DistrictsKarnatakaPublic HeroVijayapura

ವಿಜಯಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ರು ಈ ಸರ್ಜನ್!

ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂತಂದ್ರೆ ಮೂಗು ಮುರಿಯೋರೇ ಜಾಸ್ತಿ ಅನ್ನೋ ಮಾತನ್ನು ನಾವು ಹಲವು ಬಾರಿ ಕೇಳಿದ್ದೀವಿ. ಆದ್ರೆ, ವಿಜಯಪುರ ಜಿಲ್ಲಾಸ್ಪತ್ರೆಯ ಸರ್ಜನ್ ಅನಂತ ದೇಸಾಯಿ ಅವ್ರು ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿ, ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ದಾರೆ.

ಹೌದು. ವಿಜಯಪುರದ ಜಿಲ್ಲಾ ಆಸ್ಪತ್ರೆಗೆ ಕಳೆದ ಎರಡು ವರ್ಷಗಳ ಹಿಂದೆ ರೋಗಿಗಳು ಬರೋದಕ್ಕೆ ಹಿಂಜರಿತಿದ್ರು. ಆದ್ರೆ ಇದೀಗ ಈ ಜಿಲ್ಲಾಸ್ಪತ್ರೆ ರಾಜ್ಯದಲ್ಲೇ ಪ್ರಥಮ ಸ್ವಚ್ಛತಾ ಆಸ್ಪತ್ರೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

2015 ಅಕ್ಟೋಬರ್‍ನಲ್ಲಿ ಆಸ್ಪತ್ರೆಗೆ ಬಂದ ಅನಂತ ದೇಸಾಯಿ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದ್ದರೂ ಎಲ್ಲರನ್ನು ಒಗ್ಗೂಡಿಸಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಇಡೀ ಆಸ್ಪತ್ರೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಹೀಗಾಗಿ ಆಸ್ಪತ್ರೆಯ ಸ್ವಚ್ಛತೆಗೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯದ ನಂ.1 ಸ್ವಚ್ಛ ಆಸ್ಪತ್ರೆ ಅಂತಾ 2015-16 ಹಾಗೂ 2016-17 ಸಾಲಿನಲ್ಲಿ ಸತತವಾಗಿ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿದೆ. ಮಾತ್ರವಲ್ಲದೇ ಈಗ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಸಿಬ್ಬಂದಿ ಬಗ್ಗೆ ಜನ ಹೊಗಳ್ತಿದ್ದಾರೆ.

ಸರ್ಕಾರದ ಎಲ್ಲ ಸೌಲಭ್ಯಗಳನ್ನು ರೋಗಿಗಳಿಗೆ ತಲುಪುವಂತೆ ಮಾಡಲಾಗ್ತಿದೆ. ಅಲ್ಲದೆ, ಸರ್ಜನ್ ದೇಸಾಯಿ ಅವರ ಕಾರ್ಯ ಇತರಿಗೂ ಮಾದರಿಯಾಗಲಿ ಅಂತಾ ಬಾಣಂತಿ ಶಿವಲೀಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=LxqLz5CF02s

Related Articles

Leave a Reply

Your email address will not be published. Required fields are marked *