Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಖೇಲೋ ಇಂಡಿಯಾ 2ನೇ ಆವೃತ್ತಿಗೆ ರಾಜಧಾನಿ ಸಜ್ಜು – ಕ್ರೀಡಾಪಟುಗಳಿಗೆ ಏನೆಲ್ಲಾ ಸೌಲಭ್ಯವಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಖೇಲೋ ಇಂಡಿಯಾ 2ನೇ ಆವೃತ್ತಿಗೆ ರಾಜಧಾನಿ ಸಜ್ಜು – ಕ್ರೀಡಾಪಟುಗಳಿಗೆ ಏನೆಲ್ಲಾ ಸೌಲಭ್ಯವಿದೆ?

Bengaluru City

ಖೇಲೋ ಇಂಡಿಯಾ 2ನೇ ಆವೃತ್ತಿಗೆ ರಾಜಧಾನಿ ಸಜ್ಜು – ಕ್ರೀಡಾಪಟುಗಳಿಗೆ ಏನೆಲ್ಲಾ ಸೌಲಭ್ಯವಿದೆ?

Public TV
Last updated: April 22, 2022 7:27 pm
Public TV
Share
2 Min Read
KHELO INDIA
SHARE

ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2ನೇ ಆವೃತ್ತಿ ಮುನ್ನಡೆಸಲು ಬೆಂಗಳೂರು ಸಜ್ಜಾಗಿದೆ. 2ನೇ ಅವೃತ್ತಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ನೆರವೇರಿಸಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಸುಮಾರು 890 ಕ್ರೀಡಾಪಟುಗಳು ಆಗಮಿಸಿದ್ದು, ಉಳಿದವರು ಶೀಘ್ರವೇ ಬರುವ ನಿರೀಕ್ಷೆಯಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಆಘಾತ – ತಂಡದೊಂದಿಗಿಲ್ಲ ಕೋಚ್ ಪಾಟಿಂಗ್

KHELO INDIA 2

ಪ್ರತಿ ಕ್ರೀಡಾಪಟುವಿಗೂ ಕೆಎಮ್‌ಎಫ್ ತಿನಿಸುಗಳ ಕಿಟ್ ನೀಡಿ ಸ್ವಾಗತಿಸಲಾಗುತ್ತಿದೆ. ಮೇ 3ರ ವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳಿಗಾಗಿ ಈಗಾಗಲೇ ಜೈನ್ ಗ್ಲೋಬಲ್ ವಿಶ್ವವಿದ್ಯಾನಿಲಯದಲ್ಲಿ 2800, ಶ್ರೀ ಶ್ರೀರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ನಲ್ಲಿ 1500 ಹಾಗೂ ವಿವಿಧ ಹೋಟೆಲ್‌ಗಳಲ್ಲಿ 1556 ಪ್ರತಿನಿಧಿಗಳಿಗೆ ವಸತಿ ಸೌಲಭ್ಯ ಸಜ್ಜುಗೊಳಿಸಲಾಗಿದೆ. ಕ್ರೀಡಾಕೂಟಕ್ಕಾಗಿ ಬಿಎಂಟಿಸಿ 160 ಬಸ್ಸುಗಳನ್ನು ಒದಗಿಸಿದೆ. 2800 ಕಾರುಗಳನ್ನು ಕ್ರೀಡಾಕೂಟದಲ್ಲಿನ ವಿವಿಧ ಹಂತಗಳ ಪ್ರತಿನಿಧಿಗಳ ಪ್ರಯಾಣಕ್ಕಾಗಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: IPL ಶತಕ ಸಿಡಿಸಿ ಮೆರೆದವರು ಯಾರು – ಇಲ್ಲಿದೆ ಟಾಪ್ 10 ಸಿಕ್ಸರ್ ವೀರರ ಪಟ್ಟಿ

khelobig

ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಯೋಗಾಸನ ಮತ್ತು ಮಲ್ಲಕಂಬದಂತಹ ದೇಶೀ ಕ್ರೀಡೆಗಳೊಂದಿಗೆ 20 ಕ್ರೀಡಾ ವಿಭಾಗಗಳಿವೆ. ವೇಯ್ಟ್ ಲಿಫ್ಟಿಂಗ್, ಜೂಡೋ, ಕುಸ್ತಿ, ಕಬ್ಬಡಿ, ವಾಲಿಬಾಲ್, ಈಜು, ಯೋಗಾಸನ, ಆರ್ಚರಿ, ಫೆನ್ಸಿಂಗ್, ಕರಾಟೆ, ಬಾಕ್ಸಿಂಗ್ ಹಾಗೂ ಫುಟ್‌ಬಾಲ್ ಸೇರಿದಂತೆ 13 ವಿಭಾಗಗಳ ಕ್ರೀಡೆಗಳು ಜೈನ್ ಯೂನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್ ಪ್ರದರ್ಶನಗೊಳ್ಳಲಿವೆ. ಉಳಿದ ಕ್ರೀಡೆಗಳು ಶ್ರೀ ಕಂಠೀರವ ಸ್ಟೇಡಿಯಂ, ದಿ ಜೈನ್ ಸ್ಪೋರ್ಟ್ಸ್ ಸ್ಕೂಲ್, ಸಾಯಿ ನೇತಾಜಿ ಸುಭಾಷ್ ಸದರ್ನ್ ಸೆಂಟರ್ ಮತ್ತು ಕೆ.ಎಂ.ಕಾರಿಯಪ್ಪ ಹಾಕಿ ಸ್ಟೇಡಿಯಂ ಈ ಸ್ಥಳಗಳಲ್ಲಿ ನಡೆಯಲಿವೆ ಎಂದು ವಿವರಿಸಿದರು. ಇದನ್ನೂ ಓದಿ: ಪಠಾಣ್‌ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…

