ಬಳ್ಳಾರಿ: ಕಾಂಗ್ರೆಸ್ ಅಭ್ಯರ್ಥಿ ತುಕಾರಂ (Tukaram) ಅವರು ಬಿಜೆಪಿಯ ಶ್ರೀರಾಮುಲು (Sriramulu) ವಿರುದ್ಧ 98 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ.
ತುಕರಾಂ ಅವರಿಗೆ 7,30,845 ಮತಗಳು ಬಿದ್ದರೆ ಶ್ರೀರಾಮುಲು ಅವರಿಗೆ 6,31,853 ಮತಗಳು ಬಿದ್ದಿವೆ. ಇದನ್ನೂ ಓದಿ: ಮೈತ್ರಿ ಅಭ್ಯರ್ಥಿ ಎಂದಲ್ಲ, ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಿದ್ದಾರೆ: ಕೆ.ಸುಧಾಕರ್
Advertisement
Advertisement
2019ರಲ್ಲಿ ಬಿಜೆಪಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿತ್ತು. ದೇವೇಂದ್ರಪ್ಪ 6,01,388 ಮತಗಳು ಪಡೆದರೆ ಉಗ್ರಪ್ಪ 5,75,681 ಮತಗಳನ್ನು ಪಡೆದಿದ್ದರು.
Advertisement
2014ರ ಚುನಾವಣೆಯಲ್ಲಿ ಶ್ರೀರಾಮುಲು 85 ಸಾವಿರ ಮತಗಳಿಂದ ಜಯಗಳಿಸಿದ್ದರು. ಶ್ರೀರಾಮುಲು 5,34,406 ಮತಗಳನ್ನು ಪಡೆದರೆ ಕಾಂಗ್ರೆಸ್ ಎನ್‌ವೈ ಹನುಮಂತಪ್ಪ 4,49,262 ಮತಗಳನ್ನು ಪಡೆದಿದ್ದರು.