ಚಾಮರಾಜನಗರ: ವನ್ಯಜೀವಿಗಳ ಸಾಂದ್ರತೆ ಹೆಚ್ಚಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.
Advertisement
ಹೊಳೆಮತ್ತಿ ನೇಚರ್ ಫೌಂಡೇಷನ್‍ನ ಡಾ.ಸಂಜಯ್ ಗುಬ್ಬಿ ತಂಡದವರು ಚಿರತೆ ಅಧ್ಯಯನಕ್ಕೆ ನಡೆಸಿದ್ದ ಕ್ಯಾಮೆರಾ ಟ್ರ್ಯಾಪ್‍ನಲ್ಲಿ ಚಿರತೆ ಗೋಚರವಾಗಿದೆ. ಈ ಮುನ್ನ 2020ರ ಡಿಸೆಂಬರ್ ಇದೇ ಗಂಡು ಚಿರತೆ ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಈ ಚಿರತೆಗೆ 6 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು
Advertisement
Advertisement
ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವೆ 1.6 ಕಿ.ಮೀ ಅಗಲದ ವನ್ಯಜೀವಿ ಕಾರಿಡಾರ್ ಇದೆ. ಈ ಎರಡೂ ವನ್ಯಧಾಮಗಳಲ್ಲಿ ಈ ಚಿರತೆಯ ಚಲನವಲನ ದಾಖಲಾಗಿರುವುದು ಈ ಕಾರಿಡಾರ್‍ನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ವನ್ಯಜೀವಿ ಕಾರಿಡಾರ್‍ನನ್ನು ಸಂರಕ್ಷಿಸುವಂತೆ ವನ್ಯ ಜೀವಿ ತಜ್ಞರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಫ್ರೆಂಡ್ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು