ಬೆಂಗಳೂರು: ಹಾಂಕಾಂಗ್‍ನೊಂದಿಗೆ ಉತ್ತಮ ವ್ಯಾವಹಾರಿಕ ಬಾಂಧವ್ಯ ಹೊಂದುವ ಉದ್ದೇಶದಿಂದ ಇದೇ ಅಕ್ಟೋಬರ್ 11 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಂಕಾಂಗ್‍ಗೆ ನೇರ ವಿಮಾನ ಸಂಪರ್ಕ ಪುನರಾರಂಭಿಸಲಾಗುತ್ತಿದ್ದು, ಕ್ಯಾಥೆ ಪೆಸಿಫಿಕ್ ವಿಮಾನವು ಹಾರಾಟ ನಡೆಸಲಿದೆ.
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡ ಬಿಐಎಎಲ್‍ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಸತ್ಯಕಿ ರಘುನಾಥ್, ಬೆಂಗಳೂರು ವಿಮಾನ ನಿಲ್ದಾಣವೂ ದೇಶದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ವಿಶ್ವದ 8 ಪತಿಷ್ಠಿತ ವಿಮಾನ ಸಂಸ್ಥೆಗಳು ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಗೇಟ್‍ವೇ ಎಂದೇ ಪರಿಗಣಿಸಿವೆ. ಇದರ ಹೆಮ್ಮೆಯ ಭಾಗವಾಗಿ ಇದೀಗ ಹಾಂಕಾಂಗ್‍ಗೆ ನೇರವಾಗಿ ವಿಮಾನ ಹಾರಟವನ್ನು ಪ್ರಾರಂಭಿಸುತ್ತಿರುವುದು ಖುಷಿ ನೀಡಿದೆ ಎಂದರು. ಇದನ್ನೂ ಓದಿ: ಕರಾವಳಿ ಅಭಿವೃದ್ಧಿ ಹೊಂದುತ್ತಿರುವುದು ಡಬಲ್ ಇಂಜಿನ್ ಸರ್ಕಾರದ ಸಾಧನೆ: ಬೊಮ್ಮಾಯಿ
Advertisement
Advertisement
Advertisement
ಅಕ್ಟೋಬರ್ 11 ರಿಂದ ಕ್ಯಾಥೆ ಪೆಸಿಫಿಕ್‍ನ ಬೋಯಿಂಗ್ 777-300 ಎರಡು ವಿಮಾನವು ನಾನ್‍ಸ್ಟಾಪ್ ಹಾರಾಟ ನಡೆಸಲಿದೆ. ಈ ವಿಮಾನದಲ್ಲಿ ಮೂರು ಕ್ಯಾಬಿನ್‍ಗಳಿದ್ದು ಎಕನಾಮಿಕ್, ಪ್ರೀಮಿಯಂ ಎಕನಾಮಿಕ್ ಹಾಗೂ ಬ್ಯುಸಿನೆಸ್ ಕ್ಲಾಸ್ ಇರಲಿದೆ. ಇದುವರೆಗೂ ಮುಂಬೈ ಹಾಗೂ ದೆಹಲಿಯಿಂದ ಮಾತ್ರ ಹಾಂಕಾಂಗ್‍ಗೆ ನೇರವಾಗಿ ವಿಮಾನ ಸೌಲಭ್ಯವಿತ್ತು. ದಕ್ಷಿಣ ಭಾರತದ ಜನರು ಹಾಂಕಾಂಗ್‍ಗೆ ತೆರಳಲು ದೆಹಲಿಯಲ್ಲಿ ಇಂಟರ್‌ಚೇಂಜ್ ಮಾಡಬೇಕಾಗಿತ್ತು. ಆದರೀಗ ದಕ್ಷಿಣ ಭಾರತದ ಜನರಿಗಾಗಿಯೇ ಬೆಂಗಳೂರಿನಲ್ಲಿ ನೇರ ಸಂಪರ್ಕ ಕಲ್ಪಿಸುವ ವಿಮಾನದ ಹಾರಟವನ್ನು ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ವಿವರಿಸಿದರು. ಇದನ್ನೂ ಓದಿ: ಬ್ರಿಟಿಷರ ಕಾಲದ ಚಿನ್ಹೆಗೆ ಕೊಕ್ – ನೌಕಾಪಡೆಗೆ ಶಿವಾಜಿಯ ಧ್ವಜ ಸೇರ್ಪಡೆ