ಮುಂಬೈ: ಬಾಲಿವುಡ್ನ ಫೇಮಸ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿಯ ಫೋಟೋ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರೆಮೋ ಹೆಂಡತಿ ಲಿಸೆಲ್ ಡಿಸೋಜಾ ಅವರು ಗುರುತು ಸಿಗದ ರೀತಿಯಲ್ಲಿ ಬದಲಾಗಿದ್ದಾರೆ.
View this post on Instagram
ಲಿಸೆಲ್ ಬರೋಬ್ಬರಿ 105 ಕೆಜಿ ಇದ್ದರು. ಈಗ ಅವರು 65 ಕೆಜಿ ಆಗಿದ್ದಾರೆ. ಹೀಗೆ 40 ಕೆಜಿ ತೂಕ ಕಡಿಮೆ ಮಾಡಿಕೊಂಡಿರುವುದು ಸಣ್ಣ ಮಾತಲ್ಲ. ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ತುಂಬ ಪರಿಶ್ರಮ ಬೇಕಾಗುತ್ತದೆ. ಈ ದೊಡ್ಡ ಹೋರಾಟ ನಡೆಯುವುದು ನಮ್ಮ ಮನಸ್ಸಿನ ಒಳಗೆ ಆಗಿದೆ. ಈ ರೀತಿ ಲಿಸೆಲ್ ಹೋರಾಡಿದ್ದನ್ನು ನಾನು ಕಂಡಿದ್ದೇನೆ. ಅಸಾಧ್ಯವಾಗಿದ್ದನ್ನು ಆಕೆ ಸಾಧಿಸಿ ತೋರಿಸಿದ್ದಾಳೆ. ಇದೆಲ್ಲವೂ ಮನಸ್ಸಿಗೆ ಸಂಬಂಧ ಪಟ್ಟಿದ್ದಾಗಿದೆ. ನೀನು ಸಾಧಿಸಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಆಗುತ್ತದೆ. ನೀನು ನನಗಿಂತಲೂ ಗಟ್ಟಿಯಾಗಿದ್ದೀಯ. ನನಗೆ ನೀನೇ ಸ್ಫೂರ್ತಿ ಎಂದು ಹೆಂಡತಿಗೆ ರೆಮೋ ಮೆಚ್ಚುಗೆ ಸೂಚಿಸಿ ಟ್ರಾನ್ಸ್ ಫಾರ್ಮೇಷನ್ ಫೋಟೋವನ್ನು ಹಂಚಿಕೊಂಡು ಪತ್ನಿಯ ಕುರಿತಾಗಿ ರೆಮೋ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್ನಲ್ಲಿ ಬ್ರೋ ಗೌಡ ಫುಲ್ ಮಿಂಚಿಂಗ್
View this post on Instagram
ಲಿಸೆಲ್ ಡಿಸೋಜಾ ಭಾರಿ ಪ್ರಮಾಣದಲ್ಲಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ಬದಲಾವಣೆ ಕಂಡು ಸ್ವತಃ ರಿಮೋ ಡಿಸೋಜಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೆಂಡತಿಯ ಈ ಬದ್ಧತೆ ಮತ್ತು ಪರಿಶ್ರಮಕ್ಕೆ ಅವರು ಹ್ಯಾಟ್ಸ್ಆಫ್ ಹೇಳಿದ್ದಾರೆ. ಲಿಸೆಲ್ ಅವರು ಪತಿ ನೀಡಿದ ಬೆಂಬಲಕ್ಕೆ ಲಿಸೆಲ್ ಧನ್ಯವಾದ ಹೇಳಿದ್ದಾರೆ. ಸದ್ಯ ರೆಮೋ ಪತ್ನಿಯ ಫೋಟೋಗಳು ವೈರಲ್ ಆಗುತ್ತಿದೆ. ಈ ಟ್ರಾನ್ಸ್ ಫಾರ್ಮೇಷನ್ ಹಿಂದಿನ ಸೀಕ್ರೆಟ್ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ.