Thursday, 16th August 2018

Recent News

1 year ago

ತೆಲುಗು ಪ್ರಭಾವದ ಮಧ್ಯೆಯೂ ಕನ್ನಡದ ಕಂಪು ಪಸರಿಸುತ್ತಿರೋ ಕೋಲಾರದ ಕಿರಣ್

ಕೋಲಾರ: ತೆಲುಗು ಪ್ರಭಾವವೇ ಹೆಚ್ಚಿರುವ ಕೋಲಾರದ ಗಡಿ ಶ್ರೀನಿವಾಸಪುರದ ಕಿರಣ್ ಕನ್ನಡದ ಕಂಪು ಪಸರಿಸ್ತಿದ್ದಾರೆ. ಸಣ್ಣದೊಂದು ಕೊಠಡಿಯಲ್ಲಿಯೇ ಹೋರಾಟಗಾರರು, ಜ್ಞಾನಪೀಠ ಪುರಸ್ಕೃತರು, ಸಂತರು, ದಾರ್ಶನಿಕರು, ಸಮಾಜ ಸುಧಾರಕರ ಫೋಟೊಗಳಿಗೆ ಪೂಜೆ ಸಲ್ಲಿಸುತ್ತಿರುವ ಕಿರಣ್, ಕೋಲಾರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಡಿ ಸೋಮಯಾಜಲಹಳ್ಳಿಯಲ್ಲಿ ಇಂದಿಗೂ ತೆಲುಗಿನ ಪ್ರಭಾವವೇ ಹೆಚ್ಚು. ಇದರ ನಡುವೆಯೂ ಕಿರಣ್ ಮಾತ್ರ ಕನ್ನಡವನ್ನೇ ಪಸರಿಸ್ತಿದ್ದಾರೆ. ಸರ್ಕಾರದ ಸಣ್ಣ ಕಟ್ಟಡದ ಆಶ್ರಯ ಪಡೆದುಕೊಂಡಿರುವ ಕಿರಣ್, ಮನೆಯವರ […]

1 year ago

ರಾಜಕೀಯ ಬಿಟ್ಟು, ಸರ್ಕಾರಿ ಯೋಜನೆಗಳನ್ನೇ ಬಳಸಿಕೊಂಡು ಉದ್ಧಾರವಾಯ್ತು ಬೆಟ್ಟದೂರು ತಾಂಡಾ

– ಗ್ರಾಮದಲ್ಲಿ ಹುಡುಕಿದ್ರೂ ಗುಡಿಸಲುಗಳು ಕಾಣಲ್ಲ, ಮಣ್ಣಿನ ರಸ್ತೆಗಳಿಲ್ಲ ರಾಯಚೂರು: ಯಾರೋ ಬಂದು ನಮ್ಮನ್ನ ಉದ್ಧಾರ ಮಾಡ್ತಾರೆ ಅಂತ ಕಾಯ್ತಾ ಕುಳಿತರೆ ಯಾರೂ ಬರಲ್ಲ. ಸಿಕ್ಕ ಅವಕಾಶಗಳನ್ನ ಸದ್ಬಳಕೆ ಮಾಡಿಕೊಂಡ್ರೆ ಏನೆಲ್ಲಾ ಸಾಧಿಸಬಹುದು ಅನ್ನೋದಕ್ಕೆ ರಾಯಚೂರಿನ ಈ ಪುಟ್ಟ ತಾಂಡಾವೇ ಸಾಕ್ಷಿ. ರಾಜಕೀಯ ಬಿಟ್ಟು, ಸರ್ಕಾರದ ಯೋಜನೆಗಳನ್ನೇ ಸರಿಯಾಗಿ ಬಳಸಿಕೊಂಡು ಗ್ರಾಮದ ಚಿತ್ರಣವನ್ನೇ ಬದಲಿಸಿದ್ದಾರೆ. ತಾವು...

ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

1 year ago

ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ....

ಚಿಕ್ಕವಯಸ್ಸಿಗೇ ದೊಡ್ಡ ಜನೋಪಕಾರಿ ಕಾರ್ಯ- ಮೂರೇ ತಿಂಗಳಲ್ಲಿ 500 ಶೌಚಾಲಯ ನಿರ್ಮಾಣ!

1 year ago

ಚಿಕ್ಕಮಗಳೂರು: ಮನೆ ಪಕ್ಕದ ಗರ್ಭಿಣಿಯೊಬ್ರು ಶೌಚಾಲಯವಿಲ್ಲದೆ ಪರದಾಡುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಯುವಕ ಇಡೀ ಗ್ರಾಮ ಪಂಚಾಯ್ತಿಯ ಹಳ್ಳಿಯ ಪ್ರತಿಯೊಂದು ಮನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಮಾಡಿದ್ದಾರೆ. ಹೌದು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜಿಗಣೆಹಳ್ಳಿ ನಿವಾಸಿ ಮಹಾಂತೇಶ್ ಈ ಮಹಾನ್ ಕಾರ್ಯ ಮಾಡಿದ...

