ಬೆಂಗಳೂರು ಗ್ರಾಮಾಂತರ: ಗೆಲುವಿನ ಭರವಸೆಯಲ್ಲಿದ್ದ ಡಿಕೆ ಸಹೋದರರಿಗೆ ಬೆಂಗಳೂರು ಗ್ರಾಮಾಂತರ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಜನಪ್ರಿಯರಾಗಿರುವ ಡಾ. ಮಂಜುನಾಥ್ (Dr.Manjunath) ಅವರಿಗೆ ಗೆಲುವಿನ ಸಿಹಿ ನೀಡಿದ್ದಾರೆ.
ಪ್ರಭಾವಿಗಳಾದ ಡಿಕೆ ಬ್ರದರ್ಸ್ ಮಣಿಸುವುದು ಸುಲಭದ ಮಾತಾಗಿರಲಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸಹೋದರ ಡಿ.ಕೆ.ಸುರೇಶ್ (D.K.Suresh) ಗೆದ್ದೇ ಬಿಡುತ್ತಾರೆ. ಮಂಜುನಾಥ್ ಅವರನ್ನು ಹರಕೆಯ ಕುರಿ ಮಾಡಲಾಗಿದೆ ಎಂದೇ ಬಿಂಬಿಸಲಾಗಿತ್ತು. ಆದರೆ ಫಲಿತಾಂಶವು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ತುಕಾರಂ ʼಕೈʼ ಹಿಡಿದ ಬಳ್ಳಾರಿ ಜನ – ಶ್ರೀರಾಮುಲುಗೆ ಸೋಲು
Advertisement
Advertisement
ಡಾಕ್ಟರ್ ಮಂಜುನಾಥ್ ಅವರು ಒಟ್ಟು 10,79,002 ಹಾಗೂ ಡಿ.ಕೆ.ಸುರೇಶ್ 8,09,355 ಮತಗಳನ್ನು ಪಡೆದರು. ಡಾಕ್ಟರ್ ಬರೋಬ್ಬರಿ 2,69,647 ಮತಗಳ ಅಂತರದಿಂದ ಹಾಲಿ ಸಂಸದರನ್ನು ಪರಾಭವಗೊಳಿಸಿದ್ದಾರೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಡಿ.ಕೆ.ಸುರೇಶ್‌ಗೆ ನಿರಾಸೆಯಾಗಿದೆ. ಇದನ್ನೂ ಓದಿ: ಮೈತ್ರಿ ಅಭ್ಯರ್ಥಿ ಎಂದಲ್ಲ, ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿದ್ದಾರೆ: ಕೆ.ಸುಧಾಕರ್
Advertisement
ಯಾವ ಕ್ಷೇತ್ರದಲ್ಲಿ ಎಷ್ಟು ಮತ?
Advertisement
ರಾಮನಗರ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 91,945
ಡಿ.ಕೆ.ಸುರೇಶ್- 92,090
ಕ್ಷೇತ್ರದ ಲೀಡ್- 145 (ಕಾಂಗ್ರೆಸ್)
ಮಾಗಡಿ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 1,13,911
ಡಿ.ಕೆ.ಸುರೇಶ್- 83,938
ಕ್ಷೇತ್ರದ ಲೀಡ್- 29,973 (ಬಿಜೆಪಿ)
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 1,06,971
ಡಿ.ಕೆ.ಸುರೇಶ್- 85,357
ಕ್ಷೇತ್ರದ ಲೀಡ್- 21,614 (ಬಿಜೆಪಿ)
ಕನಕಪುರ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 83,303
ಡಿ.ಕೆ.ಸುರೇಶ್- 1,08,980
ಕ್ಷೇತ್ರದ ಲೀಡ್- 25,677 (ಕಾಂಗ್ರೆಸ್)
ಕುಣಿಗಲ್ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 97,248
ಡಿ.ಕೆ.ಸುರೇಶ್- 73,410
ಕ್ಷೇತ್ರದ ಲೀಡ್- 23,838 (ಬಿಜೆಪಿ)
ಆನೇಕಲ್ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 1,37,693
ಡಿ.ಕೆ.ಸುರೇಶ್- 1,15,328
ಕ್ಷೇತ್ರದ ಲೀಡ್- 22,365 (ಬಿಜೆಪಿ)
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 2,55,756
ಡಿ.ಕೆ.ಸುರೇಶ್- 1,58,627
ಕ್ಷೇತ್ರದ ಲೀಡ್- 97,129 (ಬಿಜೆಪಿ)
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ
ಡಾ.ಮಂಜುನಾಥ್- 1,88,726
ಡಿ.ಕೆ.ಸುರೇಶ್- 89,729
ಕ್ಷೇತ್ರದ ಲೀಡ್- 98,997 (ಬಿಜೆಪಿ)