರು ಸೇರಿ ಮಾತನಾಡೋಣ. ನಾವು ನಿಮಗೆ ಯಾವುದೇ ಒತ್ತಡ ಹಾಕುವುದಿಲ್ಲ. ಕುಳಿತು ಮಾತನಾಡುತ್ತೇವೆ.
ಪುಷ್ಪಾ: ಯಾಕೆ ಅವರು ಕಾಲ್ ಟ್ರ್ಯಾಕ್ ಮಾಡುತ್ತಿದ್ದಾರೆ. ಯಾಕೆ ಅವರು ನನ್ನ ತಂದೆಯವರಿಗೆ ತಿಳಿಸಿದ್ದು, ಇನ್ನು ಇಡೀ ಕರ್ನಾಟಕದ ಜನರಿಗೆ ಈ ವಿಷಯ ತಿಳಿಯಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕಾಲ್ ಟ್ರ್ಯಾಕ್ ಮಾಡುತ್ತಿರುವವರು ನಾಯ್ಕ್ ಮತ್ತು ಚೇತನ್. ಯಾಕೆ ಅವರು ನನ್ನ ಕಾಲ್ ಟ್ರ್ಯಾಕ್ ಮಾಡುತ್ತಿದ್ದಾರೆ.
Advertisement
ಕೀರ್ತಿ: ಅದಕ್ಕೆ ಕಾರಣವಿದೆ ನೀನು ದೂರು ಕೊಟ್ಟಿದ್ದು. ಪೊಲೀಸರು ಅವರನ್ನು ಕರೆಸಿ ತನಿಖೆಗೆ ಒಳಪಡಿಸಿ ಏನಾಗಿದೆ ಎಂಬುದು ಎಲ್ಲ ವಿಷಯವನ್ನು ಪರಿಶೀಲಿಸುತ್ತಾರೆ. ಅವರನ್ನು ಸ್ಟೇಷನ್ ಗೆ ಕರೆದು ವಿಚಾರಣೆ ಕೈಗೊಳ್ಳುತ್ತಾರೆ. ಇನ್ನು ನೀನು ಕರೆ ಸ್ವೀಕರಿಸುತ್ತಿಲ್ಲ. ಅದಕ್ಕೆ ನಿನ್ನ ಫೋನ್ ಟ್ರ್ಯಾಕ್ ಮಾಡತ್ತಿರಬಹುದು.
ಪುಷ್ಪಾ: ಓ ಹಾಗಾದ್ರೆ ಅವರು ಟ್ರ್ಯಾಕ್ ಮಾಡುತ್ತಿರುವುದನ್ನು ನೀವು ಒಪ್ಪಿಕೊಳ್ಳುತ್ತಿದ್ದೀರಾ?
ಕೀರ್ತಿ: ನಾನು ಸಹ ಆ ವಿಷಯವನ್ನು ಕೇಳಿದ್ದೇನೆ. ಇನ್ನು ನೀನು ಕರೆ ಸ್ವೀಕರಿಸುತ್ತಿಲ್ಲ. ಅದಕ್ಕೆ ನಿನ್ನ ಫೋನ್ ಟ್ರ್ಯಾಕ್ ಮಾಡತ್ತಿರಬಹುದು. ನಿಮಗೆ ಪೊಲೀಸರಿಂದ ಕರೆ ಬಂದಿಲ್ವಾ?
ಪುಷ್ಪಾ: ಹಾ.. ಹೌದು. ಒಂದು ಲ್ಯಾಂಡ್ ಲೈನ್ 080 ನಂಬರ್ ನಿಂದ ನನಗೆ ಕರೆ ಬಂದಿದ್ದು, ಅದನ್ನು ನಾನು ಸ್ವೀಕರಿಸಿಲ್ಲ.
ಕೀರ್ತಿ: ಅದೇ ನಂಬರ್ ಪೊಲೀಸ್ ಠಾಣೆಯಿಂದ ಇರಬಹುದು? ನಾವು ಇವತ್ತು ಸಂಜೆ ಭೇಟಿಯಾಗೋಣ.
ಪುಷ್ಪಾ: ನೀವೇ ಹೇಳಿ ನಾನು ಪೊಲೀಸ್ ಠಾಣೆಗೆ ಹೋದರೆ ಏನಾದ್ರು ತೊಂದರೆಯಾಗುತ್ತಾ?
