ಚಿಕ್ಕೋಡಿ (ಬೆಳಗಾವಿ): ಹಿಂದೂ ಸಮಾಜವನ್ನು ಅಶ್ಲೀಲ ಎಂದು ಹೇಳಿರುವ ಸತೀಶ್ ಜಾರಕಿಹೋಳಿ (Sathish Jarakiholi) , ತಾಕತ್ತಿದ್ದರೆ ಹಿಂದೂ ಮತಗಳು ಬೇಡ ಅಂತ ಹೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಸವಾಲ್ ಹಾಕಿದ್ದಾರೆ.
Advertisement
ಬೆಳಗಾವಿ ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದ ಬಸ್ಸಾಪೂರ ಗ್ರಾಮದಲ್ಲಿ ನಡೆದ ಬಿಜೆಪಿ (BJP) ವಿಜಯ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಯಾವ ಹಿಂದೂ ಸಮಾಜವನ್ನು ಅಶ್ಲೀಲ ಸಮಾಜ ಅಂತ ಹೇಳಿದ್ದಾರೆಯೋ, ಅವರು ತಾಕತ್ತಿದ್ದರೆ ಹಿಂದೂ (Hindu Vote) ಮತಗಳು ಬೇಡ ಅಂತ ಹೇಳಲಿ. ಹಿಂದೂ ಸಮಾಜ ಎದ್ದು ನಿಂತಿದೆ. ಯಾವ ಕ್ಷೇತ್ರದಲ್ಲಿಯೂ ಅವರು ನಿಲ್ಲಲಾಗುವುದಿಲ್ಲ. ಯಮಕನಮರಡಿ ಮತಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಚಲನವಲನದ ಮೇಲೆ ಗುಪ್ತಚರ ಇಲಾಖೆ ಕಣ್ಣು
Advertisement
Advertisement
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ್ ನೇರಲಿ, ಮಾಜಿ ಸಚಿವ ಶಶಿಕಾಂತ್ ನಾಯಿಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಮಾತನಾಡಿದರು. ಯಮಕನಮರಡಿ ಉತ್ತರಮಂಡಲ ಬಿಜೆಪಿ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ಸತೀಶ್ ಅಪ್ಪಾಜಿ, ಕರಕುಶಲ ಅಭಿವೃದ್ದಿ ನಿಗಮ ಅಧ್ಯಕ್ಷ ಮಾರುತಿ ಅಷ್ಟಗಿ, ಚಿಕ್ಕೋಡಿ ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಬಸವರಾಜ್ ಹುಂದ್ರಿ, ಶಿವಾನಂದ್ ಮಸಗುಪ್ಪಿ, ಹುಕ್ಕೇರಿ ಕೆಇಬಿ ಅಧ್ಯಕ್ಷ ಕಲಗೌಡ ಪಾಟೀಲ್, ಸಿದ್ದಲಿಂಗ ಸಿದ್ದಗೌಡರ, ಮಹಾರುದ್ರ ಜರಳಿ, ನಿಂಗಪ್ಪಾ ದಾಸ, ಶಿವಾನಂದ ಪಡಗುರೇ, ರಾಮ ಚುರುಮುರೆ, ಶಂಕರಯ್ಯಾ ಗವಿಮಠ, ದಕ್ಷಿಣ ಮಂಡಲ ಅಧ್ಯಕ್ಷ ಅಪ್ಪಯ್ಯಾ ಜಾಜರಿ, ಶಿವಾನಂದ ಮಸಗುಪ್ಪಿ, ಮುರಗೇಶ ಹಿರೇಮಠ, ರಾಜುಗೌಡಾ ಪಾಟೀಲ್ ಮುಂತಾದವರು ಇದ್ದರು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k