ತುಮಕೂರು: ಖಾಸಗಿ ಬಸ್ಸೊಂದು ಅರ್ಧ ದಾರಿಯಲ್ಲಿಯೇ ಕೆಟ್ಟು ನಿಂತಿದ್ದು, ಪರಿಣಾಮ ಪ್ರಯಾಣಿಕರು ಪರದಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ.
ಕೊಪ್ಪಳದಿಂದ ಬೆಂಗಳೂರಿಗೆ ಮೀನಾಕ್ಷಿ ಟ್ರಾವೆಲ್ಸ್ ಬಸ್ ಬರುತ್ತಿತ್ತು. ಆದರೆ ಬಸ್‍ನ ಡೀಸೆಲ್ ಪೈಪ್ ಕಟ್ಟಾಗಿ ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಕೆಟ್ಟು ನಿಂತಿದೆ. ಮುಂಜಾನೆ 5 ಗಂಟೆಗೆ ಬೆಂಗಳೂರು ಸೇರಬೇಕಿದ್ದ ಬಸ್ ಇನ್ನೂ ತುಮಕೂರು ರಸ್ತೆಯಲ್ಲೇ ನಿಂತಿದೆ.
Advertisement
Advertisement
ಈ ಬಸ್ಸಿನಲ್ಲಿ ಸುಮಾರು 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್ಸಿನಲ್ಲಿ ಬಹುತೇಕ ರೋಗಿಗಳೇ ಪ್ರಯಾಣ ಮಾಡುತ್ತಿದ್ದರು. ಇದರಿಂದ ಕಿದ್ವಾಯಿ ಆಸ್ಪತ್ರೆಗೆ ತೆರಳಿಬೇಕಿದ್ದ ರೋಗಿಗಳು ಕಣ್ಣೀರಾಕಿದ್ದಾರೆ. ಇತ್ತ ಚಾಲಕ ಬಸ್ ತೊಂದರೆಯಾಗುತ್ತದೆ ಎಂದು ಯಾರಿಗೂ ಗೊತ್ತಿರಲ್ಲ. ಹೀಗಾಗಿ ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾನೆ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದರು.
Advertisement
ಕೊನೆಗೆ ಕೆಲವು ಪ್ರಯಾಣಿಕರು ತಮ್ಮ ಹಣವನ್ನು ಹಿಂಪಡೆದು ಬೇರೆ ಬಸ್ಸಿಗೆ ಹೋಗಿದ್ದಾರೆ. ಉಳಿದ ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಈಗ ಎಲ್ಲ ಪ್ರಯಾಣಿಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.