ಬೆಂಗಳೂರು: ಲಿಫ್ಟ್ ಗುಂಡಿಗೆ ಬಿದ್ದು ಮಗು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ನಗರದ ಸುಲ್ತಾನ್ ಪೇಟೆಯಲ್ಲಿ (Sultanpete) ನಡೆದಿದೆ. ಯಲಹಂಕದ (Yelahanka) ಕಮಲಮ್ಮ ಮತ್ತು ಮಲ್ಲಪ್ಪ ದಂಪತಿ ಮಗಳು ಮಹೇಶ್ವರಿ (6) ಮೃತ ಬಾಲಕಿ.
Advertisement
ಮಲ್ಲಪ್ಪನ ಕಣ್ಣಿನ ಚಿಕಿತ್ಸೆಗೆ ನಗರಕ್ಕೆ ಬಂದಿದ್ದ ಕುಟುಂಬ ಸುಲ್ತಾನ್ ಪೇಟೆಯ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಸಂಬಂಧಿಕರನ್ನು ಭೇಟಿ ಮಾಡಲು ತೆರಳಿದ್ದರು. ಇನ್ನೊಂದು ಮಗುವಿಗೆ ಹಾಲುಣಿಸುವ ವೇಳೆ ಮಹೇಶ್ವರಿ ಹೊರಗೆ ಆಟವಾಡುತ್ತಿದ್ದಳು. ಆದರೆ ಇನ್ನೊಮ್ಮೆ ನೋಡುವಾಗ ಮಗು ಕಾಣಲಿಲ್ಲ. ಹುಡುಕಾಡಿದಾಗ ಮಗು ಗುಂಡಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಇದನ್ನೂ ಓದಿ: ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ : ನಾಲ್ಕು ಪ್ರಶಸ್ತಿ ಬಾಚಿಕೊಂಡ ಆರ್.ಆರ್.ಆರ್
Advertisement
Advertisement
ಕಟ್ಟಡ ವಿಕ್ರಮ್ ಎಂಬವರಿಗೆ ಸೇರಿದ್ದು, ಬಿಬಿಎಂಪಿ (BBMP) 5 ಮಹಡಿಗಳಿಗಷ್ಟೇ ಅನುಮತಿ ನೀಡಿತ್ತು. ಆದರೆ ಕಟ್ಟಡದ ಮಾಲೀಕ ನಿಯಮ ಉಲ್ಲಂಘಿಸಿ 6 ಮಹಡಿಗೆ ಏರಿಸಿದ್ದಾನೆ. ಲಿಫ್ಟ್ ಗುಂಡಿಯಲ್ಲಿ ನೀರು ನಿಂತರೂ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದ ಮಾಲೀಕನ ವಿರುದ್ಧ ಕುಟುಂಬಸ್ಥರಿಂದ ದೂರು ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಗೇಮ್ ಕಸಿದುಕೊಂಡಿದ್ದಕ್ಕೆ ಮಾರಣಾಂತಿಕ ಹಲ್ಲೆ- ವಿದ್ಯಾರ್ಥಿ ಅರೆಸ್ಟ್