ಕೀರ್ತಿ: ಇಲ್ಲ ಏನು ಕೆಟ್ಟದಾಗಲ್ಲ.
ಪುಷ್ಪಾ: ಖಂಡಿತ ನಾ?
ಕೀರ್ತಿ: ನೀನು ಪೊಲೀಸ್ ಸ್ಟೇಷನ್ ಗೆ ಹೋದಾಗ ನನ್ನ ಕರೆದ್ರು ನಾನು ಬರುತ್ತೆನೆ. ಅವರೆ ಕರೆ ಮಾಡಿದ್ರೆ ನೀನು ಸ್ಟೇಷನ್ ಗೆ ಹೋಗಬಹುದು. 100 ಪ್ರತಿಶತ ಏನೂ ಆಗಲ್ಲ.
ಪುಷ್ಪಾ: ಸದ್ಯ ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ನನಗೆ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಅದೇ ರೀತಿ ಡಿಸಿಪಿ ಹುಲಸೂರ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಹೀಗಾಗಿ ನಾನು ಪೊಲೀಸ್ ಠಾಣೆಗೆ ಹೋಗುವ ದಾರಿಯಲ್ಲಿದ್ದೇನೆ.
ಕೀರ್ತಿ: ಓ ಹಾಗಾದರೆ ನೀನು ಬೆಂಗಳೂರಿನಲ್ಲಿಯೇ ಇದ್ದಿಯಾ ಪುಷ್ಪಾ?
ಪುಷ್ಪಾ: ನಿನ್ನೆ ಸಾಯಂಕಾಲವೇ ನಾನು ಬೆಂಗಳೂರಿಗೆ ಬಂದಿದ್ದೇನೆ. ನಿನ್ನ ಮೇಲೆ ನನಗೆ ಅನುಮಾನ ಬರುತ್ತಿತ್ತು. ಯಾಕಂದ್ರೆ ನಾನು ಯಾರಿಗೆ ಕರೆ ಮಾಡುತ್ತಿದ್ದೀನಿ, ಅವರ ನಂಬರ್ ಗಳ ಟ್ರ್ಯಾಕ್ ಮಾಡಿ ಕರೆ ಮಾಡಲಾಗುತ್ತಿದೆ. ಮುಂಬೈ, ಬಾರ್ ಅಸೋಸಿಯೇಷನ್ ಹಾಗು ಸುಪ್ರೀಂ ಕೋರ್ಟ್ನಿಂದ ನನಗೆ ಕರೆ ಬಂದಿತ್ತು. ಬಾರ್ ಅಸೋಸಿಯೇಷನ್ ನನ್ನ ಜೊತೆಯಿದೆ.
ಕೀರ್ತಿ: ಎಲ್ಲಿದ್ದಿರಾ ನೀವು?
ಪುಷ್ಪಾ: ಸದ್ಯ ನಾನು ರೇಸ್ ಕೋರ್ಸ್ ರಸ್ತೆಯಲ್ಲಿದ್ದೆನೆ, ಇಲ್ಲ ಇಲ್ಲ ಫ್ರೀಡಂ ಪಾರ್ಕ್ ಹತ್ತಿರವಿದ್ದೇನೆ.
ಕೀರ್ತಿ: ಓ ನೀನು ಪೊಲೀಸ್ ಸ್ಟೇಷನ್ಗೆ ಹೋಗುತ್ತಿದ್ದಿಯಾ?
ಪುಷ್ಪಾ: ನನಗೆ ಈ ಹಿಂದೆ ಕರೆ ಬಂದಿತ್ತು. ನಾನು ಮಂಗಳವಾರ ಸ್ಟೇಷನ್ಗೆ ಬರುತ್ತೇನೆ ಅಂತಾ ಹೇಳಿದೆ. ಈಗ ಡಿಸಿಪಿ ಅವರನ್ನು ಭೇಟಿ ಮಾಡಿದ್ದೇನೆ. ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ.
ಕೀರ್ತಿ: ಹಲೋ.. ನೀನು ಯಾರ ಜೊತೆ ಹೋಗುತ್ತಿದ್ದೀಯಾ?
