LatestLeading NewsMain PostSports

CWG 2022: ಲಾನ್ ಬಾಲ್ಸ್‌ನಲ್ಲಿ ರಜತ ಪದಕ ಗೆದ್ದ ಭಾರತದ ಪುರುಷರ ತಂಡ

Advertisements

ಲಂಡನ್: ಕಾಮನ್‍ವೆಲ್ತ್ ಗೇಮ್ಸ್‌ನ ಪುರುಷರ ಲಾನ್ ಬಾಲ್ಸ್‌ನಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಪದಕ ಪಡೆದು ಇತಿಹಾಸ ಬರೆದಿದೆ.

ಉತ್ತರ ಐರ್ಲೆಂಡ್‌ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತದ ಸುನಿಲ್ ಬಹದ್ದೂರ್, ನವನೀತ್ ಸಿಂಗ್, ಚಂದ್ರ ಕುಮಾರ್ ಸಿಂಗ್ ಮತ್ತು ದಿನೇಶ್ ಕುಮಾರ್ ಒಳಗೊಂಡ ಭಾರತ ತಂಡ 5-18 ಅಂಕಗಳ ಅಂತರದಿಂದ ಪರಾಭವಗೊಂಡು ಬೆಳ್ಳಿಗೆ ತೃಪ್ತಿ ಪಟ್ಟಿತು. ಐರ್ಲೆಂಡ್ ತಂಡ ಚಿನ್ನದ ಪದಕ ಗೆದ್ದು ಸಂಭ್ರಮಿಸಿತು. ಇದನ್ನೂ ಓದಿ: CWG 2022: ಇಂಗ್ಲೆಂಡ್ ವಿರುದ್ಧ 4 ರನ್‍ಗಳ ರೋಚಕ ಜಯ – ಫೈನಲ್‍ಗೆ ಲಗ್ಗೆಯಿಟ್ಟ ಭಾರತ

ಈ ಮೂಲಕ ಭಾರತ 22ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 9 ಚಿನ್ನ, 11 ಬೆಳ್ಳಿ, 9 ಕಂಚು ಸೇರಿ 29 ಪದಕ ತನ್ನದಾಗಿಸಿಕೊಂಡಿದೆ. 9ನೇ ದಿನದ ಆರಂಭದಲ್ಲಿ ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದಿದ್ದರು. ಇದನ್ನೂ ಓದಿ: CWG 2022: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ

ಕೆಲದಿನಗಳ ಹಿಂದೆ ಮಹಿಳೆಯರ ಲಾನ್‌ ಬಾಲ್ಸ್‌ನಲ್ಲಿ ಲೌಲಿ ಚೌಬೆ, ಪಿಂಕಿ, ನಯನ್‌ಮೊನಿ ಸೈಕಿಯಾ ಹಾಗೂ ರೂಪಾ ರಾಣಿ ತಿರ್ಕೆ ಅವರನ್ನೊಳಗೊಂಡ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 17-10 ಅಂತರದಿಂದ ಸೋಲಿಸಿ ಚಿನ್ನ ಗೆದ್ದಿತ್ತು.

Live Tv

Leave a Reply

Your email address will not be published.

Back to top button