ನವದೆಹಲಿ: ಬ್ಯಾಂಕ್ ನೌಕರರ ಒತ್ತಾಯಕ್ಕೆ ಮಣಿದು ಕೇಂದ್ರ ಆರ್ಥಿಕ ಇಲಾಖೆ (Minstry of Finance) ಪ್ರತೀ ಶನಿವಾರ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಿ, ಆದೇಶ ಹೊರಡಿಸಿದೆ.
ಕೇಂದ್ರ ಆರ್ಥಿಕ ಇಲಾಖೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಈಗಿನಿಂದಲೇ ಜಾರಿ ಬರುವಂತೆ ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆ (Bank Holiday) ಘೋಷಿಸಿ, ಆದೇಶಿಸಿದೆ. ಇದನ್ನೂ ಓದಿ: ಮಂಗಳೂರು MRPLನಲ್ಲಿ ಭೀಕರ ಸ್ಫೋಟದ ತೀವ್ರತೆಗೆ ಮಂಗಳೂರು ಏರ್‌ಪೋರ್ಟ್ ಗಢ ಗಢ
ಈ ಮೊದಲ ಬ್ಯಾಂಕ್‌ಗಳಿಗೆ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾತ್ರ ರಜೆ ಇತ್ತು. ಬ್ಯಾಂಕ್ ನೌಕರರ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ ಪ್ರತೀ ಶನಿವಾರವನ್ನು ರಜಾ ದಿನವಾಗಿ ಘೋಷಿಸಿದೆ.
ಇತ್ತೀಚಿಗೆ ಮೂರು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಮುಂದಾಗಿದ್ದ ಬ್ಯಾಂಕ್ ಸಂಘಟನೆಗಳು ಕೊನೆ ಕ್ಷಣದಲ್ಲಿ ಮುಷ್ಕರ ಕೈಬಿಟ್ಟಿದ್ದವು. ಭಾರತೀಯ ಬ್ಯಾಂಕ್‌ಗಳ ಸಂಘ (IBA) ಮತ್ತು ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟದ ಸಭೆ ನಡೆಸಿ, ತಿಂಗಳ ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಮಿತಿ ತಕ್ಷಣವೇ ರಚಿಸಲಾಗುವುದು ಎಂದು ನಿರ್ಧರಿಸಿದ್ದವು.
ಇದೀಗ ಬ್ಯಾಂಕ್ ಮುಷ್ಕರಕ್ಕೂ ಮುನ್ನವೇ ಕೇಂದ್ರದ ಮುಂದಿಟ್ಟಿದ್ದ ಬೇಡಿಕೆಗಳ ಪೈಕಿ ಒಂದು ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಇದನ್ನೂ ಓದಿ: ಚುನಾವಣೆಗೆ ತಿಂಗಳುಗಳು ಬಾಕಿ ಇರುವಾಗಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಾ ವಾರಿಂಗ್ ರಾಜೀನಾಮೆ

