ಲಂಡನ್: 22ನೇ ಕಾಮನ್‍ವೆಲ್ತ್ ಕ್ರೀಡಾಕೂಟದ 9ನೇ ದಿನ ಭಾರತಕ್ಕೆ ಬಾಕ್ಸಿಂಗ್‍ನಲ್ಲಿ ಮೊದಲ ಪದಕ ಸಿಕ್ಕಿದೆ. ಮಹಿಳೆಯರ 57-60 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಜಾಸ್ಮಿನ್ ಲಂಬೋರಿಯಾ ಕಂಚಿನ ಪದಕ ಗೆದ್ದಿದ್ದಾರೆ.
Advertisement
ಇಂಗ್ಲೆಂಡ್‍ನ ಗೆಮ್ಮಾ ರಿಚರ್ಡ್‌ಸನ್ ವಿರುದ್ಧ 2-3 ಅಂತರದಿಂದ ಗೆದ್ದ ಬಾಕ್ಸರ್ ಜಾಸ್ಮಿನ್ ಲಂಬೋರಿಯಾ ಕಂಚಿನ ಹಾರ ಹಾಕಿಸಿಕೊಂಡರು. ಇದನ್ನೂ ಓದಿ: CWG 2022: ಲಾನ್ ಬಾಲ್ಸ್‌ನಲ್ಲಿ ರಜತ ಪದಕ ಗೆದ್ದ ಭಾರತದ ಪುರುಷರ ತಂಡ
Advertisement
ಈ ಮೂಲಕ ಭಾರತ 9ನೇ ದಿನ 4ನೇ ಪದಕ ಗೆದ್ದಂತಾಗಿದೆ. ಈ ಮೊದಲು ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ, ಲಾನ್ ಬಾಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಬಾಕ್ಸಿಂಗ್‍ನಲ್ಲಿ ಕಂಚಿನ ಪದಕದೊಂದಿಗೆ ಜಾಸ್ಮಿನ್ ಲಂಬೋರಿಯಾ ಇತರ ಬಾಕ್ಸರ್‌ಗಳಿಗೆ ಹುರುಪು ನೀಡಿದ್ದಾರೆ.
Advertisement
Team India’s Jasmine Lamboria wins her maiden ???? in the Women’s Boxing Over 57-60 KG Category @birminghamcg22 #ekindiateamindia #b2022 pic.twitter.com/GDX7WAQhs7
— Team India (@WeAreTeamIndia) August 6, 2022
Advertisement
ಈ ಮೂಲಕ ಭಾರತ ತಂಡ ಕಾಮನ್‌ವೆಲ್ತ್ 2022ರಲ್ಲಿ 9 ಚಿನ್ನ, 11 ಬೆಳ್ಳಿ, 10 ಕಂಚಿನ ಪದಕದೊಂದಿಗೆ ಒಟ್ಟು 30 ಪದಕ ಬಾಚಿಕೊಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: CWG 2022: ಇಂಗ್ಲೆಂಡ್ ವಿರುದ್ಧ 4 ರನ್‍ಗಳ ರೋಚಕ ಜಯ – ಫೈನಲ್‍ಗೆ ಲಗ್ಗೆಯಿಟ್ಟ ಭಾರತ