ಚಿಕ್ಕೋಡಿ (ಬೆಳಗಾವಿ): ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ (Acharya Kam Kumar Nandi) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ಅನ್ನು ಚಿಕ್ಕೋಡಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಹತ್ಯೆಗೂ ಮುನ್ನ ಅಂದರೆ ಜುಲೈ 5 ರ ರಾತ್ರಿ ಹಂತಕ ನಾರಾಯಣ ಮಾಳಿಯು (Narayana Maali) ಚಿಕ್ಕೋಡಿಯಲ್ಲಿ ಹಸನಸಾಬ್ ದಲಾಯತ್ ಸಂಪರ್ಕಿಸಿದ್ದನು. ಅಲ್ಲಿ ಹಸನಸಾಬ್ ದಲಾಯತ್‍ನ ಜೊತೆ ಮದ್ಯಪಾನ ಮಾಡಿ ಗೋಣಿ ಚೀಲ ಹಾಗೂ ಮಾರಕಾಸ್ತ್ರ ತೆಗೆದುಕೊಂಡು ಚಿಕ್ಕೋಡಿಯಲ್ಲಿ ಬೈಕ್‍ಗೆ ಪೆಟ್ರೋಲ್ ಹಾಕಿಸಿಕೊಂಡು ಹಂತಕರು ಆಶ್ರಮದತ್ತ ತೆರಳಿದ್ದರು.
Advertisement
Advertisement
ಆಶ್ರಮದಲ್ಲಿ ಮೊದಲು ಜೈನಮುನಿಗಳಿಗೆ ಕರೆಂಟ್ ಶಾಕ್ ನೀಡಿ ಕೊಲ್ಲಲು ಯತ್ನಿಸಲಾಯಿತು. ಬಳಿಕ ಟವೆಲ್‍ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಲಾಯಿತು. ಕೊಲೆಯ ಬಳಿಕ ಚೀಲದಲ್ಲಿ ಮೃತದೇಹ ಕಟ್ಟಿ ಬೈಕ್‍ನಲ್ಲಿ ಹೊತ್ತೊಯ್ದಿದ್ದರು. ಸುಮಾರು 39 ಕಿಮೀ ಬೈಕ್‍ನಲ್ಲಿ ಜೈನಮುನಿಗಳ ಮೃತದೇಹ ಹೊತ್ತೊಯ್ದಿದ್ದರು. ಇದನ್ನೂ ಓದಿ: ಹೀರೆಕೋಡಿ ಜೈನಮುನಿ ಹತ್ಯೆ ಪ್ರಕರಣ – ಸ್ವಾಮೀಜಿಯ ಡೈರಿ ರಹಸ್ಯ ಕೆದಕುತ್ತಿರುವ ಪೊಲೀಸರು
Advertisement
Advertisement
ನಂದಿಪರ್ವತ ಆಶ್ರಮದಿಂದ ಪರ್ಯಾಯ ಮಾರ್ಗವಾಗಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಗುಡ್ಡಗಾಡು ಪ್ರದೇಶದಲ್ಲಿ ಮೃತದೇಹವನ್ನು ಹಂತಕರು ಕತ್ತರಿಸಿದ್ದರು. ಮೃತದೇಹ ಕತ್ತರಿಸಿ ಚೀಲದಲ್ಲಿ ಕಟ್ಟಿಕೊಂಡು ಕಟಕಬಾವಿಯಲ್ಲಿರುವ ಸ್ವಂತ ಗದ್ದೆಗೆ ಹೋಗಿದ್ದರು. ಅಲ್ಲಿ ಬೋರ್‍ವೆಲ್‍ನಲ್ಲಿ ಮೃತದೇಹದ ತುಂಡು ಎಸೆದು ವಾಪಸ್ ಆಗಿದ್ದರು.
Web Stories