– ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತೆ ಎಂದ ಶಾಸಕ
ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಛತ್ತಿಸ್‌ಗಢ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದೆ. ಈ ಮೂಲಕ ಅಕ್ಕಿ ಖರೀದಿಯಲ್ಲೂ ಕಮಿಷನ್ ಹೊಡೆಯುವ ಹುನ್ನಾರ ನಡೆಸಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಪ್ರಮುಖ ನಾಯಕರಾದ ಆರ್. ಅಶೋಕ್, ವಿಜಯೇಂದ್ರ, ಅಶ್ವಥ್ ನಾರಾಯಣ್ ಅವರಿಂದು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಿವಕುಮಾರ್ ಅಣ್ಣ.. ಭರವಸೆ ಕೊಟ್ಟಿರೋದು ನೀವು, ಮೋದಿ ಅಲ್ಲ: ಅಶೋಕ್ ಕಿಡಿ
Advertisement
Advertisement
ಈ ವೇಳೆ ಶಾಸಕ ವಿಜಯೇಂದ್ರ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರ (Union Government) 5 ಕೆಜಿ ಕೊಡ್ತಿದೆ. ಉಳಿದ 5 ಕೆಜಿ ಅಕ್ಕಿಯನ್ನ ಬೇರೆ ಕಡೆ ಖರೀದಿ ಮಾಡಬಹುದು. ಛತ್ತೀಸ್‌ಗಢ, ಹರಿಯಾಣ, ತೆಲಂಗಾಣದಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ಇದರಲ್ಲಿ ಕಮೀಷನ್ ಹೊಡೆಯುವ ಹುನ್ನಾರ ಇದೆ. ನಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡಿದ್ರೆ ರೈತರಿಗೂ ಅನುಕೂಲವಾಗುವುದಿಲ್ಲವೇ? ಕಮಿಷನ್ ಹೊಡೆಯೋ ಉದ್ದೇಶವಿರೋಧಕ್ಕೆ ಬೇರೆ ರಾಜ್ಯದಿಂದ ಖರೀದಿ ಮಾಡೋಕೆ ಮುಂದಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
Advertisement
Advertisement
ಕಾಂಗ್ರೆಸ್ ಧೋರಣೆ ನೋಡಿದ್ರೆ ನಮಗೆ ಬಹುಮತ ಬಂದಿದೆ, ನಾವು ಖುಷಿ ಬಂದ ಹಾಗೆ ಆಡಳಿತ ಮಾಡ್ತೀವಿ. ಆನೆ ನಡೆದಿದ್ದೇ ದಾರಿ ಅಂತಾ ನಡೆಯುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ರು. ವಾಸ್ತವಿಕತೆ ಈಗ ಅವರಿಗೆ ಅರ್ಥ ಆಗ್ತಿದೆ. ಬಹುಶಃ ಗ್ಯಾರಂಟಿ ಕಾರ್ಡ್ ಕೊಡುವಾಗ ಕಾಂಗ್ರೆಸ್ ಬಹುಮತ ಪಡೆಯುತ್ತೇ ಅಂದುಕೊಂಡಿರಲಿಲ್ಲ. ಅದಕ್ಕಾಗಿ ಮನಸೋ ಇಚ್ಚೆ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಪೀಕಲಾಟ ಶುರುವಾಗಿದ್ದು, ಗ್ಯಾರಂಟಿ ಜಾರಿ ಮಾಡೋದು ಅಸಾಧ್ಯ ಅನ್ನೋದು ಸಿಎಂಗೆ ಮನವರಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಎಳಸು ಅಂದ್ರೆ ಬೇಸರವಿಲ್ಲ, ಚೈಲ್ಡ್ ಆಗಿಯೇ ಪ್ರಶ್ನೆ ಕೇಳ್ತೀನಿ – ಪ್ರತಾಪ್ ಸಿಂಹ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ (Congress Guarantee) ಜಾರಿ ಮಾಡೋದಕ್ಕೆ ಆಗ್ತಿಲ್ಲ. ಅದಕ್ಕಾಗಿ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನ ರದ್ದು ಮಾಡಿ, ಜನರ ಗಮನ ಬೇರೆಡೆಗೆ ಸೆಳೆಯಲು ಮುಂದಾಗಿದ್ದಾರೆ. ಕುಣಿಯೋದಕ್ಕೆ ಬಾರದವರು ನೆಲ ಡೊಂಕು ಅಂದ ಹಾಗೆ ಕಾಂಗ್ರೆಸ್ ವರ್ತನೆ ಇದೆ ಲೇವಡಿ ಮಾಡಿದ್ದಾರೆ.