ಪುಷ್ಪಾ: ನಾನು ಒಬ್ಬಳೆ ಹೋಗುತ್ತಿದ್ದೇನೆ. ಹಲೋ.
ಕೀರ್ತಿ: ನೀನು ನನಗೆ ತಿಳಿಸಿದ್ರೆ ನಾನು ನಿನ್ನ ಜೊತೆ ಬರ್ತಿದ್ದೆ
ಪುಷ್ಪಾ: ನಾನು 11 ಗಂಟೆಗೆ ಹೋಗಬೇಕಿತ್ತು. ನನ್ನ ಬಳಿ ಇರುವ ಎಲ್ಲಾ ಪೂರಕ ದಾಖಲೆಗಳ ಸಮೇತ.
ಕೀರ್ತಿ: ಯಾವ ಪೂರಕ ದಾಖಲೆಗಳು ನಿಮ್ಮ ಹತ್ತಿರ ಇವೆ. ನಾವು ಠಾಣೆಗೆ ಹೋಗುವ ಮುನ್ನ ಭೇಟಿಯಾಗಿ ಮಾತನಾಡೋಣ.
ಪುಷ್ಪಾ: ನಾನು ನಿಂಗೆ ಕರೆ ಮಾಡಿ ತಿಳಿಸಿ ಹೋದರೆ, ನನ್ನ ಕರೆಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ನಿನ್ನ ಜೊತೆ ಹೋದರೆ ಅವರು ಎಲ್ಲರಿಗೂ ತಿಳಿಸಿದ್ದಾಳೆ ಎಂದು ಹೇಳಿಕೊಳ್ಳುತ್ತಾರೆ.
ಕೀರ್ತಿ: ನೀವು ಪೊಲೀಸ್ ಸ್ಟೇಷನ್ ಹೋದ ಮೇಲೆ ಮಾತನಾಡುವ ಅವಶ್ಯಕತೆಯಿಲ್ಲ, ಅದಕ್ಕಿಂತ ಮುಂಚೆ ಮಾತನಾಡಬಹುದಿತ್ತು.
ಪುಷ್ಪಾ: ಕ್ಷಮಿಸಿ. ನೀನು ಏನು ಹೇಳಬೇಕು ಅಂತಿದ್ದಿಯಾ ಅದನ್ನು ಈಗಲೇ ಹೇಳು.
ಕೀರ್ತಿ: ನಾನು ನಿನಗೇ ಪದೇ ಪದೇ ಕಾಲ್ ಮಾಡುತ್ತಿರುವ ಉದ್ದೇಶ ಇಷ್ಟೇ. ಏನಾದ್ರು ಮಾಡಿ ಈ ವಿಷಯವನ್ನು ಇಲ್ಲಿಯೇ ಕಾಂಪ್ರಮೈಸ್ ಮಾಡುವ ಸಲುವಾಗಿ ಮಾತನಾಡುತ್ತಿದ್ದೆ.
ಪುಷ್ಪಾ: ಯಾಕೆ?
ಕೀರ್ತಿ: ಪುಷ್ಪಾ ನಾನು ನಿನಗೆ ಒಂದು ವಿಷಯ ತಿಳಿಸುತ್ತೆನೆ. ಈ ವಿಷಯ ತುಂಬಾ ಗಂಭೀರತೆಯಿಂದ ಕೂಡಿದ್ದು, ಒಂದು ವೇಳೆ ಈ ಕುರಿತು ಕ್ರಿಮಿನಲ್ ಪ್ರಕರಣದಡಿ, ನಾಯ್ಕ್ ಮತ್ತು ಚೇತನ್ ಮೇಲೆ ಕ್ರಮ ಜರುಗಿಸಲಾಗುತ್ತದೆ. ಈ ಪ್ರಕರಣದ ವಿಷಯ ಎಲ್ಲಾ ವಕೀಲರಿಗೆ ತಿಳಿದು ಬಿಡುತ್ತೆ. ಒಂದು ಸಲ ಪ್ರಕರಣ ದಾಖಲಾದರೆ ಅವರನ್ನು ಬಂಧಿಸಲಾಗುತ್ತದೆ.
