– ಬೊಮ್ಮಾಯಿ, ಕಟೀಲ್, ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹ
– ಸಿದ್ದು, ಡಿಕೆಶಿ ನೇತೃತ್ವದಲ್ಲಿ ದೂರು
– 40 ಪರ್ಸೆಂಟ್ ಕಮಿಷನ್‌ನಲ್ಲಿ ಸಾವಿರಾರು ಕೋಟಿ ಹಣ ಸಂಗ್ರಹ ಆರೋಪ
ಬೆಂಗಳೂರು: ಚುನಾವಣೆ ಗೆಲ್ಲೋಕೆ ಪ್ರತಿ ಮತಕ್ಕೆ 6 ಸಾವಿರ ಕೊಡಲು ನಾವು ಸಿದ್ದ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೋಳಿ (Ramesh Jarkiholi) ಹೇಳಿಕೆ ವಿರುದ್ದ ಕಾಂಗ್ರೆಸ್ (Congress) ದೂರು ನೀಡಿದೆ.
Advertisement
ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ (D.K.Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದ ತಂಡ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (J.P.Nadda), ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲಾಗಿದೆ. ಕೂಡಲೇ FRI ದಾಖಲು ಮಾಡಿ ಎಲ್ಲರನ್ನು ಬಂಧನ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಡಬಲ್ ಫೈಟ್; ಡಿಕೆಶಿ, ಸಿದ್ದುಗೆ ದೊಡ್ಡ ತಲೆನೋವು?
Advertisement
Advertisement
ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬಿಜೆಪಿ (BJP) ಹಾಳು ಮಾಡುತ್ತಿದೆ. ಜನರಿಗೆ ಆಮಿಷ ಒಡ್ಡುತ್ತಿದ್ದಾರೆ. 40% ಕಮಿಷನ್‌ನಲ್ಲಿ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಚುನಾವಣೆಗೆ ಹಂಚಲು ಸಿದ್ದತೆ ಮಾಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೋಳಿ ಪ್ರತಿ ಮತಕ್ಕೆ 6 ಸಾವಿರ ಕೊಡ್ತೀವಿ ಅಂತಾ ಹೇಳಿದ್ದಾರೆ. 5 ಕೋಟಿ ಮತದಾರರಿಗೆ 6 ಸಾವಿರದಂತೆ 30 ಸಾವಿರ ಕೋಟಿ ಹಣ ಹಂಚಲು ಬಿಜೆಪಿ ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
Advertisement
ರಮೇಶ್ ಜಾರಕಿಹೊಳಿ ಹೇಳಿಕೆಯ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇವೆ. ಪ್ರತಿ ಬೂತ್‌ನಲ್ಲಿ ಹಣ ಹಂಚಲು ಮುಂದಾಗಿದ್ದಾರೆ. ಈ ಮೂಲಕ ಮತದಾರರಿಗೆ ಲಂಚ ಆಮಿಷ ಒಡ್ಡುತ್ತಿದ್ದಾರೆ. ಕೂಡಲೇ FIR ದಾಖಲು ಮಾಡಿಕೊಂಡು, ಎಲ್ಲರನ್ನು ಬಂಧನ ಮಾಡಬೇಕು. ಕಾನೂನು ಪ್ರಕಾರ ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನಾನೇ ಹಾಸನ ಅಭ್ಯರ್ಥಿ ಎಂದು ವರಿಷ್ಠರ ಮೇಲೆ ಒತ್ತಡ ತಂತ್ರ ಹಾಕ್ತಿದ್ದಾರಾ ಭವಾನಿ ರೇವಣ್ಣ?
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಒಂದು ಸಂಚು ರೂಪಿಸುತ್ತಿದೆ. ಇದರಲ್ಲಿ ಬಿಜೆಪಿ ನಡ್ಡಾ, ಕಟೀಲ್, ಸಿಎಂ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಇದ್ದಾರೆ. ಇದನ್ನ ರಮೇಶ್ ಕೈಯಲ್ಲಿ ಹೇಳಿಸಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಮನವರಿಕೆ ಆಗಿದೆ. ಕಾಂಗ್ರೆಸ್ ಗೆಲ್ಲುತ್ತೆ ಅಂತಾ ಮನವರಿಕೆ ಆಗಿದೆ. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರೋ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸರ್ಕಾರ 40% ಸರ್ಕಾರ. ಬೆಂಗಳೂರಿನಲ್ಲಿ 50% ಕಮಿಷನ್ ಹೊಡೆಯುತ್ತಿದ್ದಾರೆ. ಪೋಸ್ಟಿಂಗ್ ಹಾಕಲು ಲಂಚ ಕೊಡಬೇಕು. ಎಲ್ಲಾ ಕಚೇರಿಗಳಲ್ಲಿ ಲಂಚ ಇಲ್ಲದೆ ಕೆಲಸ ಆಗೊಲ್ಲ. ಇದರಿಂದ ಜನರಿಗೆ ಸಮಸ್ಯೆ ಆಗಿದೆ. ಈ ಚುನಾವಣೆಗೆ 30 ಸಾವಿರ ಕೋಟಿ ಖರ್ಚು ಮಾಡುವ ಪ್ಲ್ಯಾನ್ ಬಿಜೆಪಿ ಮಾಡಿದೆ. ಭ್ರಷ್ಟಾಚಾರದಿಂದ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ಒಂದು ಮತಕ್ಕೆ 6 ಸಾವಿರ ಕೊಡೋಕೆ ಹೊರಟಿದ್ದಾರೆ. ಅಂದರೆ 30 ಸಾವಿರ ಕೋಟಿ ಹಣ ಹಂಚಲು ಮುಂದಾಗಿದ್ದಾರೆ. ನಡ್ಡಾ, ಸಿಎಂ, ಕಟೀಲ್‌ಗೆ ಗೊತ್ತಿಲ್ಲದೆ ರಮೇಶ್ ಜಾರಕಿಹೋಳಿ ಇದನ್ನ ಹೇಳೊಲ್ಲ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಬಿಜೆಪಿಗೆ ಪಾರದರ್ಶಕವಾಗಿ ಚುನಾವಣೆ ಮಾಡೋ ಆಸೆ ಇಲ್ಲ. ಪ್ರಜಾಪ್ರಭುತ್ವ ಬುಡಮೇಲು ಮಾಡೋಕೆ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಒಳ್ಳೆಯ ಮೇಕಪ್ ಮಾಡಿಕೊಂಡು ಬಂದ ಪಕ್ಷಕ್ಕೆ ಜೆಡಿಎಸ್ ಬೆಂಬಲ: ಸಿಎಂ ಇಬ್ರಾಹಿಂ
ಚುನಾವಣೆ ಪ್ರಾಮಾಣಿಕವಾಗಿ ನಡೆಯಬೇಕು. ಪ್ರಜಾಪ್ರಭುತ್ವ ಉಳಿಬೇಕು. ಆಸೆ, ಆಮಿಷ ಒಡ್ಡಿ ಮತ ಕೇಳೋದು ಕಾನೂನುಬಾಹಿರ. ಎಲೆಕ್ಷನ್ ಕಮಿಷನ್ ನಿಯಮ ಇದೆ. ಎಲ್ಲಾ ಕಂಪ್ಲೆಂಟ್‌ನಲ್ಲಿ ಬರೆದಿದ್ದೇವೆ. ಕೂಡಲೇ FIR ಹಾಕಿ ಎಲ್ಲರನ್ನೂ ಬಂಧನ ಮಾಡಬೇಕು ಎಂದು ಆಗ್ರಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k