
ಚಿಕ್ಕೋಡಿ (ಬೆಳಗಾವಿ): ಸಮ್ಮಿಶ್ರ ಸರ್ಕಾರದ ಪ್ರಸಂಗ ಬಂದರೆ ಒಳ್ಳೆಯ ಮೇಕಪ್ ಮಾಡಿಕೊಂಡು ಬಂದ ಪಕ್ಷಕ್ಕೆ ಜೆಡಿಎಸ್ (JDS) ಬೆಂಬಲ ನೀಡಲಿದೆ ಎಂದು ಜನತಾದಳದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.
ಚಿಕ್ಕೋಡಿ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 2023 ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ ಸಮ್ಮಿಶ್ರ ಸರ್ಕಾರದ ಒಲವು ವ್ಯಕ್ತಪಡಿಸಿದರು. ಯಾರು ಒಳ್ಳೆಯ ಮೇಕಪ್ ಹಾಕಿಕೊಂಡು ಬರುತ್ತಾರೆ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ನಾನೇ ಹಾಸನ ಅಭ್ಯರ್ಥಿ ಎಂದು ವರಿಷ್ಠರ ಮೇಲೆ ಒತ್ತಡ ತಂತ್ರ ಹಾಕ್ತಿದ್ದಾರಾ ಭವಾನಿ ರೇವಣ್ಣ?
ಕಾಂಗ್ರೆಸ್ (Congress) ಉಚಿತ ವಿದ್ಯುತ್ ನೀಡುವ ಘೋಷಣೆ ವಿಚಾರದ ಕುರಿತು ಮಾತನಾಡಿ, ನೀರು ಕೊಡದವರು ಉಚಿತವಾಗಿ ಏನಾದರೂ ನೀಡುತ್ತಾರಾ..?, ಎಲ್ಲವೂ ಸುಳ್ಳು ಹೇಳುತ್ತಾರೆ, ಕುಮಾರಸ್ವಾಮಿ ಹೇಳಿದಂತೆ ನಡೆಯುತ್ತಾರೆ. ಹೇಳಿದಂತೆ ನಡೆಯುವುದು ಜೆಡಿಎಸ್ ಪಕ್ಷ. ನಾವು ಸ್ಪಷ್ಟವಾಗಿ ಬಹುಮತ ಪಕ್ಷವಾಗಿ ಬರುತ್ತೇವೆ. ನುಡಿದಂತೆ ನಾವು ನಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಬಿಜೆಪಿ ನಾಯಕರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಈಗಾಗಲೇ ನಾವು ಗಂಡುಮಕ್ಕಳು 93 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದೇವೆ. ಬಿಜೆಪಿ ಅವರು ಒಂದು ಅಭ್ಯರ್ಥಿ ಹೆಸರು ಘೋಷಣೆ ಮಾಡಲಿ. ಬಸವರಾಜ ಬೊಮ್ಮಾಯಿ ಎಲ್ಲಿಂದ ಸ್ವರ್ಧೆ ಮಾಡುತ್ತಾರೆ..?, ಜಗದೀಶ್ ಶೆಟ್ಟರ್ (Jagadeesh Shettar) ಎಲ್ಲಿಂದ ಸ್ವರ್ಧೆ ಮಾಡುತ್ತಾರೆ ಎಂಬುದು ಮೊದಲು ಹೇಳಲಿ ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಎಷ್ಟು ಸ್ಥಾನ ಬರುತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಾವು 123 ಸ್ಥಾನ ಪಡೆಯುತ್ತೇವೆ. ಬೆಳಗಾವಿ ಚಿಕ್ಕೋಡಿಯಲ್ಲಿ ಏಳು ಸ್ಥಾನ ಗೆಲ್ಲುವ ನಿರೀಕ್ಷೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಡಬಲ್ ಫೈಟ್; ಡಿಕೆಶಿ, ಸಿದ್ದುಗೆ ದೊಡ್ಡ ತಲೆನೋವು?
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k