ಪುಷ್ಪಾ: ಓಕೆ
ಕೀರ್ತಿ: ಇದರಿಂದ ನಿನಗೆ ಬೆಂಗಳೂರಿನಲ್ಲಿ ಪ್ರ್ಯಾಕ್ಟಿಸ್ ಮಾಡಲು ಬಿಡುವುದಿಲ್ಲ.
ಪುಷ್ಪಾ: ನಾನು ಬೆಂಗಳೂರಿನಲ್ಲಿಯೇ ಇರುತ್ತೇನೆ. ಇಲ್ಲಿಯೇ ಪ್ರ್ಯಾಕ್ಟಿಸ್ ಮಾಡುತ್ತೇನೆ. ಅವರು ಏನು ಮಾಡುತ್ತಾರೆ ನೋಡುತ್ತೇನೆ. ನಾನು ನೋಡುತ್ತೇನೆ ಅವರು ನನ್ನ ಹೇಗೆ ತಡೆಯುತ್ತಾರೆ ಅಂತಾ. ಅದರ ಬಗ್ಗೆ ನಿನಗೆ ಚಿಂತೆ ಬೇಡ.
ಕೀರ್ತಿ: ಅವರು ಬಿಡುವುದಿಲ್ಲ ಎಲ್ಲ ವಕೀಲರ ಸಹಾಯದಿಂದ.
ಪುಷ್ಪಾ: ನಾನು ಯಾವುದಕ್ಕೆ ತಲೆ ಕೆಡಿಸಿಕೊಳ್ಳುವು. ಇಡೀ ಭಾರತ ದೇಶ ನನ್ನ ಜೊತೆಗಿದೆ. ಹೀಗಾಗಿ ಬೆಂಗಳೂರು ವಕೀಲರು ಏನು ಮಾಡುತ್ತಾರೆ ಎಂಬ ಚಿಂತೆ ನನಗಿಲ್ಲ. ನಾನು ನನ್ನ ಕೆಲಸ ಮಾಡುತ್ತೇನೆ. ನಾನು ಯಾರಿಗೆ ನ್ಯಾಯ ದೊರಕುತ್ತಿಲ್ಲ ಅವರ ಪರವಾಗಿರುತ್ತೇನೆ. ಅದನ್ನು ಯಾರಿಂದ ಸಹ ತಡೆಯಲು ಸಾಧ್ಯವಿಲ್ಲ.
ಕೀರ್ತಿ: ಪುಷ್ಪಾ ನೀನು ಯಾಕೆ ಬರೀ ನೆಗೆಟಿವ್ ಥಿಂಕ್ ಮಾಡ್ತಾ ಇದ್ದಿಯಾ? ಅದು ನನಗೇ ಗೊತ್ತಾಗುತ್ತಿಲ್ಲ. ಅವರು ಏನ್ ತಪ್ಪು ಮಾಡಿದ್ದರೂ ಪೊಲೀಸ್ ಠಾಣೆಗೆ ಹೋಗುವ ಮುನ್ನ ನನಗೆ ತಿಳಿಸಿದರೆ, ನಾನು ಅವರಿಂದ ಕ್ಷಮೆ ಕೇಳಿಸುತ್ತಿದ್ದೆ.
ಪುಷ್ಪಾ: ಸಾಧ್ಯನೇ ಇಲ್ಲ. ನಾಯ್ಕ್ ನನಗೆ ಕ್ಷಮೆ ಕೇಳಿಲ್ಲ. ಚೇತನ್-ನಾಯ್ಕ್ ಇವರು ನನಗೆ ತೊಂದರೆ ಕೊಟ್ಟಿದ್ದಾರೆ. ನನ್ನ ಚಿಂತೆ ಅವರಿಗೇಕೆ. ಯಾರ್ಯಾರು ತಪ್ಪು ಮಾಡಿದ್ದಾರೋ ಅವರ ಬಂಧನವಾಗಲಿ. ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಇದು ಈಗಾಗಲೇ ಸುಪ್ರೀಂ ಕೋರ್ಟ್, ಬಾರ್ ಅಸೋಸಿಯೇಷನ್ ತಿಳಿದಿದೆ. ಈಗಾಗಲೇ ಕರ್ನಾಟಕ ಬಾರ್ ಕೌನ್ಸಿಲ್ ಅವರಿಗೆ ಕರೆ ಬರುತ್ತದೆ. ಪೊಲೀಸ್ ಕಮಿಷನರ್ ಮುಂಬೈಯವರು ಸಹ ಇದರ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಎಲ್ಲವನ್ನು ನಾನು ಕೆಲಸ ಮುಗಿಸಿದ್ದೇನೆ. ಇನ್ನು ಅವರು ಸಹ ನನಗೆ ಧೈರ್ಯ ನೀಡಿದ್ದು, ಯಾವುದೇ ಕಾರಣಕ್ಕೆ ಹಿಂದೆ ಸರಿಯ ಬೇಡ ಮುನ್ನುಗ್ಗು ಅಂತಾ ಧೈರ್ಯ ಹೇಳಿದ್ದಾರೆ. ಹೀಗಾಗಿ ನಾನು ಸಹ ಅದೇ ನಿರ್ಧರಿಸಿದ್ದೇನೆ.