ಬಿಎಸ್‌ವೈ ಗುಡುಗಿದ್ರೆ, ವಿಧಾನಸೌಧ ನಡುಗುತ್ತೆ:
ಕಾಂಗ್ರೆಸ್‌ನವರು ಬಹುಮತ ಇದೆ ಅಂತಾ ಏನು ಬೇಕಾದ್ರು ಮಾಡಬಹುದು ಅಂದುಕೊಳ್ಳಬೇಡಿ. ಯಡಿಯೂರಪ್ಪ ಹೋರಾಟ ಮಾಡಿದ ಪಕ್ಷ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅಂತಾ ಹೋರಾಟ ಮಾಡಿದ್ರು. ನಿಮಗೆ ಗ್ಯಾರಂಟಿ ಕೊಡೋದಕ್ಕೆ ಆಗ್ಲಿಲ್ಲ ಅಂದ್ರೆ ಜನರ ಮುಂದೆ ಕ್ಷಮೆ ಕೇಳಿ, ಅದು ಬಿಟ್ಟು ಬಿಜೆಪಿ, ಕೇಂದ್ರದ ಮೇಲೆ ಗೂಬೆ ಕೂರಿಸಬೇಡಿ.
ಮೊದಲು ಹೇಳಿದಂತೆ ಯಾವುದೇ ಷರತ್ತುಗಳಿಲ್ಲದೇ ಗ್ಯಾರಂಟಿಗಳನ್ನ ಕಾಂಗ್ರೆಸ್ ಜಾರಿಗೊಳಿಸಬೇಕು. ಇಲ್ಲದಿದ್ದರೆ, ನಮ್ಮ ಪಕ್ಷದಲ್ಲೂ ಹಾಲಿ 66 ಶಾಸಕರು ಇದ್ದೇವೆ, ದೊಡ್ಡ ಹೋರಾಟ ಮಾಡ್ತೀವಿ. ಜೂನ್ 19ರಂದೇ ಸಭೆ ಮಾಡಿ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರ ಆರೋಪ:
* ಟಿಪ್ಪು ಯುಗ ಸ್ಥಾಪನೆ ಮಾಡೋ ಕೆಲಸ ಕಾಂಗ್ರೆಸ್ ಮತ್ತೆ ಶುರು ಮಾಡಿದೆ.
* ಮತಾಂತರ ರಾಯಭಾರಿ ಆಗೋಕೆ ಕಾಂಗ್ರೆಸ್ ಹೊರಟಿದೆ
* ಮತಾಂತರ ಬ್ರ‍್ಯಾಂಡ್ ಅಂಬಾಸಿಡರ್ ಆಗೋಕೆ ಕಾಂಗ್ರೆಸ್ ಮುಂದಾಗಿದೆ.
* 35 ಲಕ್ಷಕ್ಕೂ ಹೆಚ್ಚು ಹಿಂದೂಗಳೂ ಆಮಿಷಕ್ಕೆ ಮತಾಂತರ ಆಗಿರೋ ಮಾಹಿತಿ ಇದೆ.
* ಯಾರಿಗಾಗಿ ಮತಾಂತರ ಕಾಯ್ದೆ ತರುತ್ತಿದ್ದಾರೆ? ಅಂಬೇಡ್ಕರ್, ಗಾಂಧಿಯವರು ಮತಾಂತರಕ್ಕೆ ವಿರೋಧ ಮಾಡಿದ್ರು