ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ (Himachal Pradesh Polls) ಕಾಂಗ್ರೆಸ್ (Congress) ತನ್ನ ನಾಲ್ವರು ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದೆ.
ಹಿಮಾಚಲದ ಯುವ ಕಾಂಗ್ರೆಸ್ (Youth Congress) ಮುಖ್ಯಸ್ಥ ನಿಗಮ್ ಭಂಡಾರಿ ಅವರು ಕಿನ್ನೌರ್ನಿಂದ ಪಕ್ಷದ ನಾಮನಿರ್ದೇಶನಕ್ಕೆ ಬಿಡ್ ಮಾಡಿದ್ದರು. ಆದರೆ ಕಿನ್ನೌರ್-ಎಸ್ಟಿ (ST) ಮೀಸಲು ಕ್ಷೇತ್ರದಿಂದ ಹಾಲಿ ಶಾಸಕ ಜಗತ್ ಸಿಂಗ್ ನೇಗಿಯನ್ನು ಕಾಂಗ್ರೆಸ್ ಮತ್ತೆ ಕಣಕ್ಕಿಳಿಸಿದೆ. ಜೈಸಿಂಗ್ಪುರ ಎಸ್ಸಿ (SC) ಮೀಸಲು ಕ್ಷೇತ್ರದಿಂದ ಯದ್ವಿಂದರ್ ಗೋಮಾ ಕಣದಲ್ಲಿದ್ದಾರೆ. ಮನಾಲಿ ಕ್ಷೇತ್ರದಿಂದ ಭುವನೇಶ್ವರ್ ಗೌರ್ ಮತ್ತು ಪೊಂಟಾ ಸಾಹಿಬ್ ಕ್ಷೇತ್ರದಿಂದ ಕಿರ್ನೇಶ್ ಜಂಗ್ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಏಳು ವರ್ಷಗಳ ನಂತರ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯನಿಗಾಗಿ ಬಂದ ಶುಭ್ರಾ ಅಯ್ಯಪ್ಪ
ಇದರೊಂದಿಗೆ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಮೊದಲು ತಮ್ಮ ಮನೆ ಸರಿಮಾಡಿಕೊಳ್ಳಲಿ – ಕರಂದ್ಲಾಜೆ
68 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 12 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ ತಿಂಗಳ ಅಕ್ಟೋಬರ್ 25 ಕೊನೆಯ ದಿನವಾಗಿದೆ.