ತಿರುನಂತಪುರಂ: ಕೇರಳಂ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀರಿಸಿದ ವಿ.ಡಿ ಸತೀಶನ್ (V.D. Satheesan) ಹೊಸ ಸರ್ಕಾರದ ಮೊದಲ ಸಂಪುಟ ಸಭೆಯಲ್ಲೇ ಪಂಚ ಗ್ಯಾರಂಟಿ ಪೈಕಿ ಎರಡು ಗ್ಯಾರಂಟಿಗಳನ್ನ ಈಡೇರಿಸಿದ್ದಾರೆ.
ಜೂನ್ 15 ರಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ (Free Bus For Womens) ಲಭ್ಯವಿರಲಿದೆ ಎಂದು ವಿಡಿಎಸ್ ಘೋಷಣೆ ಮಾಡಿದ್ದಾರೆ. ಅಲ್ಲದೇ ವೃದ್ಧರಿಗಾಗಿ ಪ್ರತ್ಯೇಕ ಇಲಾಖೆ ಸ್ಥಾಪನೆಗೂ ಸಂಪುಟ ಒಪ್ಪಿರುವುದಾಗಿ ತಿಳಿಸಿದ್ದಾರೆ.
The people of Keralam fought for this government. Their voice will guide it.
Warm congratulations to V.D. Satheesan ji and the entire cabinet, who will now represent the voice of every Keralite.
Thanks to K.C. Venugopal ji, who led this campaign from the frontlines.
This… pic.twitter.com/Rbty1zftU8
— Rahul Gandhi (@RahulGandhi) May 18, 2026
ಜೂ.15 ರಿಂದ ಫ್ರೀ ಬಸ್
ಜೂನ್ 15 ರ KSRTC ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಲಭ್ಯವಿರಲಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಂತರ ಪ್ರಕಟಿಸಲಾಗುತ್ತದೆ. ಇದರೊಂದಿಗೆ ವೃದ್ಧರಿಗಾಗಿ ವಿಶೇಷ ಇಲಾಖೆ ರಚಿಸಲು ಸಂಪುಟ ನಿರ್ಧರಿಸಿದೆ. ವೃದ್ಧರಿಗಾಗಿ ವಿಶೇಷ ಇಲಾಖೆ ತರುತ್ತಿರುವುದು ದೇಶದಲ್ಲಿ ಇದೇ ಮೊದಲು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂದುವರಿದು… ಆಶಾ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಮೊದಲ ಹಂತದಲ್ಲಿ 3,000 ರೂ. ಹೆಚ್ಚಳ ಮಾಡಲಾಗಿದ್ದು, ಒಟ್ಟು ವೇತನ 9,000 ರೂ. ನಿಂದ 12,000 ರೂ.ಗಳಿಗೆ ಏರಿಕೆಯಾಗಲಿದೆ. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಕಾರ್ಮಿಕರು (ಬಿಸಿಯೂಟ ಸಿಬ್ಬಂದಿ) ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಕರು ಮತ್ತು ಆಯಾಗಳ ವೇತನವನ್ನು ತಲಾ 1,000 ರೂ. ಹೆಚ್ಚಿಸಲಾಗಿದೆ ಎಂದು ಘೋಷಿಸಿದ್ದಾರೆ.