ಕೀರ್ತಿ: ಫೈನ್.
ಪುಷ್ಪಾ: ಹೇಳಿ.
ಕೀರ್ತಿ: ಈ ಪ್ರಕರಣದಿಂದ ಎರಡು ಕುಟುಂಬಗಳಿಗೆ ತೊಂದರೆಯಾಗುತ್ತಲ್ಲ.
ಪುಷ್ಪಾ: ಅದಕ್ಕೆ ನಾನು ಏನು ಮಾಡಲಿ? ಅವರಿಂದ ನನಗೆ ಎಷ್ಟು ಸಮಸ್ಯೆಯಾಗಿದೆ ಎಂಬುದು ನಿಮಗೇನು ಗೊತ್ತು.
ಕೀರ್ತಿ: ನಾನು ಅದನ್ನು ತಿಳಿದುಕೊಂಡೆ. ಆದರೆ ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಚೇತನ್ ಅವರ ತಂದೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾಯ್ಕ್ ನ ಆರೋಗ್ಯನೂ ಸರಿಯಿಲ್ಲ.
ಪುಷ್ಪಾ: ನಾನು ಏನು ಮಾಡ್ಲಿ.
ಕೀರ್ತಿ: ನಾನು ಹೇಳ್ತಿನಿ ತಿಳಿದಿಕೋ ಪುಷ್ಪಾ.
ಪುಷ್ಪಾ: ಅವರು ಏನು ತಪ್ಪು ಮಾಡಿದ್ದಾರೆ ಎಂಬುದು ಎಲ್ಲ ಕರ್ನಾಟಕದ ಜನರಿಗೆ ತಿಳಿಯಲಿ. ನನಗೆ ಕಚೇರಿಗೆ ಬರದಂತೆ ಯಾರು ನೋಡಿಕೊಳ್ಳುತ್ತಾರೆ ಅನ್ನುವುದನ್ನು ನಾನು ಸಹ ನೋಡುತ್ತೇನೆ. ಈಗಾಗಲೇ ಈ ವಿಷಯ ತುಂಬಾ ದೊಡ್ಡ ಮಟ್ಟದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ವರೆಗೂ ಹೋಗಿದೆ. ಇಷ್ಟೇ ಹೇಳ್ತಿನಿ.
ಕೀರ್ತಿ: ಕೇಳು ಪುಷ್ಪಾ. ನಾನು ನಿನಗೆ ಮನವಿ ಮಾಡುತ್ತೇನೆ ಅವರಿಬ್ಬರಿಗೂ ಕುಟುಂಬವಿದೆ.
ಪುಷ್ಪಾ: ನಾನು ಕರ್ನಾಟಕದವಳು ಅಲ್ಲ ಅಂದರೆ ಇವರು ಏನಾದ್ರು ಮಾಡಬಹುದಾ. ಪುಷ್ಪಾಳನ್ನು ಹುಚ್ಚಿಯಂತ ತಿಳಿದಿದ್ದಾರಾ. ಅವರ ಆಟ ಸಾಕು ನಾನು ಮುಂದುವರಿಯುತ್ತೇನೆ.
ಕೀರ್ತಿ: ಇಲ್ಲ ಅವರು ನಿನಗೆ ಕ್ಷಮೆ ಕೇಳುತ್ತಾರೆ. ನೀನು ಕ್ಷಮೆ ಕೇಳಿದರೆ ಮುಗಿಯುತ್ತದೆ.
