ಮುಂಬೈ: ಐಪಿಎಲ್‍ಗೆ ಕೊರೊನಾ ಕಾರ್ಮೋಡ ಆವರಿಸುತ್ತಿದೆ. ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ನಡುವಿನ ಪಂದ್ಯಕ್ಕೂ ಮುನ್ನ ಡೆಲ್ಲಿ ತಂಡದ ಕೋಚ್ ರಿಕಿ ಪಾಟಿಂಗ್ ತಂಡದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹಾಗಾಗಿ ಮುಖ್ಯ ಕೋಚ್ ಇಲ್ಲದೆ ಡೆಲ್ಲಿ ತಂಡ ಕಣಕ್ಕಿಳಿಯುತ್ತಿದೆ.
Advertisement
ಡೆಲ್ಲಿ ತಂಡ ಸಹಾಯಕ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಡೆಲ್ಲಿ ತಂಡದೊಂದಿಗಿದ್ದ ಆಟಗಾರರು ಮತ್ತು ಕುಟುಂಬ ಸದಸ್ಯರನ್ನು ಟೆಸ್ಟ್ ಮಾಡಿದಾಗ ಪಾಟಿಂಗ್ ಕುಟುಂಬ ಸದಸ್ಯರಲ್ಲಿ ಕೊರೊನಾ ಪಾಸಿಟಿವ್ ದಾಖಲಾಗಿದೆ. ಹಾಗಾಗಿ ಪಾಟಿಂಗ್ 5 ದಿನ ಐಸೋಲೇಷನ್‍ನಲ್ಲಿ ಇರಲು ನಿರ್ಧರಿಸಿದ್ದು, ಇಂದಿನ ಡೆಲ್ಲಿ ವಿರುದ್ಧದ ಪಂದ್ಯದಿಂದ ಪಾಟಿಂಗ್ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: IPL ಶತಕ ಸಿಡಿಸಿ ಮೆರೆದವರು ಯಾರು – ಇಲ್ಲಿದೆ ಟಾಪ್ 10 ಸಿಕ್ಸರ್ ವೀರರ ಪಟ್ಟಿ
Advertisement
Advertisement
ಡೆಲ್ಲಿ ತಂಡದಲ್ಲಿ ಮೊದಲು ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್‍ಗೆ ಕೊರೊನಾ ಕಾಣಿಸಿಕೊಂಡಿತು. ಆ ಬಳಿಕ ಆಟಗಾರರಾದ ಟಿಮ್ ಸೀಫರ್ಟ್ ಮತ್ತು ಮಿಚೆಲ್ ಮಾರ್ಷ್‍ಗೆ ಕೊರೊನಾ ಕಾಣಿಸಿಕೊಂಡಿತ್ತು. ಹಾಗಾಗಿ ತಂಡದ ಸದಸ್ಯರು ಕೊರೊನಾ ಕಾಟದ ನಡುವೆ ಆಡುತ್ತಿದ್ದಾರೆ. ಕೊರೊನಾ ಬಂದವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಫ್ರಾಂಚೈಸ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪಠಾಣ್ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…
Advertisement
ಡೆಲ್ಲಿ ತಂಡ ಈಗಾಗಲೇ 6 ಪಂದ್ಯಗಳಿಂದ 3 ಸೋಲು, 3 ಗೆಲುವಿನೊಂದಿಗೆ 6 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇಂದಿನ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಮುಖ್ಯ ಕೋಚ್ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್‍ಗಳಾದ ಅಜಿತ್ ಅರ್ಗರ್‍ಕರ್, ಜೇಮ್ಸ್ ಹೋಪ್, ಪ್ರವೀಣ್ ಆಮ್ರೆ ಮತ್ತು ಶೇನ್ ವಾಟ್ಸನ್ ನೇತೃತ್ವದಲ್ಲಿ ತಂಡ ಮೈದಾನಕ್ಕಿಳಿಯಲಿದೆ.