Bengaluru CityLatestLeading NewsMain Post

ಕಾಂಗ್ರೆಸ್‌ನಲ್ಲಿ ಡಬಲ್ ಫೈಟ್; ಡಿಕೆಶಿ, ಸಿದ್ದುಗೆ ದೊಡ್ಡ ತಲೆನೋವು?

ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಅಭ್ಯರ್ಥಿಗಳ ಗುದ್ದಾಟ ಜೋರಾಗಿದೆ. 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳು ಸ್ಟ್ರಾಂಗ್ ವಾರ್ ನಡೆಸುತ್ತಿದ್ದಾರೆ. ಸಿದ್ದು (Siddaramaiah) ಬೆಂಬಲಿಗರು, ಡಿಕೆಶಿ (D.K.Shivakumar) ಬೆಂಬಲಿಗರು ಇರುವ ಕ್ಷೇತ್ರಗಳಲ್ಲಿ ಸಂಧಾನ ಸೂತ್ರವೇ ಸವಾಲಾಗಿದೆ. ಹಾಲಿ ಕೈ ಶಾಸಕರ ಕ್ಷೇತ್ರಗಳಲ್ಲಿನ ಕದನಕ್ಕೆ ಬ್ರೇಕ್ ಬೀಳುತ್ತಾ? ಹೈಕಮಾಂಡ್ ಸಂಧಾನ ಏನು ಎಂಬ ಕುತೂಹಲದ ಚರ್ಚೆಗೆ ವೇದಿಕೆ ಸೃಷ್ಟಿಯಾಗಿದೆ.

ಅಂದಹಾಗೆ ಪ್ರಜಾಧ್ವನಿಯಲ್ಲಿ ಕೆಲ ಕಡೆಗಳಲ್ಲಿ ಶಕ್ತಿ ಪ್ರದರ್ಶನ ನಡೆದಿದ್ರೆ, ಕೆಲ ಕಡೆ ಶೀತಲ ಸಮರವೂ ಕೂಡ ಜೋರಾಗಿತ್ತು. 30ಕ್ಕೂ ಹೆಚ್ಚು ಕ್ಷೇತ್ರಗಳ ಪೈಕಿ ಒಂದೊಂದು ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ಪೈಪೋಟಿ ಇದೆ. ಇದನ್ನೂ ಓದಿ: ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ

ಕಾಂಗ್ರೆಸ್‌ನಲ್ಲಿ ಡಬಲ್ ಫೈಟ್; ಡಿಕೆಶಿ, ಸಿದ್ದುಗೆ ದೊಡ್ಡ ತಲೆನೋವು?

ಈಗಾಗಲೇ ಆ ಡಬ್ಬಲ್ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ ಕಂಡಿರುವ ಡಿಕೆಶಿ, ಸಿದ್ದರಾಮಯ್ಯ ಹೇಗೆ ಬಗೆಹರಿಸಬೇಕೆಂಬ ಯೋಚನೆಯಲ್ಲಿದ್ದಾರೆ. ಇನ್ನು ಕೆಲ ಕ್ಷೇತ್ರಗಳಂತೂ ಸಿದ್ದರಾಮಯ್ಯ ಬೆಂಬಲಿಗರು, ಡಿಕೆಶಿ ಬೆಂಬಲಿಗರಿಂದಲೇ ಫೈಟ್ ಜೋರಾಗಿದೆ. ಹಾಗಾಗಿ ಪಕ್ಷದ ವೇದಿಕೆಯಲ್ಲೇ ಡಿಕೆಶಿ, ಸಿದ್ದು ನೇತೃತ್ವದಲ್ಲೇ ಮಹಾ ಸಂಧಾನ ನಡೆಯಬೇಕಿದೆ.

ಈ ನಡುವೆ ಕಾಂಗ್ರೆಸ್ ಹೈಕಮಾಂಡ್‌ನಿಂದಲೂ ಉಭಯ ನಾಯಕರ ರಾಜಿ ಸೂತ್ರಕ್ಕೆ ಸಂದೇಶ ರವಾನೆ ಆಗಿದೆ ಎನ್ನಲಾಗಿದೆ. ಇಬ್ಬರು ಪಬ್ರಲ ಅಭ್ಯರ್ಥಿಗಳು ಇರುವ ಕಡೆ ಫೆಬ್ರವರಿ ಒಳಗೆ ಸಂಧಾನ ಮುಗಿಸಲು ಪ್ಲ್ಯಾನ್ ಇದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕಿರಿಕ್ – ದಲಿತರ ಬಳಿಕ ಅಲ್ಪಸಂಖ್ಯಾತರಿಂದ ವಾರ್

ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಕಾ ಬೇಡ್ವಾ? ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಆ ಕಾರಣಕ್ಕಾಗಿಯೇ ಕಾಂಗ್ರೆಸ್‌ನಲ್ಲಿ ಕೆಲ ಹಾಲಿ ಶಾಸಕರಿಂದಲೂ ಬಸ್ ಯಾತ್ರೆ ವೇಳೆ ಶಕ್ತಿ ಪ್ರದರ್ಶನ ಎಂಬ ಮಾತುಗಳು ಕೇಳಿಬಂದಿವೆ. ಹಾಗಾದ್ರೆ ಡಬ್ಬಲ್ ಫೈಟ್ ಸಂಧಾನ ಸಕ್ಸಸ್ ಆಗುತ್ತಾ? ಇಲ್ಲ ಬಂಡಾಯಗಳು ಜಾಸ್ತಿ ಆಗುತ್ತಾ ಎಂಬುದಕ್ಕೆ ಫೆಬ್ರವರಿ ಅಂತ್ಯದ ತನಕ ಕಾಯಬೇಕು.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button