ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್‌ಚರಣ್ ನಟನೆಯ `ಆಚಾರ್ಯ’ ಸಿನಿಮಾ ಗಲ್ಲಾಪೆಟ್ಟಿಗೆ ಸೌಂಡ್ ಮಾಡೋದ್ರಲ್ಲಿ ಸೋತಿತ್ತು. ಈಗ `ಆಚಾರ್ಯ’ ಚಿತ್ರದಿಂದ ನಿರ್ದೇಶಕ ಕೊರಟಾಲ ಶಿವ ಮತ್ತು ಚಿರಂಜೀವಿ ಸಂಕಷ್ಟವೊಂದನ್ನ ಎದುರಿಸುತ್ತಿದ್ದಾರೆ. `ಆಚಾರ್ಯ’ ಚಿತ್ರದ ನಷ್ಟದಿಂದ 25 ಪ್ರದರ್ಶಕರು ಕಛೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.


ಕೊನಿಡೆಲಾ ಪ್ರೊಡಕ್ಷನ್ ಮತ್ತು ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ ಸಾರಥ್ಯದಲ್ಲಿ `ಆಚಾರ್ಯ’ ಚಿತ್ರವನ್ನ 140 ಕೋಟಿಯ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿರೋದು 76 ಕೋಟಿ ಮಾತ್ರ. ಈ ಚಿತ್ರದ ಸೋಲಿನಿಂದ 20ಕ್ಕೂ ಹೆಚ್ಚು ಪ್ರದರ್ಶಕರಿಗೆ ತೊಂದರೆಯಾಗಿದೆ. ಹಾಗಾಗಿ ಚಿತ್ರತಂಡದ ವಿರುದ್ಧವಾಗಿ ಪ್ರದರ್ಶಕರು ನಿಂತಿದ್ದಾರೆ. ಇದನ್ನೂ ಓದಿ:ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

ಸದ್ಯ ನಟ ಚಿರಂಜೀವಿ `ಗಾಡ್‌ಫಾದರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ `ಆಚಾರ್ಯ’ ಚಿತ್ರದಿಂದ ನಷ್ಟ ಅನುಭವಿಸುತ್ತಿರುವವರಿಗೆ ಚಿತ್ರತಂಡ ಸಾಥ್ ನೀಡುತ್ತಾ ಅಂತಾ ಕಾದು ನೋಡಬೇಕಿದೆ.

