ಮೈಸೂರು: ದಸರಾ ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮೈಸೂರು ಅರಮನೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ನಟಿ ಕಾಜಲ್ ಅಗರ್ವಾಲ್ (Kajal Aggarwal) ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ.
ಅರಮನೆಗೆ ಆಗಮಿಸಿದ ಕಾಜಲ್ ಅಗರ್ವಾಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ವೇಳೆ ಅರಮನೆಯ ಇತಿಹಾಸ ಮತ್ತು ಮಹತ್ವದ ಬಗ್ಗೆ ಅಧಿಕಾರಿಗಳು ನಟಿಗೆ ವಿವರಿಸಿದರು. ಇದಕ್ಕಾಗಿ ಕಾಜಲ್ ಅಗರ್ವಾಲ್ ಅವರು ಧನ್ಯವಾದ ಅರ್ಪಿಸಿದರು.
ಅರಮನೆಯ ವೈಭವಕ್ಕೆ ಕಾಜಲ್ ಅಗರ್ವಾಲ್ ಕಣ್ತುಂಬಿಕೊಂಡರು. ನಟಿ ಅರಮನೆಗೆ ಭೇಟಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಅವರನ್ನು ನೋಡಲು ಪ್ರವಾಸಿಗರು ಹಾಗೂ ಅಭಿಮಾನಿಗಳು ಮುಗಿಬಿದ್ದರು. ಇದನ್ನೂ ಓದಿ: ಗೊರಗುಂಟೆಪಾಳ್ಯದಲ್ಲಿ ಲಾರಿ ಮೇಲೆ ಬಿದ್ದ ಬೃಹತ್ ಮರ – ವಾಹನ ಸಂಚಾರ ಬಂದ್
ನೆಚ್ಚಿನ ನಟಿಯೊಂದಿಗೆ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ಸಂಭ್ರಮಿಸಿದರು.ಇದನ್ನೂ ಓದಿ: ನಡುರಾತ್ರಿ ಚನ್ನಪಟ್ಟಣ ಆಸ್ಪತ್ರೆಗೆ ಯು.ಟಿ ಖಾದರ್ ಭೇಟಿ – ಸಿಬ್ಬಂದಿಗೆ ತರಾಟೆ

