ಮೈಸೂರು: ಮುಡಾ ಟೆನ್ಷನ್ ನಡುವೆಯೂ (MUDA Scam) ಸಿಎಂ ಸಿದ್ದರಾಮಯ್ಯ (Siddaramaiah) ಮೈಸೂರಿಗೆ (Mysuru) ಭೇಟಿ ನೀಡಿದ್ದಾರೆ. ಅಲ್ಲದೇ ವರುಣಾ ಕ್ಷೇತ್ರದಲ್ಲಿ (Varuna) 313 ಕಾಮಗಾರಿಗಳಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರಕ್ಕೆ 486.98 ಕೋಟಿ ರೂ.ಹಣವನ್ನು ಸಿಎಂ ಘೋಷಣೆ ಮಾಡಿದ್ದಾರೆ. ವರುಣಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಕ್ಷೇತ್ರ. ಹೀಗಾಗಿ ಸ್ವ ಕ್ಷೇತ್ರದ ಅಭಿವೃದ್ಧಿಗೆ ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ. ಟಿ.ನರಸೀಪುರ- ನಂಜನಗೂಡು ರಸ್ತೆಯ ತಾಯೂರು ಗೇಟ್ ಬಳಿ (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.
Advertisement
Advertisement
ಮುಡಾ ಟೆನ್ಷನ್ ನಡುವೆಯೆ ಸಿಎಂ ಸ್ವಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಿರುವುದು ಸ್ವಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
Advertisement
ಒಂದು ಕಡೆ ಲೋಕಾಯುಕ್ತ ತನಿಖೆ, ಮತ್ತೊಂದು ಕಡೆ ಮುಡಾ ತನಿಖೆಗೆ ಇಡಿ ಎಂಟ್ರಿ ಕೊಟ್ಟಿದೆ. ಇದರ ಜೊತೆಗೆ ಈಗ ಸಿಎಂ ಪತ್ನಿ ಮೇಲೆ ಇನ್ನೊಂದು ಭೂ ಹಗರಣದ ಸುಳಿ ತಿರುಗುತ್ತಿದೆ. ಇಂತಹ ಭೂ ಟೆನ್ಷನ್ ನಡುವೆ ಸಿಎಂ ಸಿದ್ದರಾಮಯ್ಯ ತಮ್ಮ ತವರೂರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದಾರೆ.