ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) Don’t Allow him to Speak ಹೇಳಿಕೆ ಬಗ್ಗೆ ವಾಗ್ವಾದ ನಡೆದಿದೆ.
ಶಾಸಕ ಶಿವಲಿಂಗೇಗೌಡ ಹಾಗೂ ಶಾಸಕ ಅಶ್ವತ್ಥನಾರಾಯಣ್ ಮಾತನಾಡುವ ವೇಳೆ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿದ್ದಾರೆ. ಈ ವೇಳೆ ಡಿಸಿಎಂ ಆಗಿದ್ದವರು, ಮಂತ್ರಿ ಆಗಿದ್ದವರು, ಬೇರೆಯವರು ಮಾತನಾಡುವಾಗ ಅವಕಾಶ ಮಾಡಿಕೊಡಬೇಕು. ನಿಮ್ಮ ಮಾತುಗಳು ಏನಾದರೂ ಇದ್ದರೆ ಪಾಯಿಂಟ್ ಆಫ್ ಆರ್ಡರ್ ರೈಸ್ ಮಾಡಬೇಕು ಎಂದು ಅಶ್ವತ್ಥನಾರಾಯಣ್ ಅವರಿಗೆ ಹೇಳಿದ್ದಾರೆ. ಇದನ್ನೂ ಓದಿ: ಹಿರೇಕೋಡಿ ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ಜಪ್ತಿ
ಇದಕ್ಕೆ ಪ್ರತಿಯಾಗಿ ನಾವು ವಿಷಯಾಂತರ ಮಾಡಿದಾಗ ಅವಕಾಶ ಕೊಡಲಿಲ್ಲ. ಈಗ ಅವರು ಮಾತಾಡಿದ್ರೆ ಸುಮ್ನೆ ಇರಬೇಕಾ ಎಂದು ಅಶ್ವತ್ಥನಾರಾಯಣ್ ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ ಗರಂ ಆದ ಸಿಎಂ Don’t Allow him to Speak ಎಂದಿದ್ದಾರೆ. ಇದಕ್ಕೆ ಶಾಸಕ ಸಿ.ಸಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಡತದಿಂದ ಪದ ತೆಗೆಯವಂತೆ ಆಗ್ರಹಿಸಿದ್ದಾರೆ.
ನಾನು ಮಾತಾಡಿರುವುದು ಅಸಂಸದೀಯ ಪದನಾ? ನಾನು ಸೂಚನೆ ಕೊಟ್ಟಿದ್ದಲ್ಲ. ಪ್ಲೀಸ್ ಡೋಂಟ್ ಅಲೋ ಹಿಮ್ ಟು ಸ್ಪೀಕ್ ಎಂದಿದ್ದೇನೆ ಎಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ಇದಕ್ಕೆ ಶಾಸಕ ಸುರೇಶ್ ಕುಮಾರ್, ಹಾಗಾದ್ರೆ ಪ್ಲೀಸ್ Kill Him ಎಂದು ಹೇಳಲು ಆಗುತ್ತದೆಯೇ? ಪ್ಲೀಸ್ ಸೇರಿಸಿ ಏನು ಬೇಕಾದರೂ ಹೇಳಬಹುದಾ? ಎಂದು ಟಾಂಗ್ ಕೊಟ್ಟಿದ್ದಾರೆ.
ಶಿವಲಿಂಗೇಗೌಡ ಮಾತನಾಡುವಾಗ ಮಧ್ಯಪ್ರವೇಶ ಮಾಡಿದ ಸವದಿ, ಕೇಂದ್ರದ ಬಗ್ಗೆ ಮಾತಾಡಿದರೆ ಅವರು ಸುಮ್ಮನೆ ಕೂರಲು ಆಗುತ್ತದೆಯೇ? ಎಲ್ಲ ಪೈಪೋಟಿಯಲ್ಲಿ ಮಾತನಾಡುತ್ತಿದ್ದಾರೆ. ಎಲ್ಲರಿಗೂ ಮಾತಾಡಿದ ತಕ್ಷಣ ಮಾರ್ಕ್ಸ್ ಬರುತ್ತಿದೆ. ವಿರೋಧ ಪಕ್ಷದ ನಾಯಕನ ಆಯ್ಕೆಯ ಮಾರ್ಕ್ಸ್ ಪ್ರಿಂಟ್ ಆಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಅಶ್ವತ್ಥನಾರಾಯಣ್, ಅಯ್ಯೋ ತಾವು ಇಲ್ಲಿದ್ದೇ ಹೋಗಿದ್ದಲ್ಲವೇ? ಯಾವ ನೈತಿಕತೆ ಇದೆ ನಮ್ಮ ಬಗ್ಗೆ ಮಾತಾನಾಡಲು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸವದಿ, ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಹೊರಗೆ ಬಂದಿದ್ದೀನೆ. ನಿಮ್ಮ ರೀತಿ ಮುದುಡಿಕೊಂಡು ಕುಳಿತಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಅಕ್ಕಿ, ಅನುದಾನ ಜಟಾಪಟಿ – ಶಿವಲಿಂಗೇಗೌಡ ವರ್ಸಸ್ ಬಿಜೆಪಿ ಶಾಸಕರ ವಾಕ್ಸಮರ
Web Stories