ಸಾವಿರಾರು ನಮ್ಮ ಮತದಾರರ ಹೆಸರು ಕಾಣೆಯಾಗಿದೆ: ಸಂಜಯ್‌ ರಾವತ್‌

1 Min Read

ಮುಂಬೈ: ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದ್ದು ಇವಿಎಂ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಉದ್ದವ್‌ ಶಿವಸೇನೆ ಬಣದ (UBT) ನಾಯಕ ಸಂಜಯ್ ರಾವತ್ (Sanjay Raut) ಆರೋಪ ಮಾಡಿದ್ದಾರೆ.

ಬೃಹನ್‌ಮುಂಬೈ ಮಹಾನಗರಪಾಲಿಕೆ ಚುನಾವಣೆಯ (Mumbai BMC Election) ಮತ ಎಣಿಕೆ ನಡೆಯುತ್ತಿರುವ ಸಮಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂಬೈನಂತಹ ನಗರದಲ್ಲಿ ನಡೆಯುತ್ತಿರುವ ಮತದಾನದ ಮಾದರಿ ಗಂಭೀರ ವಿಷಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ, ಎಂಎನ್‌ಎಸ್‌, ಕಾಂಗ್ರೆಸ್‌ಗೆ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದೆ ಎಂದು ದೂರಿದರು. ಇದನ್ನೂ ಓದಿ: ಮುಂಬೈ ಪಾಲಿಕೆ ಚುನಾವಣೆ – ಮಹಾಯುತಿಗೆ ಭಾರೀ ಮುನ್ನಡೆ, ಉದ್ದವ್‌ ಕೋಟೆ ಛಿದ್ರ?

ಇವಿಎಂ ಯಂತ್ರ ಸರಿಯಾಗಿ ಕೆಲಸ ಮಾಡುವುದಿಲ್ಲ. ಚುನಾವಣಾ ಆಯೋಗ ನಮ್ಮ ಮಾತನ್ನು ಕೇಳಲು ಸಿದ್ಧವಾಗಿಲ್ಲ. ನಿನ್ನೆ ಹಿರಿಯ ಬಿಜೆಪಿ ನಾಯಕರು ಮತ್ತು ಚುನಾವಣಾ ಆಯೋಗದ ಸಿಬ್ಬಂದಿ ನಡುವೆ ಸಭೆ ನಡೆದಿದೆ. ನೀತಿ ಸಂಹಿತೆ ಇನ್ನೂ ಜಾರಿಯಲ್ಲಿರುವಾಗ ಈ ಸಭೆ ಹೇಗೆ ನಡೆದಿದೆ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: BMC Exit Polls | ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಬಹುಮತ – ಕಾಂಗ್ರೆಸ್‌ಗೆ ಹೀನಾಯ ಸೋಲು!
ಚುನಾವಣೆ ಪೂರ್ಣಗೊಳ್ಳುವ ಮೊದಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದವು. ಬಿಜೆಪಿ ಆಗಲೇ ತನ್ನ ವಿಜಯವನ್ನು ಆಚರಿಸಲು ಪ್ರಾರಂಭಿಸಿತು ಎಂದು ಕಿಡಿಕಾರಿದರು.
Share This Article