DistrictsKarnatakaKarnataka ElectionKolarLatestMain PostStates

ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕಿರಿಕ್ – ದಲಿತರ ಬಳಿಕ ಅಲ್ಪಸಂಖ್ಯಾತರಿಂದ ವಾರ್

ಕೋಲಾರ: ವಿಧಾನಸಭಾ ಕ್ಷೇತ್ರ (Kolar Vidhanasabha Constituency) ದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಘೋಷಣೆ ಬೆನ್ನಲ್ಲೆ ದಿನದಿಂದ ದಿನಕ್ಕೆ ಕೋಲಾರ ಕ್ಷೇತ್ರದ ರಾಜಕೀಯ ಚಿತ್ರವಣವೇ ಬದಲಾಗುತ್ತಿದೆ. ಯಾವ ಸಮುದಾಯ ನಮ್ಮ ಕಡೆ ಇರುತ್ತಾರೆ ಎಂದು ಸಿದ್ದರಾಮಯ್ಯ ನಂಬಿಕೊಂಡು ಬಂದಿದ್ದಾರೋ ಆ ಸಮುದಾಯವೇ ಈಗ ಕಾಂಗ್ರೇಸ್ ವಿರುದ್ಧ ತಿರುಗಿ ಬೀಳುತ್ತಿದೆ.

ಸಿದ್ದರಾಮಯ್ಯ ಕೋಲಾರದ ಸ್ಪರ್ಧೆ ಹಿಂದೆ ಅವರದ್ದೇ ಆದ ಜಾತಿ ಲೆಕ್ಕಾಚಾರವಿತ್ತು. ಕಾರಣ ಕೋಲಾರದಲ್ಲಿ ಅಹಿಂದ ಮತಗಳು ಹೆಚ್ಚಾಗಿದ್ದು, ಅದರಲ್ಲಿ ಅರ್ಧ ಮತ ಸಿದ್ದು ಪರ ಚಲಾವಣೆಯಾದರೆ ಸಾಕು ಎಂಬ ಲೆಕ್ಕಾಚಾರ ಅವರಿಗಿತ್ತು. ಆದರೆ ಈಗ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿದೆ. ಮೊದಲು ಅವರದ್ದೇ ಸಮುದಾಯ ಜಿಲ್ಲಾ ಕುರುಬ ಸಂಘದಲ್ಲಿ ಭಿನ್ನಾಭಿಪ್ರಾಯ ಮೂಡಿ ಕುರುಬ ಸಂಘದ ಮುಖಂಡರೇ ಸಿದ್ದರಾಮಯ್ಯ ಕೋಲಾರಕ್ಕೆ ಬರಬಾರದು ಎಂದಿದ್ರು. ಆ ನಂತರ ದಲಿತ ಸಮುದಾಯದ ಕೆಲವು ದಲಿತ ಮುಖಂಡರು ಕರಪತ್ರಗಳನ್ನು ಹಂಚಿಕೆ ಮಾಡಿ ದಲಿತ ವಿರೋಧಿ ಸಿದ್ದರಾಮಯ್ಯರನ್ನು ಸೋಲಿಸಿ ದಲಿತ ನಾಯಕರಿಗೆ ಸಿಎಂ ಆಗುವ ಹಾದಿಯನ್ನು ಸುಗಮಗೊಳಿಸಿ ಎಂಬ ಕರಪತ್ರ ಹಂಚಿಕೆ ಮಾಡಿದರು.

ಈ ಎಲ್ಲಾ ಬೆಳವಣಿಗೆಗಳ ಈ ಬೆನ್ನಲ್ಲೇ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ (Congress) ವಿರುದ್ಧ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಕಾಂಗ್ರೇಸ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಕೋಲಾರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಿಂದ ದೂರ ಉಳಿದ ಮುಖಂಡರು ಕಾಂಗ್ರೆಸ್ ಪಕ್ಷ ನಮಗೆ ಸ್ಥಾನ ಮಾನ ನೀಡದೆ ಹೋದರೆ ನಾವು ಬೇರೆಯ ನಿರ್ಧಾರಕ್ಕೆ ಚಿಂತಿಸುತ್ತೇವೆ ಎಂದಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಪ್ರಮುಖ ಹಿನ್ನಡೆ ಎಂದರೆ ತಪ್ಪಾಗೋದಿಲ್ಲ ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ. ಇದನ್ನೂ ಓದಿ: ಬಿಜೆಪಿಗೆ ಬೆಂಗಳೂರು ವರಿ; ಬೆಂಗಳೂರು ಬಾಸ್ ಯಾರು? ಪ್ರಧಾನಿ ನರೇಂದ್ರ ಮೋದಿಗೂ ತಳಮಳ

ಪ್ರಜಾಧ್ವನಿ ಕಾರ್ಯಕ್ರಮದ ಹಿಂದಿನ ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar)ಮಾಲೂರಿನ ಲಕ್ಷ್ಮಿನಾರಾಯಣ್ ಅವರನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದೆ. ಇದರಿಂದ ಅಲ್ಪಸಂಖ್ಯಾತ ಮುಖಂಡ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮುಬಾರಕ್ ಪ್ರಜಾಧ್ವನಿ ಕಾರ್ಯಕ್ರಮದಿಂದ ದೂರ ಉಳಿದರು. ಇವರ ಜೊತೆಗೆ ಸುಮಾರು 12 ಜನ ನಗರಸಭೆ ಸದಸ್ಯರು ಹಾಗೂ ಕೆಲವು ಗ್ರಾಮಪಂಚಾಯತ್ ಮುಖಂಡರು ಸೇರಿ ಸಮುದಾಯದ ಹಲವು ಮುಖಂಡರು ಕಾರ್ಯಕ್ರಮದಿಂದ ದೂರ ಉಳಿದಿದರು.

ಒಟ್ಟಿನಲ್ಲಿ ಅಹಿಂದ ಮತಗಳು ಹೆಚ್ಚಾಗಿವೆ ಅನ್ನೋ ಕಾರಣಕ್ಕೆ ಕೋಲಾರ ಕ್ಷೇತ್ರ ನಮಗೆ ಸೇಫ್ ಎಂದುಕೊಂಡು ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದ ಸಿದ್ದರಾಮಯ್ಯಗೆ ಈಗ ಅಹಿಂದ ಸಮುದಾಯವೇ ಉಲ್ಪಾ ಹೊಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಲೆಕ್ಕಾಚಾರಗಳು, ಸಮೀಕರಣಗಳೆಲ್ಲಾ ಉಲ್ಟಾ ಹೊಡೆಯುತ್ತಾ ಇಲ್ಲಾ, ಸ್ಪರ್ಧೆ ಮಾಡ್ತಾರಾ ಇಲ್ಲಾ ನಮಗ್ಯಾಕೆ ಈ ತಲೆನೋವು ಎಂದು ಯೂಟರ್ನ್ ಹೊಡೆಯುತ್ತಾರಾ ಅನ್ನೋದು ಸದ್ಯದ ಕುತೂಹಲ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button