DWD Khelo India

ಪತ್ರಕರ್ತರಿಗೆ ಸೌಲಭ್ಯ: ಎಲ್ಲಾ ಕ್ರೀಡಾಂಗಣಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರಿಗೆ ಅನುಕೂಲವಾಗಲು ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಕ್ರೀಡಾಂಗಣದಲ್ಲಿಯೂ ಉಚಿತ ವೈಫೈ ಸೌಲಭ್ಯವಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಕೇಂದ್ರದ ಕ್ರೀಡಾ ಸಚಿವಾಲಯದ ರಾಜ್ಯ ನಿಶಿತ್ ಪ್ರಮಾಣಿಕ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಎಸ್.ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸುವರು. ಆಹ್ವಾನಿತರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಕ್ರೀಡಾಂಗಣದ ಹಿರಗೆ ಬೃಹತ್ ಪರದೆಯ ಮೇಲೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಆಕಾಶವಾಣಿ, ರೇಡಿಯೋ ಸಿಟಿ, ಡಿಡಿ ಸ್ಪೋರ್ಟ್ಸ್‌ ನಲ್ಲಿ ನೇರಪ್ರಸಾರವಾಗಲಿದೆ ಎಂದು ನಾರಾಯಣಗೌಡ ಮಾಹಿತಿ ನೀಡಿದರು.

TAGGED:AkashavaniRedioAnuragSinghThakurBasavarajabommaiCNAshwathNarayanDDSportsRadioCityಅನುರಾಗ್ ಸಿಂಗ್ ಠಾಕೂರ್ಆಕಾಶವಾಣಿಡಾ.ಸಿ.ಎನ್ ಅಶ್ವಥ್ ನಾರಾಯಣ್ಡಿಡಿ ಸ್ಪೋರ್ಟ್ಸ್ಬಸವರಾಜ ಬೊಮ್ಮಾಯಿರೇಡಿಯೋಸಿಟಿ
Share This Article
Facebook Whatsapp Whatsapp Telegram

Cinema news

Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories

You Might Also Like

Rajasthan Refinery Unit Fire
Latest

ನಾಳೆ ಪಿಎಂ ಮೋದಿ ಉದ್ಘಾಟಿಸಬೇಕಿದ್ದ 79,000 ಕೋಟಿ ಮೌಲ್ಯದ ತೈಲ ಶುದ್ಧೀಕರಣ ಘಟಕಕ್ಕೆ ಬೆಂಕಿ

Public TV
By Public TV
2 minutes ago
Private Plane Flying 30 Feet Above Ground Crashes Into Tree In Chhattisgarh
Latest

ಮರಕ್ಕೆ ಡಿಕ್ಕಿಯಾಗಿ ಖಾಸಗಿ ವಿಮಾನ ಪತನ

Public TV
By Public TV
31 minutes ago
bjp flag
Bengaluru City

ಭ್ರಷ್ಟಾಚಾರವೇ ಕಾಂಗ್ರೆಸ್‌ನ ಅಸಲಿ ಗ್ಯಾರಂಟಿ – ಇಡಿ ದಾಳಿಗೆ ಬಿಜೆಪಿ ಟೀಕೆ

Public TV
By Public TV
38 minutes ago
Sadhvi Satish Sail
Latest

ಮಗಳು ಬಿಸಿನೆಸ್ ಮಾಡಲಿ ಅಂತ ಸಿಎಂ, ಡಿಸಿಎಂ ಬಳಿ ಬುದ್ದಿ ಹೇಳಿಸಿದ್ದೆ: ‘ಫೆಮಿನಾ ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮಗಳ ಬಗ್ಗೆ ಸತೀಶ್‌ ಸೈಲ್‌ ಮಾತು

Public TV
By Public TV
1 hour ago
Doctor Ramesh who was supposed to marry his wifes sister tomorrow murdered Sirsi KHB Colony
Crime

ಇಂದು ಮದುವೆ ಆಗ್ಬೇಕಿದ್ದ ವೈದ್ಯನ ಹತ್ಯೆ ಕೇಸ್‌ – ಚಿನ್ನದ ಆಸೆಗೆ ಸ್ನೇಹಿತನಿಂದಲೇ ಮರ್ಡರ್‌

Public TV
By Public TV
1 hour ago
Mohammed Nalapad
Bengaluru City

ನಲಪಾಡ್ ಮನೆ ಮೇಲೆ ಇಡಿ ದಾಳಿಗೆ ಆ 10 ಲಕ್ಷ ಕಾರಣಾನಾ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?