Dakshina KannadaDistrictsKarnatakaLatestLeading NewsMain Post

ಕರಾವಳಿ ಅಭಿವೃದ್ಧಿ ಹೊಂದುತ್ತಿರುವುದು ಡಬಲ್ ಇಂಜಿನ್ ಸರ್ಕಾರದ ಸಾಧನೆ: ಬೊಮ್ಮಾಯಿ

ಮಂಗಳೂರು: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಏನು ಕೆಲಸ ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಇದೀಗ ಉತ್ತರ ನೀಡುತ್ತಿದ್ದೇನೆ ಡಬಲ್ ಇಂಜಿನ್ ಸರ್ಕಾರದಿಂದಾಗಿ ಸಾಗರ್ ಮಾಲಾ ಯೋಜನೆಯಿಂದಾಗಿ 18 ಯೋಜನೆಗಳನ್ನು ಮುಗಿಸಿ 14 ಯೋಜನೆಗಳು 950 ಕೋಟಿ ರೂ.ನಲ್ಲಿ ಅಭಿವೃದ್ಧಿ ಹೊಂದಲು ಮೋದಿ ಸರ್ಕಾರ ಪ್ರಮುಖ ಕಾರಣವಾಗಿದೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕರಾವಳಿ ಅಭಿವೃದ್ದಿಗೆ ಸುವರ್ಣ ಅಕ್ಷರದಲ್ಲಿ ಬರೆದಿಡಬಹುದಾದ ದಿನವಾಗಿದೆ ಎಂದು ನಾನು ಭಾವಿಸುತ್ತೇನೆ. ಗೋವಾ ಮತ್ತು ಕೇರಳಕ್ಕೆ ಇದ್ದಂತಹ ಅನುಕೂಲ ನಮಗೆ ಇರಲಿಲ್ಲ. ಮೋದಿ ಸರ್ಕಾರ ಬಂದ ಬಳಿಕ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಾರವಾರದ ಅಭಿವೃದ್ಧಿಗೆ 350 ಕೋಟಿ ರೂ. ಯೋಜನೆಗೆ ಅನುಮೋದನೆ ಇಂದು ಸಿಕ್ಕಿದೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ. ಮೀನುಗಾರರಿಗೆ ಅನುಕೂಲವಾಗುವ ಸ್ಪೀಡ್ ಬೋಟ್‍ಗಳನ್ನು ಕೂಡ ಕರಾವಳಿಗೆ ನೀಡಲಾಗಿದೆ ಇದು ಮೀನುಗಾರಿಕೆಗೆ ನೀಡಿದ ಸವಲತ್ತಾಗಿದೆ ಇದು ಕೇಂದ್ರ ಸರ್ಕಾರದಿಂದ ಆಗಿದೆ ಎಂದರು. ಇದನ್ನೂ ಓದಿ: ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ಗೆ ಮೋದಿ ಚಾಲನೆ

ಕರ್ನಾಟಕದ ಅಭಿವೃದ್ಧಿಯ ಜೊತೆಗೆ ಭಾರತದ ಅಭಿವೃದ್ಧಿ ಆಗುತ್ತಿದೆ. ಹಾಗಾಗಿ ಕರ್ನಾಟಕ್ಕೆ ಮೋದಿ ಬಂದಿದ್ದಾರೆ. ನವಕರ್ನಾಟಕದ ಅಭಿವೃದ್ಧಿ ಜೊತೆಗೆ ನವಭಾರತದ ಅಭಿವೃದ್ಧಿ ಆಗುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ ದೂರದೃಷ್ಟಿ ಕಾರಣ. ಈ ದೇಶ ಅಭಿವೃದ್ಧಿ ಆಗಬೇಕಾದರೆ, ದೇಶದ ನಾಲ್ಕು ದಿಕ್ಕುಗಳಲ್ಲೂ ಅಭಿವೃದ್ಧಿ ಆಗಬೇಕು ವಿದೇಶಿ ವಿನಿಮಯ ಹೆಚ್ಚಾಗಬೇಕೆಂಬ ದೂರದೃಷ್ಟಿಯಲ್ಲಿ 8 ವರ್ಷಗಳ ಯೋಜನೆ ಇಂದು ಆರಂಭವಾಗಿದೆ. 3,800 ಕೋಟಿ ರೂ.ನಲ್ಲಿ ನ್ಯೂ ಮಂಗಳೂರು ಪೋರ್ಟ್‍ನ ದೊಡ್ಡ ಅಭಿವೃದ್ಧಿ ಆಗುತ್ತಿದೆ ಎಂದು ಪ್ರಧಾನಿಗೆ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ; ವಿಕಾಸ ದರ್ಶನಕ್ಕೋ.. ವಿನಾಶ ದರ್ಶನಕ್ಕೋ ಎಂದು ಸಿದ್ದು ಲೇವಡಿ

Live Tv

Leave a Reply

Your email address will not be published.

Back to top button