6 ವರ್ಷದ ಹಿಂದೆ ಮೂರು ಮಕ್ಕಳಿದ್ದ ಗಡಿನಾಡ ಕನ್ನಡ ಶಾಲೆಯಲ್ಲಿ ಈಗ ಓದ್ತಿದ್ದಾರೆ 120 ಮಕ್ಕಳು!

1 year ago

ಬೆಳಗಾವಿ: ಇಂದು ನಮ್ಮ ಪಬ್ಲಿಕ್ ಹೀರೋ ಒಬ್ಬರಲ್ಲ, ಮೂವರು. ಗಡಿನಾಡು ಬೆಳಗಾವಿಯಿಂದ ಬಂದಿರೋ ಹೀರೋಗಳಿವರು. ಕೇವಲ ಮೂವರು ಮಕ್ಕಳಿದ್ದ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ಇವತ್ತು ಈ ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಎಲ್ಲರಿಗೂ ಹೈಟೆಕ್ ಶಿಕ್ಷಣ ಸಿಗುತ್ತಿದೆ....

ಬಿರು ಬೇಸಿಗೆಯಲ್ಲಿ ಪ್ರತಿದಿನ ಜನರಿಗೆ 60 ಟ್ಯಾಂಕರ್‍ಗಳಷ್ಟು ನೀರು ಪೂರೈಸ್ತಿರೋ ದಾವಣಗೆರೆಯ ರಾಕೇಶ್

1 year ago

ದಾವಣಗೆರೆ: ಬಿರು ಬೇಸಿಗೆಯಿಂದಾಗಿ ರಾಜ್ಯದ ಬಹುತೇಕ ಕಡೆ ಕುಡಿಯೋ ನೀರಿಗೂ ಪರದಾಡೋ ಸ್ಥಿತಿ ಇದೆ. ನೀರು ಕೊಡಿ ಸ್ವಾಮಿ ಅಂತಾ ಜನನಾಯಕರನ್ನ ಕೇಳಿದ್ರೆ ಕಿವಿನೇ ಕೇಳಿಸಲ್ಲ. ಇಂಥದ್ದರಲ್ಲಿ ವ್ಯಕ್ತಿಯೊಬ್ಬರು ಉಚಿತವಾಗಿ ಟ್ಯಾಂಕರ್ ಮೂಲಕ ಏರಿಯಾಗಳಿಗೆಲ್ಲಾ ನೀರು ಹಂಚ್ತಿದ್ದಾರೆ. ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ...

10 ಸಾವಿರ ಗಿಡ ನೆಡಲು ಪಣ- ಪರಿಸರ ರಕ್ಷಣೆಗೆ ಸಜ್ಜಾದ ಚಿತ್ರದುರ್ಗದ ಸಿದ್ದರಾಜು

1 year ago

ಚಿತ್ರದುರ್ಗ: ರಣಭಯಂಕರ ಬರಕ್ಕೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತಾಪಕ್ಕೆ ಧರೆಯೇ ಬೆಂಕಿಯುಂಡೆಂಯಂತಾಗಿದೆ. ಇದಕ್ಕೆ ಕಾರಣವೇನು? ನಮ್ಮ ಸ್ವಯಂಕೃತ ಅಪರಾಧವೇ. ಇದನ್ನ ಮನಗಂಡ ಚಿತ್ರದುರ್ಗದ ಪರಿಸರ ಪ್ರೇಮಿ ಸಿದ್ದರಾಜು ಈಗ ಗಿಡ ಬೆಳೆಸೋಕೆ ಟೊಂಕ ಕಟ್ಟಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಾಣದಂತ...

ವಿಜಯಪುರ: ಸರ್ಕಾರಿ ಶಾಲೆಯಾದ್ರೂ ಹೈಟೆಕ್ ಶಿಕ್ಷಣ- ಬೇಸಿಗೆಯಲ್ಲೂ ಶಾಲೆಗೆ ಹಸಿರ ಹೊದಿಕೆ

1 year ago

ವಿಜಯಪುರ: ಸರ್ಕಾರಿ ಶಾಲೆ ಅಂದ್ರೆ ಹೀಗಿರ್ಬೇಕಪ್ಪಾ ಎನ್ನುವಂತಿದೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡದ ಈ ಶಾಲೆಯಲ್ಲಿ ಏನಿಲ್ಲ ಅಂತ ಹುಡುಕಬೇಕು. ಅಷ್ಟರ ಮಟ್ಟಿಗೆ ಈ ಶಾಲೆ ಎಲ್ಲಾ ವಿಧವಾದ ಸೌಲಭ್ಯಗಳನ್ನು ಪಡೆದಿದೆ....