Friday, 20th July 2018

Recent News

7 months ago

ಆಟೋ- ಟಾಟಾ ಏಸ್ ನಡುವೆ ಡಿಕ್ಕಿ ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವು

ಹಾವೇರಿ: ಆಟೋಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರಿಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅಸುಂಡಿ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಮಂಜುಳಾ ಪರಾಪುರ (48) ಮತ್ತು ಮನು ಕೆಂಚನಗೌಡರ (7) ಎಂದು ಗುರುತಿಸಲಾಗಿದೆ. ಟಾಟಾ ಏಸ್ ವಾಹನ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ […]

8 months ago

ಮಾಂಸದಲ್ಲಿ ಸ್ಫೋಟಕ ಬೆರೆಸಿ ಸಂಶಯಾಸ್ಪದ ರೀತಿಯಲ್ಲಿ ಚಿರತೆಯ ಹತ್ಯೆ

ಹಾವೇರಿ: ಕಾಡುಪ್ರಾಣಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದ್ದು, ಮಾಂಸದಲ್ಲಿ ಸ್ಫೋಟಕ ಬೆರೆಸಿಟ್ಟು ಸಂಶಯಾಸ್ಪದ ರೀತಿಯಲ್ಲಿ ಚಿರತೆಯನ್ನ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ನಡೆದಿದೆ. ಶನಿವಾರ ತಡರಾತ್ರಿ ಮೋಟೆಬೆನ್ನೂರು ಛತ್ರ ಗ್ರಾಮದ ನಡುವಿನ ಗುಡ್ಡದ ಬಳಿ ಸಂಶಯಾಸ್ಪದ ರೀತಿಯಲ್ಲಿ ಚಿರತೆ ಸಾವನ್ನಪ್ಪಿದೆ. ಇದು ಎರಡು ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ. ಆದರೆ...

ಕೊರಳ ಪಟ್ಟಿ ಹಿಡಿದು ಯುವಕನಿಗೆ ಚಳಿ ಬಿಡಿಸಿದ ಕಾಲೇಜು ವಿದ್ಯಾರ್ಥಿನಿಯರು

8 months ago

ಹಾವೇರಿ: ಯುವಕನೊಬ್ಬ ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ಆತನಿಗೆ ಚಳಿ ಬಿಡಿಸಿದ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದ ಬಳಿ ಎರಡು ದಿನಗಳ ಹಿಂದೆ ನಡೆದಿದೆ. ಬಸ್ ನಿಲ್ದಾಣದ ಬಳಿ ಕಲಂದರ್ ಎಂಬಾತ ಹಾವೇರಿ ತಾಲೂಕಿನ...

ಅನ್ನದಾತರಿಗೆ ಪುಡಿಗಾಸು ಪರಿಹಾರ- ನದಿಯಲ್ಲಿ ನೀರಿಲ್ಲದಿದ್ರೂ ಸಮೃದ್ಧ ಬೆಳೆ ಎಂದು ಸರ್ಕಾರಕ್ಕೆ ವರದಿ

8 months ago

ಹಾವೇರಿ: ಅಧಿಕಾರಿಗಳೇ ಅನ್ನದಾತರ ಬೆನ್ನಿಗೆ ಇರಿದ ಸುದ್ದಿ ಇದು. ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಬರದಿಂದ ಬರೆ ಬಿತ್ತು. ಸರ್ಕಾರ ಕೊಡೋ ಅಲ್ಪ ಸ್ವಲ್ಪ ಪರಿಹಾರದಿಂದಾದ್ರೂ ಕೊಂಚ ಸುಧಾರಿಸಿಕೊಳ್ಳೋಣ ಎಂದರೆ ಅದಕ್ಕೆ ಕಲ್ಲು ಹಾಕಿದ್ದಾರೆ ಹಾವೇರಿ ಜಿಲ್ಲೆಯ ಹೊಣೆಗೇಡಿ ಅಧಿಕಾರಿಗಳು. ಜಿಲ್ಲೆಯಲ್ಲಿ...

ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಈರುಳ್ಳಿ ಲಾರಿ ಪಲ್ಟಿ- 7 ರೈತರಿಗೆ ಗಾಯ

8 months ago

ಹಾವೇರಿ: ಈರುಳ್ಳಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿ ಏಳು ರೈತರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಕ್ರಾಸ್ ಬಳಿ ತಡರಾತ್ರಿ ನಡೆದಿದೆ. ಗಾಯಗೊಂಡ ರೈತರನ್ನ ಶಿವಲಿಂಗಗೌಡ ಪಾಟೀಲ(45), ಶಿವಣಪ್ಪ ವಾಲ್ಮೀಕಿ(38), ಮಲ್ಲಪ್ಪ ಟಕ್ಕೇದ(49), ಶಶಿಧರ ಟಕ್ಕೇದ(36), ಶಿವನಗೌಡ ಪಾಟೀಲ(50),...

ಹೆರಿಗೆಯಾದ್ಮೇಲೆ ತಾಯಿ ಸಾವನ್ನಪ್ಪಿದ್ದಾರೆಂದ ವೈದ್ಯರು- ಅಂತ್ಯಕ್ರಿಯೆ ವೇಳೆ ಕಣ್ಣು ಬಿಟ್ಟು ಮತ್ತೆ ಸಾವನ್ನಪ್ಪಿದ ಮಹಿಳೆ

8 months ago

ಹಾವೇರಿ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಾಗಮ್ಮ ಯಮನಪ್ಪ ಕೋಡೇರ (25) ಎಂದು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಗಮ್ಮ...

ಚಿಂದಿ ಆಯುವ ನೆಪದಲ್ಲಿ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚೋರಿಯರ ಬಂಧನ

8 months ago

ಹಾವೇರಿ: ಚಿಂದಿ ಆಯುವ ನೆಪದಲ್ಲಿ ರಾತ್ರಿ ಹೊತ್ತು ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚಾಲಾಕಿ ಚೋರಿಯರನ್ನು ಹಾವೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಮಾರು 35 ರಿಂದ 38 ವರ್ಷಗಳ ಶಿಲ್ಪಾ ಶಿಕ್ಕಲಿಗಾರ, ರೇಣುಕಾ ಅಲಿಯಾಸ್ ರೇಷ್ಮಾ ಹಾಗೂ ಗಂಗವ್ವ ಬಂಧಿತ ಆರೋಪಿಗಳು....

ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ

8 months ago

ಹಾವೇರಿ: ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿ ಮೊದಲ ಪತ್ನಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಮೃತ್ಯುಂಜಯ ನಗರದಲ್ಲಿ ನಡೆದಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‍ಐ ಟಿ.ಮಂಜಣ್ಣ ವಿರುದ್ಧ ಅಕ್ರಮ ಸಂಬಂಧದ...