Bengaluru CityCrimeDistrictsKarnatakaLatestLeading NewsMain Post
ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

ಬೆಂಗಳೂರು: ಸಿಲಿಕಾನ್ ಸಿಟಿಯಿಂದ ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅವಘಡವೊಂದು ನಡೆದಿದೆ.
ಫುಡ್‍ಕೋರ್ಟ್‍ನಲ್ಲಿ ಊಟ ಮುಗಿಸಿ ಐದನೇ ಮಹಡಿಯಿಂದ ಮೆಟ್ಟಿಳಿಯುವಾಗ ಯುವತಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಕೆಯನ್ನು ರಕ್ಷಿಸುವ ಭರದಲ್ಲಿ ಗೆಳೆಯನೂ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಯುವತಿ ಲಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಪೀಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಫ್ರೆಂಡ್ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು
ಮೃತಪಟ್ಟ ಯುವತಿಯ ರಕ್ತದ ಮಾದರಿಯನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗಿದೆ. ಮಾಲ್‍ನಲ್ಲೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಯುವಕ ಯುವತಿ ಜೊತೆ ಬಂದಿದ್ದ ಸ್ನೇಹಿತರಿಂದಲೇ ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ಸಂಬಂಧ ಮೃತ ಯುವತಿ ಲಿಯಾ ತಾಯಿ ಆಕಸ್ಮಿಕ ಸಾವು ಎಂದು ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇಂದು ಯುವತಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.