LatestMain PostNational

ಬಾಂಗ್ಲಾದೇಶದಲ್ಲಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿ ದೆಹಲಿಗೆ ಏರ್‌ಲಿಫ್ಟ್

Advertisements

ನವದೆಹಲಿ: ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಮ್ಮು ಮತ್ತು ಕಾಶ್ಮೀರ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯನ್ನು ವಿಶೇಷ ಚಿಕಿತ್ಸೆಗೆ ಕೇಂದ್ರ ಸರ್ಕಾರ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ತಿಳಿಸಿದ್ದಾರೆ.

ಜಮ್ಮುವಿನ ರಿಜೌರಿ ಜಿಲ್ಲೆಯ ನಿವಾಸಿ ಶೋಯೆಬ್ ಲೋನ್ ಢಾಕಾದ ಬರಿಂದ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓಡುತ್ತಿದ್ದರು. ಜೂನ್ 3 ರಂದು ಶೋಯೆಬ್ ಕಾಲೇಜಿನ ಇತರ ಇಬ್ಬರು ಸ್ನೇಹಿತರೊಂದಿಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಮೂವರ ಪೈಕಿ ಒಬ್ಬ ವಿದ್ಯಾರ್ಥಿ ಅಪಘಾತದಲ್ಲಿ ಮೃತಪಟ್ಟಿದ್ದು, ಶೋಯೆಬ್ ಹಾಗೂ ಮತ್ತೊಬ್ಬ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದರು. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ರಾಹುಲ್ ಗಾಂಧಿಗೆ ಸಂಕಷ್ಟ – ಇಂದು 2 ಹಂತಗಳಲ್ಲಿ ಇ.ಡಿ ಡ್ರಿಲ್

ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ರಿಜೌರಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ವಿದ್ಯಾರ್ಥಿಯ ತಂದೆಯನ್ನು ಭೇಟಿಯಾಗಿದ್ದರು. ಈ ವೇಳೆ ಅಪಘಾತದ ಬಗ್ಗೆ ತಿಳಿದ ರೈನಾ ಪ್ರಧಾನಮಂತ್ರಿ ಕಚೇರಿಯನ್ನು ಸಂಪರ್ಕಿಸಿ ಸಹಾಯ ಕೋರಿದ್ದಾರೆ. ಬಳಿಕ ಕೇಂದ್ರ ವಿದ್ಯಾರ್ಥಿಯನ್ನು ಚಿಕಿತ್ಸೆಗೆ ಬಾಂಗ್ಲಾದೇಶದಿಂದ ಏರ್‌ಲಿಫ್ಟ್ ಮಾಡಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಶರದ್ ಪವಾರ್ ಒಮ್ಮತದ ಅಭ್ಯರ್ಥಿ?

ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಯನ್ನು ಕರೆ ತರಲು ಬಾಂಗ್ಲಾದೇಶದ ರಾಯಭಾರಿಯೊಂದಿಗೆ ವೈಯಕ್ತಿಕವಾಗಿ ಸಂಪರ್ಕಿಸಿದ್ದಾರೆ. ವಿದ್ಯಾರ್ಥಿ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುವುದು ಹಾಗೂ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ರೈನಾ ಭರವಸೆ ನೀಡಿದ್ದಾರೆ.

Leave a Reply

Your email address will not be published.

Back to top button