ಚಂಡೀಗಢ: ಮಾಲ್‍ವೊಂದರ ಫುಡ್ ಕೋರ್ಟ್‍ನಲ್ಲಿ ಗ್ರಾಹಕರೊಬ್ಬರು ತೆಗೆದುಕೊಂಡಿದ್ದ ಊಟದಲ್ಲಿ ಜಿರಳೆ ಸಿಕ್ಕ ಘಟನೆ ಚಂಡೀಗಢದಲ್ಲಿ ನಡೆದಿದೆ.
ಮೌಲಿ ಕಾಂಪ್ಲೆಕ್ಸ್‌ನ ನಿವಾಸಿ ಅನಿಲ್ ಕುಮಾರ್ ತಮ್ಮ ಪತ್ನಿ ಹಾಗೂ ಸಹೋದರಿಯೊಂದಿಗೆ ಊಟ ಮಾಡಲು ಬಂದಿದ್ದರು. ಅಲ್ಲಿಯ ಅಂಗಡಿಯೊಂದರಲ್ಲಿ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ್ದಾರೆ. ಇದಾದ ಬಳಿಕ ಫ್ರೈಡ್ ರೈಸ್ ತಿನ್ನುವಾಗ ಜಿರಳೆ ಇರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ರಚನೆ ಜಾರಿಗೆ ತರೋದು ಸರ್ಕಾರಕ್ಕೆ ಬಿಟ್ಟಿದ್ದು: ಟಿ.ಎಸ್. ನಾಗಾಭರಣ
Advertisement
Advertisement
ಇದರಿಂದ ಭಯಭೀತರಾದ ಅವರು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಆ ಸಿಬ್ಬಂದಿ ಅದು ಈರುಳ್ಳಿ ಎಂದು ಅವರ ಬಳಿಯೇ ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ರೆಸ್ಟೋರೆಂಟ್ ಮತ್ತು ಮಾಲ್ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನಿಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