ಪುಷ್ಪಾ: ಇಲ್ಲ ಇಲ್ಲ ನಾನು ಅವರನ್ನು ಜೈಲಿಗೆ ಕಳುಹಿಸುವ ತನಕ ಬಿಡುವುದಿಲ್ಲ.
ಕೀರ್ತಿ: ಇಬ್ಬರು ಸಣ್ಣ ಮಕ್ಕಳಿದ್ದಾರೆ. ಅವರ ಹೆಂಡ್ತಿಗೂ ಸಹ ಹುಷಾರಿಲ್ಲ.
ಪುಷ್ಪಾ: ಅದಕ್ಕೆ ನಾನು ಏನು ಮಾಡ್ಲಿ, ನನಗೆ ಕಿರುಕುಳ ನೀಡುವ ಮುನ್ನ 100 ಸಲ ಅವರು ಯೋಚಿಸಬೇಕಿತ್ತು. ನಾನು ಏನು ಹುಚ್ಚಿಯಲ್ಲ. ನನಗೆ ನ್ಯಾಯಬೇಕು. ನಾನು ಏನು ಕೇಳುವುದಿಲ್ಲ ಕೀರ್ತಿ ಸರ್, ಅವರ ಮುಂದೆ ಪ್ರ್ಯಾಕ್ಟಿಸ್ ಮಾಡಬಾರದು ಜೈಲಿಗೆ ಕಳುಹಿಸುತ್ತೇನೆ. ಅದೇ ನನಗೆ ನ್ಯಾಯ ಸಿಕ್ಕ ಹಾಗೆ.
ಕೀರ್ತಿ: ಪುಷ್ಪಾ ನಾನು ಕೊನೆಯದ್ದಾಗಿ ಹೇಳುತ್ತಿದ್ದೇನೆ, ಆ ದೂರನ್ನು ಹಿಂಪಡೆಯಿರಿ.
ಪುಷ್ಪಾ: ನಾನು ಪ್ರಕರಣವನ್ನು ಹಿಂಪಡೆಯುವುದಿಲ್ಲ ಅಡ್ವಕೇಟ್ ಕೀರ್ತಿ ಸರ್. ಇದು ನನ್ನ ಜೀವನ. ನಿಮಗೆ ಬೇಕಾದರೆ ನನಗೆ ಸಹಾಯ ಮಾಡಿ. ಇಲ್ಲ ಅಂದರೆ ನಾಯಕ ಅವರ ಜೊತೆ ಸೇರಿಕೊಂಡು ಅವರಿಗೆ ಸಹಾಯ ಮಾಡಿ. ನನಗೆ ಯಾವುದೇ ತೊಂದರೆಯಿಲ್ಲ. ನೀವೇಕೆ ನಾನು ತಪ್ಪು ಮಾಡಿದ್ದೀನಿ ಅಂತಿದ್ದೀರಿ.
ಕೀರ್ತಿ: ನಾನು ಆ ರೀತಿ ಹೇಳಿಲ್ಲ. ನನ್ನ ಮುಖ್ಯ ಉದ್ದೇಶ ಅವರ ಕುಟುಂಬದ ಬಗ್ಗೆ ಚಿಂತೆಯಿದೆ.
ಪುಷ್ಪಾ: ನನ್ನ ತಂದೆ ಮತ್ತು ತಾಯಿಗೂ 60 ವರ್ಷ ಆಗಿದೆ. ಅವರಿಗೆ ತಿಳಿದರೆ ಏನಾಗುತ್ತದೆ. ಇನ್ನು ನನಗೀಗ 26 ವರ್ಷ. ಎರಡು ವರ್ಷದ ನಂತರ ನನ್ನ ಯಾರು ಮದುವೆಯಾಗುತ್ತಾರೆ.
ಕೀರ್ತಿ: ನನಗೆ ಅವರದಷ್ಟೇ ಅಲ್ಲ, ನಿನ್ನ ಜೀವನದ ಬಗ್ಗೆ ಸಹ ಚಿಂತೆಯಿದೆ.
https://www.youtube.com/watch?v=vz-i8b1QUqs&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv