ನವದೆಹಲಿ: ಇಲ್ಲಿನ ಜಂತರ್ ಮಂತರ್‌ನಲ್ಲಿ (Jantar Mantar) ನಡೆಯುತ್ತಿರುವ ಪ್ರತಿಭಟನಾಕಾರರಿಗೆ ಊಟ, ನೀರು ತಲುಪದಂತೆ ದೆಹಲಿ ಪೊಲೀಸರು (Delhi Police) ತಡೆಯುತ್ತಿದ್ದಾರೆ ಎಂದು ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಗಂಭೀರ ಆರೋಪ ಮಾಡಿದೆ.
ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು, ದೆಹಲಿ ಪೊಲೀಸರು ಜಂತರ್ ಮಂತರ್‌ನಿಂದ ಸುಮಾರು 5 ಕಿಮೀ ದೂರದಲ್ಲಿ ಚೆಕ್‌ಪೋಸ್ಟ್‌ಗಳನ್ನು ಪೊಲೀಸರು ಸ್ಥಾಪಿಸಿದ್ದಾರೆ. ಅಲ್ಲಿ ಪ್ರತಿಭಟನೆಗೆ ಹೋಗುವ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತಿದೆ. ಅಲ್ಲದೇ ಊಟ, ನೀರು ಇಲ್ಲಿಗೆ ಬರದಂತೆ ತಡೆಯಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ನೀಟ್ ಪ್ರತಿಭಟನೆಯಲ್ಲಿದ್ದಾರಾ ಕ್ರಿಮಿನಲ್ಸ್? – ಅಪರಾಧ ಹಿನ್ನೆಲೆಯುಳ್ಳ 2,500 ಮಂದಿ ಭಾಗಿ
ಪ್ರಿಯ ದೆಹಲಿ ಪೊಲೀಸರೇ, ನಿಮಗೆ ಬೇಕಾದುದನ್ನು ಮಾಡಿ. ಜನರು ಜಂತರ್ ಮಂತರ್‌ಗೆ ಬರುವುದನ್ನು ನೀವು ತಡೆಯಲು ಸಾಧ್ಯವಿಲ್ಲ. ಜನರು ಆಹಾರ ಸೇವಿಸುವುದನ್ನು ತಡೆಯಲು ನಿಮಗೆ ಸಾಧ್ಯವಿಲ್ಲ. ಜನರು ನಮಗೆ ಸಹಾಯ ಮಾಡುವುದನ್ನು ನೀವು ತಡೆಯಲು ಸಾಧ್ಯವಿಲ್ಲ. ಮುಖ್ಯವಾಗಿ, ಪ್ರಧಾನ್ ಅವರ ರಾಜೀನಾಮೆಯನ್ನು ನೀವು ತಡೆಯಲು ಸಾಧ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿಭಟನಾಕಾರರಿಗೆ ಆಹಾರವನ್ನು ತಡೆದ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಇದು ಸುಳ್ಳು, ಆಧಾರರಹಿತ ಮತ್ತು ದಾರಿತಪ್ಪಿಸುವ ಆರೋಪವಾಗಿದೆ. ನವದೆಹಲಿ ಪ್ರದೇಶದಲ್ಲಿ ಆಹಾರ ವಿತರಣಾ ಸೇವೆಗಳ ಮೇಲೆ ಯಾವುದೇ ನಿಷೇಧವನ್ನು ಹೇರಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾಕ್ರೋಚ್ ಬೆಂಬಲಕ್ಕೆ ಬಂದಿದ್ದ ನಿಹಾಂಗ್ ಸಿಖ್ಖರು ಯೂಟರ್ನ್ – ಪೊಲೀಸರ ನೆರವಿಗೆ ನಿಂತ ಶಸ್ತ್ರಸಜ್ಜಿತ ಸಿಖ್ ವೀರರು
