Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರೋದನ್ನ ಸಾಕ್ಷೀಕರಿಸುತ್ತಿದೆ: ವಿಜಯೇಂದ್ರ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರೋದನ್ನ ಸಾಕ್ಷೀಕರಿಸುತ್ತಿದೆ: ವಿಜಯೇಂದ್ರ ಕಿಡಿ

Bengaluru City

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರೋದನ್ನ ಸಾಕ್ಷೀಕರಿಸುತ್ತಿದೆ: ವಿಜಯೇಂದ್ರ ಕಿಡಿ

Public TV
Last updated: January 17, 2025 9:54 pm
Public TV
Share
1 Min Read
BY Vijayendra 2
SHARE

ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬೀದರ್‌ ಬಳಿಕ ದಕ್ಷಿಣ ಕನ್ನಡದ ಉಲ್ಲಾಳದಲ್ಲಿ ನಡೆದ ದರೋಡೆ ಪ್ರಕರಣ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯೇಂದ್ರ ಎಕ್ಸ್‌ನಲ್ಲಿ ಏನಿದೆ?
ರಾಜ್ಯದ ಗಡಿ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡು ಜಾಲವೊಂದು ವ್ಯವಸ್ಥಿತವಾಗಿ ಬೀದರ್ ಬಳಿಕ ದಕ್ಷಿಣ ಕನ್ನಡದ ಉಲ್ಲಾಳದಲ್ಲೂ ಹಾಡು ಹಗಲೇ ಬಂದೂಕು ತೋರಿಸಿ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನ ಲೂಟಿಮಾಡಿರುವ ಘಟನೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ.

ಕರ್ನಾಟಕವೆಂದರೆ ಮಾಫಿಯಾಗಳು, ಅತ್ಯಾಚಾರಿಗಳು, ಡಕಾಯಿತರು ಹಾಗೂ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎಂಬ ಸಂದೇಶ ರವಾನೆಯಾಗುತ್ತಿರುವುದು ಕಾಂಗ್ರೆಸ್‌ ಸರ್ಕಾರದ ಆಡಳಿತದ ಕೆಟ್ಟ ವೈಫಲ್ಯದ ಫಲವಾಗಿದೆ.

‘ಸಿರಿನಾಡು ಕರ್ನಾಟಕ ಇರಿಯುವ ರಕ್ಕಸರ ತವರೂರಾಗುತ್ತಿದೆ, ಕ್ರಿಮಿನಲ್ ಕರ್ನಾಟಕ ಎಂಬ ಅಪಕೀರ್ತಿ ಪಡೆದುಕೊಳ್ಳುತ್ತಿದೆ’ ಎಂಬ ಆತಂಕ ಜನರನ್ನು ಕಾಡುತ್ತಿದೆ. ಒಂದರಮೇಲೊಂದು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಅತ್ಯಾಚಾರ, ಗುಂಡಾಗಿರಿ, ಕೊಲೆ, ದರೋಡೆ ಮೊದಲಾದ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತದಲ್ಲಿ ಜನತೆ ಆತಂಕದಿಂದ ಬದುಕುವಂತಾಗಿದೆ. ತಮ್ಮ ಹಣ ಚಿನ್ನ ಹಾಗೂ ಇತರ ಆಸ್ತಿಗಳಿಗೆ ಬ್ಯಾಂಕ್ ಸುರಕ್ಷಿತ ಎಂಬ ಭಾವನೆ ಕುಸಿಯುತ್ತಿದೆ.

ಬ್ಯಾಂಕುಗಳಿಗೇ ರಕ್ಷಣೆ ನೀಡಲಾಗದ ಸರ್ಕಾರ ಜನಸಾಮಾನ್ಯರ ಪ್ರಾಣ ಹಾಗೂ ಆಸ್ತಿಗೆ ರಕ್ಷಣೆ ನೀಡಲು ಸಾಧ್ಯವೇ ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ಗೃಹ ಇಲಾಖೆಯ ಮೇಲೆ ನಿಯಂತ್ರಣ ಸಾಧಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಜನರಲ್ಲಿ ರಕ್ಷಣೆಯ ಅಭಯ ನೀಡುವ ಹೆಜ್ಜೆಗಳನ್ನಿಡಲೇಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ನಿಷ್ಕ್ರಿಯತೆ ಹಾಗೂ ಉದಾಸೀನತೆಯನ್ನು ಮುಂದುವರೆಸಿದರೆ ಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

TAGGED:bank robberybjpBY VijayendraCongress GovernmentMangaluruಕಾಂಗ್ರೆಸ್ ಸರ್ಕಾರಬಿಜೆಪಿಬ್ಯಾಂಕ್ ದರೋಡೆಮಂಗಳೂರುವಿಜಯೇಂದ್ರ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
31 minutes ago
Donald Trump USA India Relationship
Latest

ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

Public TV
By Public TV
2 hours ago
Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
2 hours ago
TAMILUNADU ELECTION
Latest

ತಮಿಳುನಾಡು ಇತಿಹಾಸದಲ್ಲೇ ದಾಖಲೆ ಬರೆದ ಮತದಾರ – 89.69% ರಷ್ಟು ಮತದಾನ

Public TV
By Public TV
3 hours ago
ELEPHANT ATTACK
Chikkamagaluru

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
3 hours ago
West Bengal voting
Latest

ಬಂಗಾಳದಲ್ಲಿ ದಾಖಲೆ – ಅತಿ ಹೆಚ್ಚು ಮತದಾರರು ಡಿಲೀಟ್ ಆದ ಕ್ಷೇತ್ರದಲ್ಲಿ ಹೆಚ್ಚು ವೋಟಿಂಗ್‌!

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?